

ಮಂಗಳೂರು: ಅನಾರೋಗ್ಯ ಪೀಡಿದ ಗಂಡ, ಕುಸಿಯುವ ಹಂತದಲ್ಲಿದ್ದ ಮನೆ, ಬೀಡಿ ಕಟ್ಟಿ ಬಂದ ಹಣದಿಂದ ಮನೆ ನಿಬಾಯಿಸುವ ಸಂಕಷ್ಟ ಹಾಗೂ ಅಶಕ್ತ ಕುಟುಂಬದ ಜವಾಬ್ದಾರಿ ಹೊತ್ತ ಬೇಬಿ ಪೂಜಾರಿ ಅವರಿಗೆ ಮನೆ ಹಸ್ತಾಂತರ ನಿಜಕ್ಕೂ ಸಂತಸದಾಯಕ ಎಂದು ಮನೆ ನಿರ್ವಾಣದ ಸಂಪೂರ್ಣ ಮೇಲುಸ್ತುವಾರಿ ವಹಿಸಿಕೊಂಡ ಯುವವಾಹಿನಿ ಕೇಂದ್ರ ಸಮಿತಿ ಸವಾಜ ಸೇವಾ ನಿರ್ದೇಶಕ ಜಯರಾಮ ಪೂಜಾರಿ ಬಾಳಿಲ ಹೇಳಿದರು.
ಬೊಂಡಂತಿಲ ಗ್ರಾಮದ ತಾರಿಗುಡ್ಡೆ ನಿವಾಸಿ ಬೇಬಿ ಪೂಜಾರಿ ಕುಟುಂಬಕ್ಕೆ ಯುವವಾಹಿನಿ ಸಂಸ್ಥೆ 6.40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮನೆಯ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಉದ್ಯಮಿ ದಯಾನಂದ ಬಂಗೇರ, ಯುವವಾಹಿನಿ ಕೇಂದ್ರ ಸಮಿತಿ ಸಲಹೆಗಾರ ಡಾ.ಎನ್.ಟಿ.ಅಂಚನ್ ಮನೆ ಹಸ್ತಾಂತರ ಮಾಡಿದರು. ಯುವವಾಹಿನಿ ಕೇಂದ್ರ ಸಮಿತಿಯ ಸಲಹೆಗಾರ ಟಿ.ಎನ್.ಪೂಜಾರಿ ಶುಭ ಹಾರೈಸಿದರು. ಅಧ್ಯಕ್ಷ ಹರೀಶ್ ಕೆ.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಜಗದೀಶ್‌ಚಂದ್ರ ಡಿ.ಕೆ., ಕೋಶಾಧಿಕಾರಿ ಹರೀಶ್ ಪಚ್ಚನಾಡಿ, ಉಪಾಧ್ಯಕ್ಷ ಅಶೋಕ್ ಕುವಾರ್ ಪಡ್ಪು, ಜತೆ ಕಾರ್ಯದರ್ಶಿ ರೇಖಾ ಗೋಪಾಲ್ ಮೊದಲಾದವರಿದ್ದರು.