ಕೃಷಿಯಿಂದ ಬದುಕು ಕಟ್ಟಿಕೊಳ್ಳುವವರ ಸಂಖ್ಯೆ ಇಳಿಮುಖ : ರಾಜೇಶ್ ಶೆಟ್ಟಿ ಭಂಡಾರಮನೆ ಕಳವಳ

New Project (21)
Published on

ಕಿನ್ನಿಗೋಳಿ: ಯುವಜನತೆ ಕೃಷಿಯಿಂದ ಹಿಮ್ಮುಖವಾಗುತ್ತಿದ್ದು, ಕೃಷಿಯಿಂದ ಬದುಕು ಕಟ್ಟಿಕೊಳ್ಳುವವರ ಸಂಖ್ಯೆ ಇಳಿಮುಖವಾಗುತಿದೆ ಎಂದು ಸುರಗಿರಿ ದೇವಳದ ಆಡಳಿತ ಮೊಕ್ತೇಸರ ರಾಜೇಶ್ ಶೆಟ್ಟಿ ಭಂಡಾರಮನೆ ಹೇಳಿದರು.

ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ಭಾನುವಾರ ಸುರಗಿರಿ ಕೆಸರ‌್ದ ಗೊಬ್ಬು ಸಂಭ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶಾಸಕ ಉಮಾನಾಥ ಕೋಟ್ಯಾನ್, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮಾಜಿ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ, ಅರ್ಚಕ ವಿಶ್ವೇಶ ಭಟ್, ಅತ್ತೂರುಬೈಲು ವೆಂಕಟರಾಜ ಉಡುಪ, ಹಿಂದು ಧಾರ್ಮಿಕ ದತ್ತಿ ಜಿಲ್ಲಾ ಸದಸ್ಯ ಸುಬ್ರಹ್ಮಣ್ಯಪ್ರಸಾದ್, ಭುವನಾಭಿರಾಮ ಉಡುಪ, ಪೃಥ್ವಿರಾಜ್ ಆಚಾರ್ಯ, ಗುತ್ತಿನಾರ್ ನಿತಿನ್ ಶೆಟ್ಟಿ ಕೊಡೆತ್ತೂರುಗುತ್ತು, ಗುತ್ತಿನಾರ್ ಸುಧಾಕರ ಶೆಟ್ಟಿ, ಮಲ್ಲಿಕಾ ಶೆಟ್ಟಿ ಬಳ್ಕುಂಜೆಗುತ್ತು, ಪುರುಷೋತ್ತಮ ಶೆಟ್ಟಿ, ಧನಂಜಯ ಶೆಟ್ಟಿಗಾರ್, ಜಗನ್ನಾಥ ಶೆಟ್ಟಿ ಮಮ್ಮೆಟ್ಟು, ಪ್ರಕಾಶ್ ಎನ್.ಶೆಟ್ಟಿ ಸುರಗಿರಿ, ಯುವಕ ಮಂಡಲದ ಅಧ್ಯಕ್ಷ ಅಶ್ವಿನ್ ಅಳ್ವ, ಮಹಿಳಾ ಮತ್ತು ಯುವತಿ ಮಂಡಲದ ಅಧ್ಯಕ್ಷೆ ಅಮಿತಾ ಶೆಟ್ಟಿ ಉಪಸ್ಥಿತರಿದ್ದರು.

ಜಾನಪದ, ಕೃಷಿ ಸಂಬಂಧಿತ ರಸಪ್ರಶ್ನೆ ನಡೆಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು. ಸುರಗಿರಿ ದೇವಸ್ಥಾನ, ಸುರಗಿರಿ ಯುವಕ ಮಂಡಲ, ಸುರಗಿರಿ ಮಹಿಳಾ ಮಂಡಲದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಶ್ವಿನ ಆಳ್ವ ಸ್ವಾಗತಿಸಿದರು. ಅರ್ಪಿತಾ ಶೆಟ್ಟಿ, ಶ್ರೀಶ ಸರಾಫ್ ಐಕಳ ಕಾರ್ಯಕ್ರಮ ನಿರೂಪಿಸಿದರು.

ಕಂಬಳದ ಕೋಣಕ್ಕೆ ಸಂಭ್ರಮ

ಕಂಬಳದ ಕೋಣಗಳೊಂದಿಗೆ, ಮಡಕೆ, ಸಾಂಬಾರಿನ ಮರಾಯಿ, ಸೇವಿಗೆ ಮಣೆ, ರಾಟೆ, ಕುರ್ಕಿಲ್, ಮಣೆ, ಅಕ್ಕಿ ಮುಡಿ, ಹಾರೆ ಪಿಕ್ಕಾಸು, ನೇಜಿ ಇರುವ ಬುಟ್ಟಿ, ರಾಟೆ, ಮಡಿಮಂಚ, ಕೊಡಂಟಿ, ಪಲಾಯಿ, ಭರಣಿ ಹೀಗೆ ಅನೇಕ ಕೃಷಿಯ ಉಪಕರಣ ಹಿಡಿದು ಮುಟ್ಟಾಲೆ ಹಾಕಿಕೊಂಡ ಅತ್ತೂರು ಕೆಮ್ರಾಲ್ ಕಿಲೆಂಜೂರಿನ ಮಹಿಳೆಯರು, ಯುವಕರು, ಮಕ್ಕಳು ಗದ್ದೆಗಿಳಿಯುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಇದೇ ಸಂದರ್ಭ ಕಂಬಳ ಕ್ಷೇತ್ರದ ಸಾಧಕ ಕಟೀಲು ಕಿನ್ಲಚ್ಚಿಲ್ ಲತಾಪ್ರಸಾದ್ ಶೆಟ್ಟಿಯವರ ಕೋಣ ಕುಟ್ಟಿಯನ್ನು ಸನ್ಮಾನಿಸಲಾಯಿತು. ಕೆಸರುಗದ್ದೆ ಓಟ, ಪಿರಾಮಿಡ್ ರಚನೆ, ಹಗ್ಗ-ಜಗ್ಗಾಟ ಮೊದಲಾದ ಸ್ಪರ್ಧೆಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net