

ಮಲಯಾಳಂನ ಖ್ಯಾತ ನಟ ಮಮ್ಮೂಟ್ಟಿ ಸೋಮವಾರವಷ್ಟೇ (ಸೆಪ್ಟೆಂಬರ್ 7) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಮಮ್ಮೂಟ್ಟಿ ಅವರಿಗೆ ಜಗತ್ತಿನಾದ್ಯಂತ ಹಲವು ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ.
ಇದನ್ನೂ ಓದಿ: ಈ ಬಾರಿ ಐಪಿಎಲ್ V/s ಬಿಗ್ ಬಾಸ್ ಮುಖಾಮುಖಿ!
ಈ ಎಲ್ಲಾ ಶುಭಾಶಯಗಳ ಮಧ್ಯೆಯೇ, ಒಂದು ಪೋಸ್ಟ್ ಬಹಳ ವೈರಲ್ ಆಗಿದೆ. ಸ್ಟಾರ್ ನಟಿಯೊಬ್ಬರು, ಹಲವು ವರ್ಷಗಳ ಹಿಂದೆ ಮಮ್ಮೂಟ್ಟಿ ಅವರ ಜತೆಗೆ ತೆಗಿಸಿಕೊಂಡಿರುವ ಫೋಟೋವೊಂದನ್ನು ಶೇರ್ ಮಾಡಿಕೊಳ್ಳುವುದರ ಜತೆಗೆ, ಮಮ್ಮೂಟ್ಟಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಅಂದಹಾಗೆ, ಆ ನಟಿ ಯಾರು ಗೊತ್ತಾ? ದಕ್ಷಿಣ ಭಾರತದ ಜನಪ್ರಿಯ ನಟಿ ಮತ್ತು 'ಮಹಾನಟಿ' ಖ್ಯಾತಿಯ ಕೀರ್ತಿ ಸುರೇಶ್. ಕೀರ್ತಿ ಅವರು ಹಲವು ವರ್ಷಗಳ ಹಿಂದೆ ಮಮ್ಮೂಟ್ಟಿ ಅವರ ಜತೆಗಿರುವ ಒಂದು ಫೋಟೋ ಹಂಚಿಕೊಳ್ಳುವುದರ ಜತೆಗೆ, ಅವರನ್ನು ಅಂಕಲ್ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲ, 'ನೀವು ನಮಗೆ ನಿರಂತರ ಸ್ಫೂರ್ತಿ' ಎಂದು ಹೇಳಿದ್ದಾರೆ.
ಈ ಫೋಟೋಗಳ ಜತೆಗೆ, ತಾವು ದೊಡ್ಡವರಾದ ಮೇಲೆ ಮಮ್ಮೂಟ್ಟಿ ಜತೆಗಿರುವ ಒಂದು ಫೋಟೋವನ್ನೂ ಅವರು ಶೇರ್ ಮಾಡಿಕೊಂಡಿದ್ದಾರೆ. ಮದುವೆಯೊಂದರಲ್ಲಿ ಈ ಫೋಟೋ ತೆಗೆಯಲಾಗಿದ್ದು, ಎರಡೂ ಕಾಲಘಟ್ಟಗಳ ಫೋಟೋ ಹಂಚಿಕೊಂಡಿರುವುದು ವಿಶೇಷ.