ಅನಸೂಯಾ ಚರಿತ್ರೆ ಕೃತಿ ಬಿಡುಗಡೆ

New Project (11)
Published on

ಕಾಸರಗೋಡು: ಯಕ್ಷಗಾನ ಕ್ಷೇತ್ರಕ್ಕೆ ಅಪೂರ್ವವೆನಿಸಿದ ಪುರಂದರದಾಸರು ರಚಿಸಿದ ಅನಸೂಯಾ ಚರಿತ್ರೆ ಯಕ್ಷಗಾನ ಪ್ರಸಂಗವನ್ನು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಕಟಿಸಿದ್ದು, ಕೃತಿ ಬಿಡುಗಡೆ ಸಮಾರಂಭ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಜರುಗಿತು.

ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಕೃತಿ ಲೋಕಾರ್ಪಣೆಗೊಳಿಸಿದರು. ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ನಿರ್ದೇಶಕ ಡಾ.ಧನಂಜಯ ಕುಂಬಳೆ ಅಧ್ಯಕ್ಷತೆ ವಹಿಸಿದ್ದರು. ಡಾ.ಎಂ.ಪ್ರಭಾಕರ ಜೋಶಿ ಕೃತಿ ಬಗ್ಗೆ ಮಾತನಾಡಿದರು. ಕೃತಿಯ ಸಂಪಾದಕ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಕೃತಿ ಪರಿಚಯಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಶ್ರೀಕೃಷ್ಣ ಶರ್ಮ ಉಪಸ್ಥಿತರಿದ್ದರು. ಪ್ರತಿಷ್ಠಾನ ಅಧ್ಯಕ್ಷ ರಾಮಕೃಷ್ಣ ಮಯ್ಯ ಸ್ವಾಗತಿಸಿದರು. ರಾಜಗೋಪಾಲ ಕನ್ಯಾನ ಕಾರ್ಯಕ್ರಮ ನಿರೂಪಿಸಿದರು. ಜಯಲಕ್ಷ್ಮೀ ಆರ್.ಹೊಳ್ಳ ವಂದಿಸಿದರು.

ಕಾರ್ಯಕ್ರಮ ಅಂಗವಾಗಿ ಅನಸೂಯಾ ಚರಿತ್ರೆ ಪ್ರಸಂಗದ ಗಾನ ಪ್ರಸ್ತುತಿ ನಡೆಯಿತು. ಭಾಗವತ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಪುಂಡಿಕಾಯಿ ಗೋಪಾಲಕೃಷ್ಣ ಭಟ್, ತಲ್ಪನಾಜೆ ವೆಂಕಟ್ರಮಣ ಭಟ್, ಹೇಮಾ ಸ್ವಾತಿ ಕುರಿಯಾಜೆ ಭಾಗವತಿಕೆ, ಚೆಂಡೆ-ಮದ್ದಳೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಮಧೂರು ಗೋಪಾಲಕೃಷ್ಣ ನಾವಡ, ರಾಮಮೂರ್ತಿ ಕುದುರೆಕ್ಕೋಡ್ಲು ಹಾಗೂ ಚಕ್ರತಾಳದಲ್ಲಿ ರಾಜ ಮಯ್ಯ ಸಹಕರಿಸಿದರು. ವಸಂತ ಭಾರದ್ವಾಜ ಗಾನಪ್ರಸ್ತುತಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net