ಡಿಕೆಶಿ ಬಳಿ ದುಃಖದಿಂದ ಕಷ್ಟ ಹೇಳಿಕೊಂಡ ಕೆಜಿಎಫ್ ಶಾಸಕಿ ರೂಪಾ ಶಶಿಧರ್!

DKShivakumar
Published on

ಬೆಂಗಳೂರು: ಪೊಲೀಸರು ಎಫ್​​​ಐಆರ್​​ ಹಾಕಿ ನನ್ನನ್ನು ಎ೧ ಮಾಡಿದ್ದಾರೆ. ನಾನು ಕದ್ದುಮುಚ್ಚಿ ಓಡಾಡುವಂತಾಗಿತ್ತು ಎಂದು ಕೆಜಿಎಫ್​ ಶಾಸಕಿ ರೂಪಾ ಶಶಿಧರ್ ಅವರು ಡಿಸಿಎಂ ಡಿ.ಕೆ ಶಿವಕುಮಾರ್​​ ಅವರ ಬಳಿ ಕಷ್ಟ ಹೇಳಿಕೊಂಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷವು ಹೊಸ ಸರ್ಕಾರವನ್ನು ರಚಿಸಿದೆ. ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಸಿ ಪಕ್ಷದ ಬಲವರ್ಧನೆ ಮಾಡಬೇಕಾದ ಯೋಜನೆ ಹಾಗೂ ಹಲವು ವಿಚಾರಗಳ ಕುರಿತಾಗಿ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.

ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ‌ಶಾಸಕಾಂಗ (ಸಿಎಲ್​​ಪಿ) ಸಭೆ ಮುಗಿಸಿ ಬೇರೆ ಶಾಸಕರು ಹೊರಡುವಾಗ, ಡಿಸಿಎಂ ಡಿ. ಕೆ ಶಿವಕುಮಾರ್​ ಅವರು ಮಾತ್ರ ಅಲ್ಲೇ ಕುಳಿತಿದ್ದರು. ಈ ವೇಳೆ ಅವರ ಡಿಕೆಶಿ ಅವರ ಬಳಿ ಕೋಲಾರ (ಕೆಜಿಎಫ್) ಶಾಸಕಿ ರೂಪಾ ಶಶಿಧರ್ ಕಷ್ಟವನ್ನು ಹೇಳಿಕೊಂಡಿದ್ದಾರೆ.

ಕಾರ್ಮಿಕರಿಗೆ ಫುಡ್ ಕಿಟ್ ಕೊಟ್ಟಿದ್ದಕ್ಕೆ ಪೊಲೀಸರು ಎಫ್​​​ಐಆರ್​​ ಹಾಕಿ ನನ್ನನ್ನು ಎ೧ ಮಾಡಿದ್ದಾರೆ. ನಾನು ಕದ್ದುಮುಚ್ಚಿ ಓಡಾಡುವಂತಾಗಿತ್ತು. ಚುನಾವಣಾ ಅಧಿಕಾರಿಗಳ ಮಾತು ಕೇಳಿಕೊಂಡು. ಪೊಲೀಸರು ತುಂಬಾ ಹರಾಸ್ ಮೆಂಟ್ ಮಾಡಿದ್ದಾರೆ ಎಂದು ಡಿಕೆಶಿ ಬಳಿ ಹೇಳಿಕೊಂಡು ಶಾಸಕಿ ರೂಪಾ ಶಶಿಧರ್ ದುಃಖಿತರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net