

ವಿಜಯವಾಣಿ ಸುದ್ದಿಜಾಲ ಗುರುಪುರ
ಗ್ರಾಮೀಣ ಕ್ರೀಡೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕರಿಯಂಗಳ ಗ್ರಾಮದ ಪುಂಚಮೆಯ ಆಸರೆ ಸೇವಾ ಫೌಂಡೇಶನ್ ಭಾನುವಾರ ಪುಂಚಮೆಯ ಮಿಲಿಟರಿ ಗದ್ದೆಯಲ್ಲಿ ‘ಆಸರೆಡ್ ಕೆಸರ‌್ದ ಗೊಬ್ಬು’ ಆಯೋಜಿಸಿತ್ತು.
ವಾಜಿ ಸಚಿವ ಬಿ.ರವಾನಾಥ ರೈ ಮತ್ತು ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತ, ಬೆಳ್ಳೂರು ಪ್ರಗತಿಪರ ಕೃಷಿಕ ನಿರಂಜನ ಸೇಮಿತ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಬಾಲಚಂದ್ರ ಶೆಟ್ಟಿ ಪಲ್ಲಿಪಾಡಿ, ಚೆನ್ನಪ್ಪ ಪೂಜಾರಿ ಬಡಕಬೈಲು, ಸಾರಮ್ಮ ಕುಟ್ಟಿಕಲ, ವಾಸುದೇವ ವಾಸ್ಟರ್ ಪೊಳಲಿ, ವಾನ್ಯಾ ದೇವಾಡಿಗ ಪೊಳಲಿ, ಗೌರಿ ಬಡಕಬೈಲು, ಕಷ್ಣ ಕುವಾರ್ ಪೂಂಜ ಫರಂಗಿಪೇಟೆ, ಭೂಷಣ್ ಕಲ್ಕುಟ, ತ್ರಿಶಾನ್ ಅಮೀನ್ ಪುಂಚಮೆ ಅವರನ್ನು ಸನ್ಮಾನಿಸಲಾಯಿತು. ಫೌಂಡೇಶನ್‌ನ ಗೌರವಾಧ್ಯಕ್ಷ ರಾಜು ಪಲ್ಲಿಪಾಡಿ ಅಭಿನಂದನಾ ಪತ್ರ ವಾಚಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಗ್ರಾಮದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಅಶಕ್ತರಿಗೆ ಸಹಾಯಧನ, ಅಂಗವಿಕಲರಿಗೆ ಕೃತಕ ಕಾಲು ಒದಗಿಸಲಾಯಿತು.
ಎಂಎಲ್‌ಸಿ ಮಂಜುನಾಥ ಭಂಡಾರಿ, ಕರಿಯಂಗಳ ಗ್ರಾ.ಪಂ. ಅಧ್ಯಕ್ಷೆ ರಾಧಾ, ನಟಿ ಸಪ್ತಾ ಪಾವೂರು, ಕೃಷಿಕ ಚಂದ್ರಪ್ಪ ಕುಲಾಲ್ ಕೊಲ, ಜಿ.ಪಂ. ವಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಮಿಲಿಟರಿ ಗದ್ದೆ ವಾಲೀಕ ಸುಬ್ಬರಾವ್ ಪುಂಚಮೆ, ಭುವನೇಶ್ ಪಚ್ಚಿನಡ್ಕ, ಚಾಲ್ಸ್ ಡಿಸೋಜ, ಬಡಗಬೆಳ್ಳೂರು ವಲಯ ಬಂಟರ ಸಂಘದ ಅಧ್ಯಕ್ಷ ಜನಾರ್ದನ ಶೆಟ್ಟಿ, ಬಡಗಬೆಳ್ಳೂರು ಪಂಚಗ್ರಾಮ ಬಿಲ್ಲವ ಸಂದ ಅಧ್ಯಕ್ಷ ಗಂಗಾಧರ ಪೂಜಾರಿ, ಕಿನ್ನಿಕಂಬಳ ವಿಶ್ವಕರ್ಮ ಸವಾಜದ ಅಧ್ಯಕ್ಷ ಉಮೇಶ್ ಆಚಾರ್ಯ, ಫೌಂಡೇಶನ್‌ನ ಪದಾಧಿಕಾರಿಗಳಾದ ಬಶೀರ್ ಗಾಣೆವಾರು, ರೋಶನ್ ಪುಂಚಮೆ, ಪ್ರಸಾದ್ ಗರೋಡಿ, ಟ್ರಸ್ಟಿಗಳಾದ ರಾಜು ಕೋಟ್ಯಾನ್, ಲಕ್ಷ್ಮೀಶ ಶೆಟ್ಟಿ, ಪ್ರೇಮನಾಥ ಚೇರ, ಮಹಮ್ಮದ್ ಮುಸ್ತಾಫ, ಇಬ್ರಾಹಿಂ ನವಾಝ್, ವೀಣಾ ಯು.ಆಚಾರ್ಯ, ಪ್ರಸಾದ್ ಮತ್ತಿತರರಿದ್ದರು. ಫೌಂಡೇಶನ್‌ನ ಅಧ್ಯಕ್ಷ ಚಂದ್ರಹಾಸ್ ಪಲ್ಲಿಪಾಡಿ ಸ್ವಾಗತಿಸಿದರು. ಕೆ.ಕೆ.ಪೇಜಾವರ ಮತ್ತು ಮನೋಜ್ ವಾಮಂಜೂರು ನಿರೂಪಿಸಿದರು.
ಕೂಟದ ಆಟಗಳು
ಆಸರೆಡ್ ಕೆಸರ‌್ದ ಗೊಬ್ಬು ಕ್ರೀಡಾಕೂಟದಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಕೆಸರುಗದ್ದೆ ಓಟ, ಮಡಕೆ ಒಡೆಯುವುದು, ತಿರುವು ಓಟ, ವಾಲಿಬಾಲ್, ಹಗ್ಗಜಗ್ಗಾಟ, ನಿಧಿ ಶೋಧ, ತಪ್ಪಂಗಾಯಿ, ಕಂಬಕ್ಕೆ ಹತ್ತುವ ಸ್ಪರ್ಧೆ, ತೆಂಗಿನ ಗರಿ ಹೆಣೆೆಯುವುದು, ಅಕ್ಕಿ ಮುಡಿ ಕಟ್ಟುವುದು ಸಹಿತ ಹಲವು ಗ್ರಾಮೀಣ ಆಟಗಳು ಒಳಗೊಂಡಿದ್ದವು. ವಿಜೇತರಿಗೆ ಪ್ರಥಮ ಬಹುವಾನವಾಗಿ 3 ಸೇರು ಅಕ್ಕಿ, ದ್ವಿತೀಯ 2 ಸೇರು ಅಕ್ಕಿ ಮತ್ತು ತೃತೀಯ ಬಹುವಾನ 2 ಸೇರು ಅಕ್ಕಿ ನೀಡಲಾಯಿತು.