ಮಾನಸಿಕ ಅಸ್ವಸ್ಥನಿಂದ ಕೆಂಪೇಗೌಡ ಪ್ರತಿಮೆ ಭಗ್ನ

kempegowda
ಪುಂಗನೂರು ಕ್ರಾಸ್‌ನಲ್ಲಿದ್ದ ನಾಡಪ್ರಭು ಕೆಂಪೇಗೌಡ ಪ್ರತಿಮೆ ದ್ವಸಂವಾಗಿರುವುದು.
Published on

ಕೋಲಾರ/ಶ್ರೀನಿವಾಸಪುರ
ಪಟ್ಟಣ ಹೊರವಲಯದ ಪುಂಗನೂರು ಕ್ರಾಸ್‌ನಲ್ಲಿ ಸ್ಥಾಪಿಸಿದ್ದ ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ಮಾನಸಿಕ ಅಸ್ವಸ್ಥರೊಬ್ಬರು ಬುಧವಾರ ದ್ವಸಂ ಮಾಡಿದ್ದು, ಅಸ್ವಸ್ಥನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ರ‍್ರಂವಾರಪಲ್ಲಿಯ ತಿರುಮಳಪ್ಪ (55) ಬಂಧಿತ. ಪ್ರತಿಮೆ ದ್ವಂಸಗೊಳಿಸಿದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ತಿರುಮಳಪ್ಪನನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ತಕ್ಷಣ ಶ್ರೀನಿವಾಸಪುರ ಪೊಲೀಸ್ ನಿರೀಕ್ಷಕ ಎಂ.ಬಿ.ಗೂರವಕೊಳ್ಳ ತಂಡ ಸ್ಥಳಕ್ಕೆ ಭೇಟಿ ನೀಡಿ ಮಾನಸಿಕ ಅಸ್ವಸ್ಥನನ್ನು ವಶಕ್ಕೆ ಪಡೆದು, ಸ್ಥಳೀಯರನ್ನ ಸಮದಾನ ಪಡಿಸಿದರು.
ಪೊಲೀಸರು ದೂರು ದಾಖಲಿಸಿಕೊಂಡು ನಂತರ ಮಾನಸಿಕ ಅಸ್ವಸ್ಥನನ್ನ ಪೊಲೀಸರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಸಮುದಾಯದ ಯುವ ಮುಖಂಡರು ಪ್ರತಿಮೆ ವಿರೂಪಗೊಳಿಸಿದ್ದನ್ನು ಖಂಡಿಸಿ ಸ್ಥಳದಲ್ಲಿ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದರು. ಕೆಲ ಕಾಲ ಪೊಲೀಸರಿಗೂ ಹಾಗೂ ಸಮುದಾಯದ ಯುವ ಮುಖಂಡರ ಮಧ್ಯೆ ವಾಕ್ಸಮರ ನಡೆಯಿತು.
ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ವೇಣುಗೋಪಾಲರೆಡ್ಡಿ ಮಾತನಾಡಿ, ಪಟ್ಟಣದಿಂದ 2 ಕಿಲೋ ಮೀಟರ್ ದೂರದಲ್ಲಿರುವ ಪುಂಗನೂರು ಕ್ರಾಸ್‌ನಲ್ಲಿ ಸ್ಥಾಪಿಸಲಾದ ಕೆಂಪೇಗೌಡ ಪ್ರತಿಮೆ ದ್ವಂಸ ಮಾಡಿರುವುದು ಖಂಡನೀಯ. ಈ ಕೃತ್ಯ ಹಿಂದೆ ಯಾರಾದರೂ ಇದ್ದಾರೆ ಎಂಬುದನ್ನ ಪೊಲೀಸರು ತನಿಖೆ ನಡೆಸಿಬೇಕಾಗಿದೆ. ಆರೋಪಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳವಂತೆ ಆಗ್ರಹಿಸಿದರು.
ಮಾವು ಬೆಳಗಾರರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಮಾತನಾಡಿ, ಕೆಂಪೇಗೌಡರು ಎಲ್ಲ ಸಮುದಾಯಕ್ಕೂ ಆದರ್ಶ ಪುರಷರು. ಅವರನ್ನ ಗೌರಿಸುವುದು ನಮ್ಮ ಕರ್ತವ್ಯ. ಇಂತಹ ಮಹಾನ್ ವ್ಯಕ್ತಿಯ ಪ್ರತಿಮೆ ದ್ವಸಗೊಳಿಸಿರುವುದು ಖಂಡನೀಯ. ಪ್ರತಿಮೆಯನ್ನ ದ್ವಸಂ ಮಾಡಿರುವ ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದು ಸೂಕ್ತ ಕ್ರಮಕೈಗೊಳ್ಳವಂತೆ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net