

ಪಡುಬಿದ್ರಿ: ಶುದ್ಧ ಚಾರಿತ್ರೃವುಳ್ಳ ವ್ಯಕ್ತಿಯ ವ್ಯಕ್ತಿತ್ವ ಉನ್ನತ ಮಟ್ಟದಲ್ಲಿ ಇರುತ್ತದೆ. ಪ್ರವಾದಿ ಮುಹಮ್ಮದರ್ ಅವರ ಜೀವನ ಚರಿತ್ರೆ, ಅವರ ಪ್ರಖ್ಯಾತಿ ಇದಕ್ಕೆ ಉದಾಹರಣೆಯಾಗಿದೆ ಎಂದು ನಿವೃತ್ತ ಮುಖ್ಯಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ ಅಭಿಪ್ರಾಯಪಟ್ಟರು. ಜಮಾ ಅತೆ ಇಸ್ಲಾಮಿ ಹಿಂದ್ ಕಾಪು ವರ್ತುಲ ವತಿಯಿಂದ ಸೀರತ್ ಅಭಿಯಾನದ ಅಂಗವಾಗಿ ಕಾಪುವಿನಲ್ಲಿ ‘ಪ್ರವಾದಿ ಮುಹಮ್ಮದ್’ ಲೇಖನ ಸಂಕಲನ ಪುಸ್ತಕ ಬಿಡುಗಡೆ ವಿಚಾರ ಮಂಡನೆ ಸಭೆಯಲ್ಲಿ ಮಾತನಾಡಿದರು.
ಮಣಿಪಾಲ ಎಂಐಟಿ ಪ್ರಾಧ್ಯಾಪಕ ಜಮಾಲುದ್ದಿನ್ ಶುಭಹಾರೈಸಿದರು. ಪ್ರವಾದಿ ಮುಹಮ್ಮದ್ ಲೇಖನ ಸಂಕಲನವನ್ನು ಜಮೀಯತುಲ್ ಫಲಾಹ್ ಕಾಪು ಘಟಕ ಅಧ್ಯಕ್ಷ ಶಬೀಹ್ ಅಹಮದ್ ಖಾಝಿ ಬಿಡುಗಡೆಗೊಳಿಸಿದರು. ಉಡುಪಿ ಜಿಲ್ಲಾ ಜಮಾ ಅತೆ ಇಸ್ಲಾಮಿ ಹಿಂದ್ ಸಂಚಾಲಕ ಅಬ್ದುಲ್ ಅಜಿಜ್ ಉಪಸ್ಥಿತರಿದ್ದರು. ಮುಹಮ್ಮದ್ ಮುಯೀಸ್ ಸ್ವಾಗತಿಸಿದರು. ಅನ್ವರ್ ಅಲಿ ಕಾಪು ವಿಷಯ ಮಂಡಿಸಿದರು. ಮುಹಮ್ಮದ್ ಇಕ್ಬಾಲ್ ಸಾಹೇಬ್ ವಂದಿಸಿದರು. ಅಬ್ದುಲ್ ಖಾಲಿದ್ ಕಾರ್ಯಕ್ರಮ ನಿರೂಪಿಸಿದರು.