ಕೇರಳ: ಪೊಲೀಸರ ಕಣ್ತಪ್ಪಿಸಿ ತನ್ನ ಅಕ್ರಮ ಗಾಂಜಾ ವ್ಯವಹಾರವನ್ನು ಮಾಡಲು ಶ್ವಾನ ತರಬೇತಿ ಕೇಂದ್ರ ತೆರೆದಿದ್ದ ಆರೋಪಿಯೊಬ್ಬ, ಖಾಕಿ ಬಟ್ಟೆ ಧರಿಸುವ ಯಾವುದೇ ವ್ಯಕ್ತಿಯ ಮೇಲೆ ದಾಳಿ ಮಾಡುವಂತೆ ಶ್ವಾನಗಳಿಗೆ ತರಬೇತಿ ಕೊಟ್ಟಿದ್ದನು. ಇದೀಗ ಈ ವ್ಯಕ್ತಿಯನ್ನು ಬಂಧಿಸುವಲ್ಲಿ ಕೇರಳ ಪೊಲೀಸರು ಮುಂಚೂಣಿಯಲ್ಲಿದ್ದಾರೆ.
ಇದನ್ನೂ ಓದಿ: ಕೇರಳದ ಅಯ್ಮನಮ್ನಲ್ಲಿ ಉದ್ಯಮಿಯೊಬ್ಬರು ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆ..!
ಕೇರಳದ ಕೊಟ್ಟಾಯಂ ಜಿಲ್ಲೆಯ ನಾಯಿ ಸಾಕಣೆ ಕೇಂದ್ರದ ಮೇಲೆ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದು, ಆರೋಪಿ ನಡೆಸುತ್ತಿದ್ದ ತರಬೇತಿ ಕೇಂದ್ರದಿಂದ ಬರೋಬ್ಬರಿ 17 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ದಾಳಿಯ ವೇಳೆ, ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ರಾಬಿನ್ ಜಾರ್ಜ್ ಸ್ಥಳದಿಂದ ತಪ್ಪಿಸಿಕೊಂಡಿದ್ದು, ಪೊಲೀಸರು ತರಬೇತಿ ಪಡೆದಿದ್ದ ನಾಯಿಗಳ ಗುಂಪನ್ನು ಎದುರಿಸುವಲ್ಲಿ ಹರಸಾಹಸ ಪಟ್ಟಿದ್ದಾರೆ. ಅದೃಷ್ಟವಶಾತ್ ಪೊಲೀಸ್ ಅಧಿಕಾರಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ಲೆಜೆಂಡರಿ ನಟಿ ವಹೀದಾ ರೆಹಮಾನ್ಗೆ ಒಲಿದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
“ಕೇಂದ್ರದಲ್ಲಿ ಪಿಟ್‌ಬುಲ್ಸ್ ಮತ್ತು ರೊಟ್‌ವೀಲರ್‌ಗಳು ಸೇರಿದಂತೆ ಸುಮಾರು 13 ನಾಯಿಗಳನ್ನು ಆರೋಪಿ ಸಾಕಿದ್ದ. ಇವುಗಳಿಗೆ ಖಾಕಿ ಬಣ್ಣದ ಬಟ್ಟೆ ಧರಿಸುವ ಯಾವುದೇ ವ್ಯಕ್ತಿಯನ್ನು ಕಂಡರೆ ಕಚ್ಚಲು ತರಬೇತಿ ಕೊಟ್ಟಿದ್ದಾನೆ” ಎಂದು ಕೊಟ್ಟಾಯಂ ಪೊಲೀಸ್ ಸೂಪರಿಂಟೆಂಡೆಂಟ್ (SP) ಕೆ. ಕಾರ್ತಿಕ್ ತಿಳಿಸಿದರು. ಸದ್ಯ ಕೇರಳ ಪೊಲೀಸರು ಆರೋಪಿಯ ಹುಡುಕಾಟಕ್ಕಾಗಿ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ,(ಏಜೆನ್ಸೀಸ್).
ಕಾವೇರಿ ನೀರು ಬಿಡುವಂತೆ ಆಗ್ರಹ; ಸತ್ತ ಇಲಿಗಳನ್ನು ಬಾಯಲ್ಲಿಡಿದುಕೊಂಡು ಪ್ರತಿಭಟಿಸಿದ ತಮಿಳುನಾಡು ರೈತರು