ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಿರುಷಷ್ಠಿಯ ಸಾಂಸ್ಕೃತಿಕ ವೈಭವದ 4ನೇ ದಿನ ವಿಶ್ವದಾಖಲೆ ಮಾಡಿದ ಯೋಗಪಟು ಗೌರಿತಾ ಕೆ.ಜಿ ಅವರಿಂದ ಯೋಗ ನೃತ್ಯ ಪ್ರದರ್ಶಿತವಾಯಿತು. ನೃತ್ಯದಲ್ಲಿ ಯೋಗಾಸನವನ್ನು ಪ್ರದರ್ಶಿಸುವ ಮೂಲಕ ಯೋಗದಿಂದ ಆರೋಗ್ಯ ಎಂಬ ಜಾಗೃತಿಯನ್ನು ಪುಟಾಣಿ ಗೌರಿತಾ ಕೆ.ಜಿ ಮೂಡಿಸಿದರು. ಸುಮಾರು 30 ನಿಮಿಷ 120ಕ್ಕೂ ಹೆಚ್ಚು ಆಸನಗಳನ್ನು ಪ್ರಸ್ತುತಪಡಿಸಿದರು.
ದೀಪಭೂನಮನಾಸನ, ಹನುಮಾಸನ, ಲಘು ವಜ್ರಾಸನ, ಮತ್ಸ್ಯಾಸನ, ಗರುಡಾಸನ, ಸರ್ವಾಂಗಾಸನ, ಸರ್ವಾಂಗಾಸನದಲ್ಲಿ ಪದ್ಮಾಸನ, ಕರ್ಣಪೀರಾಸನ, ಪೂರ್ಣ ಭುಜಂಗಾಸನ, ದೀಪ ತಲೆಯ ಮೇಲಿಟ್ಟು ವೀರಭದ್ರಾಸನ, ಆಂಜನೇಯಾಸನ,ಪದ್ಮಾಸನ ಮಾಡಿದರು. ಕೊಡಪಾನದ ಮೇಲೆ ನಿಂತು ವಿವಿಧ ಆಸನಗಳನ್ನು ಮಾಡಿದರು. ಯೋಗಗುರು ಶರತ್ ಮರ್ಗಿಲಡ್ಕ ನಿರ್ದೇಶನ ನೀಡಿದರು. ಡಾ.ರಾಜೇಶ್ವರಿ, ನಿವೃತ್ತ ಮುಖ್ಯಗುರುಗಳಾದ ಮೇದಪ್ಪ ಗೌಡ ಮತ್ತು ಭುವನೇಶ್ವರಿ ಸಹಕರಿಸಿದರು.
ಶನಿವಾರ ವಿದ್ವಾನ್ ಹರಿಕೃಷ್ಣ್ ಎರ್ನಾಕುಲಂ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ವಯಲಿನ್‌ನಲ್ಲಿ ವಿದ್ವಾನ್ ಶ್ರೀಹರಿ ವಿಠಲ್, ಮೃದಂಗದಲ್ಲಿ ವಿದ್ವಾನ್ ಬೆಂಗಳೂರು ಎಸ್.ಪ್ರವೀಣ್, ಘಟಂನಲ್ಲಿ ಡಾ.ವಿ.ಸುರೇಶ್ ಚೆನ್ನೈ ಹಿಮ್ಮೇಳ ಸಹಕಾರ ನೀಡಿದರು. ಭಾನುವಾರ ವಿಭಾ ಶ್ರೀನಿವಾಸ ನಾಯಕ್ ಇಂದಾಜೆ ಇವರಿಂದ ಭಕ್ತಿ ಸಂಗೀತ ನೆರವೇರಿತು.
ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಕಲಾವಿದರನ್ನು ಗೌರವಿಸಿದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಯೇಸುರಾಜ್, ಮಾಸ್ಟರ್ ಪ್ಲಾನ್ ಸಮಿತಿಯ ಸ್ಥಳೀಯ ಸದಸ್ಯರಾದ ಸತೀಶ್ ಕೂಜುಗೋಡು, ಪವನ್ ಎಂ.ಡಿ ಉಪಸ್ಥಿತರಿದ್ದರು. ಉಪನ್ಯಾಸಕಿ ಸವಿತಾ ಕೈಲಾಸ್ ನಿರೂಪಿಸಿದರು. ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಕೆ.ಎಂ.ಗೋಪಿನಾಥ್ ನಂಬೀಶ, ರಾಜಲಕ್ಷ್ಮೀ ಶೆಟ್ಟಿಗಾರ್, ಪ್ರಮೋದ್ ಕುಮಾರ್ ಎಸ್,ಯಲ್ಲಪ್ಪ, ಹೂವಪ್ಪ, ಭಾನುಮತಿ, ಮಹೇಶ್ ಕುಮಾರ್.ಎಸ್, ಅಶೋಕ್ ಅತ್ಯಡ್ಕ, ಪೂರ್ಣಿಮಾ, ಸ್ಪರ್ಶ, ಪವನ್ ಕುಮಾರ್, ದೇವಿಪ್ರಸಾದ್, ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ ಸಹಕರಿಸಿದರು.
15ರಂದು ರಕ್ತದಾನ ಶಿಬಿರ : ಕೆ.ವಸಂತ ಬಂಗೇರ ಜನ್ಮದಿನದ ಪ್ರಯುಕ್ತ ಕಾರ್ಯಕ್ರಮ