

ಬೆಳ್ತಂಗಡಿ: ಮುಂಡಾಜೆ ಗ್ರಾಮದ ಕಲ್ಲಾರ್ಯ ಗಣೇಶ ಪಟವರ್ಧನ್ ಅವರ ಗದ್ದೆಯಲ್ಲಿ ಪರಶುರಾಮ ಫ್ರೆಂಡ್ಸ್ ಮೂಲಾರು ವತಿಯಿಂದ ಕೆಸರ‌್ಡೊಂಜಿ ದಿನ ಕಾರ್ಯಕ್ರಮ ನಡೆಯಿತು.
ಕೃಷಿಕ ಚಂದ್ರಹಾಸ ಪಟವರ್ಧನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಗದ್ದೆಗಳು ನಶಿಸುತ್ತಿರುವ ಪ್ರಸ್ತುತ ಸಮಯದಲ್ಲಿ ಗದ್ದೆಗಳಲ್ಲಿ ಇಂತಹ ಕ್ರೀಡಾಕೂಟಗಳು ನಡೆಯುವುದರಿಂದ ಭತ್ತದ ಕೃಷಿಗೆ ಪ್ರೋತ್ಸಾಹ ದೊರೆಯುತ್ತದೆ. ಊರಿನ ಅಭಿವೃದ್ಧಿಯಲ್ಲಿ ಸಂಘಟನೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಪರಶುರಾಮ ಫ್ರೆಂಡ್ಸ್ ಅಧ್ಯಕ್ಷ ಕೃಷ್ಣಪ್ಪ, ಪತ್ರಕರ್ತ ಅರವಿಂದ ಹೆಬ್ಬಾರ್, ಅಂಜಲಿ ಪಟವರ್ಧನ್ ಮತ್ತಿತರರು ಉಪಸ್ಥಿತರಿದ್ದರು.
ಚಂದ್ರಶೇಖರ ಮುಲಾರು ಸ್ವಾಗತಿಸಿ, ಕೇಶವ ನಿರೂಪಿಸಿದರು. ಕೆಸರುಗದ್ದೆಯಲ್ಲಿ ಮಕ್ಕಳಿಗೆ, ಪುರುಷರಿಗೆ ಹಾಗೂ ಮಹಿಳೆಯರಿಗೆ ವಿವಿಧ ಆಟಗಳು ನಡೆಯಿತು.