ಸಂಸ್ಕಾರಯುತ ಬದುಕಿಗೆ ಶ್ರದ್ಧಾಕೇಂದ್ರ ದಾರಿದೀಪ : ಮಾಜಿ ಸಚಿವ ಎಸ್.ಅಂಗಾರ ಅಭಿಮತ

New Project (20)
Published on

ಸುಬ್ರಹ್ಮಣ್ಯ: ಶ್ರದ್ಧಾಕೇಂದ್ರಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳು ಸಂಸ್ಕಾರಯುತ ಬದುಕಿಗೆ ದಾರಿದೀಪ. ಭಕ್ತಿ ಮತ್ತು ಧರ್ಮ ಜಾಗೃತಿಯಿಂದ ಆಲಯಗಳ ಅಭಿವೃದ್ಧಿ ಸಾಧ್ಯ. ಸರ್ವ ಭಕ್ತರ ಹಗಲಿರುಳ ಶ್ರಮಭರಿತ ಭಕ್ತಿಯು ಕೇರ್ಪಡ ದೇವಾಲಯದ ಪ್ರಗತಿಗೆ ಭೂಷಣವಾಗಿದೆ ಎಂದು ಮಾಜಿ ಸಚಿವ ಎಸ್.ಅಂಗಾರ ಹೇಳಿದರು.

ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂಗವಾಗಿ ಭಾನುವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸನಾತನ ಚಿಂತನೆಗಳಳಿಂದ ಸಂಸ್ಕಾರಯುಕ್ತ ಜೀವನ ಸಾಧ್ಯ. ಬದುಕಿನಲ್ಲಿ ಬಡತನ ಇರಬಹುದು, ಆದರೆ ಮನಸಿಗೆ ಬಡತನ ಬರಬಾರದು. ಅಹಂ ಅನ್ನು ತ್ಯಜಿಸಿ ಜೀವನದಲ್ಲಿ ಒಳ್ಳೆಯ ತನವನ್ನು ಮೈಗೂಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಹೇಳಿದರು.

ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷೆ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ನರಿಮೊಗರು ಸರಸ್ವತಿ ವಿದ್ಯಾಲಯದ ಅಧ್ಯಕ್ಷ ಅವಿನಾಶ್ ಕೊಡೆಂಕಿರಿ ಧಾರ್ಮಿಕ ಉಪನ್ಯಾಸ ನೀಡಿದರು. ಕಾಂಚೋಡು ಮಂಜುನಾಥ ಸ್ವಾಮಿ ದೇವಸ್ಥಾನದ ಪರಮೇಶ್ವರಯ್ಯ ಹೆಗ್ಗಡೆ, ಸುಳ್ಯ ಅಟಲ್‌ಜಿ ಚಾರಿಟೆಬಲ್ ಟ್ರಸ್ಟ್ ಸದಸ್ಯ ರಾಕೇಶ್ ರೈ ಕೆಡಂಜಿ ಮುಖ್ಯಅತಿಥಿಗಳಾಗಿದ್ದರು.

ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು, ಸ್ವಾಗತ ಸಮಿತಿ ಸದಸ್ಯ ಪ್ರಸನ್ನ ಕೆ., ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಅನೂಪ್ ಕುವಾರ್ ಆಳ್ವ ಕೆ., ಕೇರ್ಪಡ ಗೌಡ ಮನೆತನದ ಚೆನ್ನಪ್ಪ ಗೌಡ ಕೇರ್ಪಡ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಾಗೇಶ್ ಆಳ್ವ ಕಟ್ಟಬಿಡು, ಸದಸ್ಯ ರುನಾಥ ಎಂಜಿರು, ಸೇವಾ ಸಮಿತಿ ಸದಸ್ಯರಾದ ವಸಂತ ಕುಕ್ಕಯ್ಯ ಕೊಡಿ, ಧರ್ಮಪಾಲ ಅಬ್ನೋವು, ದಿನೇಶ್ ಪಜೀಂಬಿಲ ವೇದಿಕೆಯಲ್ಲಿದ್ದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಪ್ರಸ್ತಾವನೆಗೈದು ಸ್ವಾಗತಿಸಿದರು. ಪ್ರದೀಪ್ ರೈ ಎಣ್ಮೂರು ನಿರೂಪಿಸಿದರು. ತ್ರಿಶಾ ಕೇರ್ಪಡ ಪ್ರಾರ್ಥಿಸಿದರು. ಬಳಿಕ ವೈಷ್ಣವಿ ನಾಟ್ಯಾಲಯ ಪುತ್ತೂರು ಅವರಿಂದ ನೃತ್ಯಾರ್ಪಣಂ ನೆರವೇರಿತು. ಸೋಮವಾರ ಶ್ರೀ ದೇಗುಲಕ್ಕೆ ಶ್ರೀ ದೇವಿಯ ನೂತನ ಉತ್ಸವ ಮೂರ್ತಿ ಸಮರ್ಪಣೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net