ಕಾಸರಗೋಡು: ಕೇರಳ ಕೇಂದ್ರೀಯ ವಿವಿ ಕಾಸರಗೋಡು ಪೆರಿಯ ಕ್ಯಾಂಪಸ್ ವತಿಯಿಂದ ಸ್ವಾತಂತ್ರೃ ಹೋರಾಟಗಾರ ಮತ್ತು ಬುಡಕಟ್ಟು ಜನಾಂಗದ ಧೀರ ಭಗವಾನ್ ಬಿರ್ಸಾ ಮುಂಡಾ ಜನ್ಮದಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಚರಿಸಲಾಯಿತು.
ಪ್ರಭಾರ ಉಪಕುಲಪತಿ ಪ್ರೊ.ವಿನ್ಸೆಂಟ್ ಮ್ಯಾಥ್ಯೂ ಉದ್ಘಾಟಿಸಿ ಬಿರ್ಸಾ ಮುಂಡ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ದೇಶದ ಸ್ವಾತಂತ್ರೃ ಚಳವಳಿಯಲ್ಲಿ ಬುಡಕಟ್ಟು ಜನಾಂಗದ ಹೋರಾಟ ಹೊಸ ತಲೆಮಾರಿಗೆ ತಲುಪಿಸುವ ಕೆಲಸ ನಡೆಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಪ್ರಭಾರಿ ರಿಜಿಸ್ಟ್ರಾರ್ ಪ್ರೊ.ರಾಜೇಂದ್ರ ಪಿಲಾಂಗಟ್ಟೆ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಆರ್.ಜಯಪ್ರಕಾಶ್, ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ಉಪಕುಲಪತಿಗಳ ನೇತೃತ್ವದಲ್ಲಿ ಕ್ಯಾಂಪಸ್ ವಠಾರದಲ್ಲಿ ಸಸಿಗಳನ್ನು ನೆಡಲಾಯಿತು.