ಕೆಸರುಗದ್ದೆ ಕ್ರೀಡೆ ತುಳುನಾಡ ಸಂಸ್ಕೃತಿ

kesar
ಮುಂಡ್ಕೂರು ನಮ್ಮ ಫ್ರೆಂಡ್ಸ್‌ನ ವಾರ್ಷಿಕೋತ್ಸವ ಪ್ರಯುಕ್ತ ನಡೆದ ಕೆಸರ‌್ದ ಗೊಬ್ಬುಲು ಕಾರ್ಯಕ್ರಮವದ ಉದ್ಘಾಟಗೊಂಡಿತು. ಮಧ್ವಪತಿ ಆಚಾರ್ಯ, ಅರುಣ್ ರಾವ್, ಮುನಿಯಾಲು ಉದಯ ಕುಮಾರ್ ಶೆಟ್ಟಿ ಇತರರಿದ್ದರು
Published on

ವಿಜಯವಾಣಿ ಸುದ್ದಿಜಾಲ ಕಾರ್ಕಳ

ಕೆಸರು ಗದ್ದೆಯ ಕ್ರೀಡೆಗಳು ತುಳು ಭೂಮಿಯ ಸಂಸ್ಕೃತಿ ಪರಿಚಯಿಸುವಂತಿರಬೇಕು. ಗ್ರಾಮೀಣ ಭಾಗದ ಮಣ್ಣಿನ ಪರಿಮಳವನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವಾದ ಕೆಸರ‌್ದ ಗೊಬ್ಬುಲು ಕಾರ್ಯಕ್ರಮ ಆರ್ಥಪೂರ್ಣ ಎಂದು ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಳ ಅರ್ಚಕ ಮಧ್ವಪತಿ ಆಚಾರ್ಯ ಹೇಳಿದರು.

ಮುಂಡ್ಕೂರಿನ ನಮ್ಮ ಫ್ರೆಂಡ್ಸ್ ವಾರ್ಷಿಕೋತ್ಸವ ಪ್ರಯುಕ್ತ ಮುಂಡ್ಕೂರು, ಮುಲ್ಲಡ್ಕ ಹಾಗೂ ಇನ್ನಾ ಗ್ರಾಮಸ್ಥರಿಗಾಗಿ ನೂಜಿ ಬಳಿಯ ಗದ್ದೆಯಲ್ಲಿ ಭಾನುವಾರ ಕೆಸರ‌್ದ ಗೊಬ್ಬುಲು ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಳ ವ್ಯವಸ್ಥಾಪ್ಞಅ ಸಮಿತಿ ಅಧ್ಯಕ್ಷ ಸುರೇಂದ್ರ ಶೆಟ್ಟಿ ಉದ್ಘಾಟಿಸಿ, ಸಮಾಜಮುಖಿ ಚಿಂತನೆಗಳಿಂದ ಮನೆ ಮಾತಾದ ನಮ್ಮ ಫ್ರೆಂಡ್ಸ್ ಮುಂಡ್ಕೂರು ಗ್ರಾಮೀಣ ಕ್ರೀಡೆಗಳನ್ನು ಸಂಘಟಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ನಮ್ಮ ಫ್ರೆಂಡ್ಸ್ ಅಧ್ಯಕ್ಷ ಅರುಣ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮುಲ್ಲಡ್ಕ ಪರಾರಿ ರವೀಂದ್ರ ಶೆಟ್ಟಿ, ಮುಂಡ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಪ್ಪ ಸಪಳಿಗ, ಜನ್ನೋಜಿ ರಾವ್, ಜಯರಾಮ ಕುಲಾಲ್, ಬೋಳದಗುತ್ತು ಸಂತೋಷ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಕರ್ನಿರೆ, ಸಾಯಿನಾಥ ಶೆಟ್ಟಿ, ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಳದ ವ್ಯವಸ್ಥಾಪ್ಞಅ ಸಮಿತಿ ಸದಸ್ಯೆ ಸುಜಾತ ಸುಭೋಧ ಶೆಟ್ಟಿ, ಶರತ್ ಶೆಟ್ಟಿ, ಸುಧಾಕರ ಕುಲಾಲ್, ಉದಯ ಹೆಗ್ಡೆ, ಶೇಖರ ಶೆಟ್ಟಿ, ಉದಯ ಕುಮಾರ್, ಆನಂದ ಸಾಲ್ಯಾನ್, ಅರುಣ್ ಕುಮಾರ್, ನವನೀತ್, ಪ್ರಮೋದ್ ಕಜೆ, ನಿಶಾಂತ್, ಗುರುತಿಲಕ್ ಮತ್ತಿತರರು ಉಪಸ್ಥಿತರಿದ್ದರು.

ಸಾಧಕರಿಗೆ ಗೌರವಾರ್ಪಣೆ

ಕಂಬಳ ಕ್ಷೇತ್ರದ ಸಾಧಕ ಯಜಮಾನ ಬೋಳದ ಗುತ್ತು ಸತೀಶ್ ಶೆಟ್ಟಿ ಹಾಗೂ ಅವರ ಚಾಂಪಿಯನ್ ಕೋಣಗಳಾದ ಬೊಲ್ಲ ಹಾಗೂ ದೋನಿಯನ್ನು ಸನ್ಮಾಸಲಾಯಿತು. ಜತೆಗೆ ಮುಲ್ಲಡ್ಕ ಪರಾರಿ ರವೀಂದ್ರ ಶೆಟ್ಟಿ ಅವರ ಕೋಣಗಳನ್ನೂ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net