More

    ಈ ಬಾರಿ ಐಪಿಎಲ್ V/s ಬಿಗ್ ಬಾಸ್ ಮುಖಾಮುಖಿ!

    ನವದೆಹಲಿ: ಕರೊನಾ ಹಾವಳಿ ಶುರುವಾದ ಹಲವು ಲೆಕ್ಕಾಚಾರಗಳು ಉಲ್ಟಾ ಆಗಿವೆ, ಹಲವು ಯೋಜನೆಗಳು ಬದಲಾಗಿವೆ. ಇಂಥದ್ದೇ ಒಂದು ವೇಳಾಪಟ್ಟಿ ಏರುಪೇರಿನಿಂದಾಗಿ ಈ ಬಾರಿ ಕಿರುತೆರೆಯಲ್ಲಿ ದೊಡ್ಡ ಜಟಾಪಟಿಯೇ ನಡೆಯಲಿದೆ! ಅದುವೇ ಐಪಿಎಲ್ 13ನೇ ಆವೃತ್ತಿ ಮತ್ತು ಬಿಗ್ ಬಾಸ್ 14ನೇ ಆವೃತ್ತಿ ನಡುವಿನ ಮುಖಾಮುಖಿ!

    ಸಾಮಾನ್ಯವಾಗಿ ಏಪ್ರಿಲ್-ಮೇನಲ್ಲಿ ನಡೆಯುತ್ತಿದ್ದ ಐಪಿಎಲ್ ಟೂರ್ನಿ ಈ ಬಾರಿ ಕರೊನಾ ಹಾವಳಿ, ಲಾಕ್‌ಡೌನ್‌ನಿಂದಾಗಿ ಸೆಪ್ಟೆಂಬರ್-ಅಕ್ಟೋಬರ್-ನವೆಂಬರ್‌ನಲ್ಲಿ ನಿಗದಿಯಾಗಿದೆ. ಟೂರ್ನಿ ಯುಎಇಯಲ್ಲಿ ನಡೆಯಲಿದ್ದರೂ, ಕಿರುತೆರೆಯ ಪ್ರೈಮ್ ಟೈಮ್‌ನಲ್ಲಿ ನೇರಪ್ರಸಾರ ಕಾಣಲಿದೆ. ಹೀಗಾಗಿ, ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ರಿಯಾಲಿಟಿ ಶೋ ವೀಕ್ಷಕರನ್ನು ಸೆಳೆಯಲು ದೊಡ್ಡ ಸವಾಲನ್ನೇ ಎದುರಿಸಬೇಕಾಗಿದೆ.

    ಐಪಿಎಲ್ ಟೂರ್ನಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ 53 ದಿನಗಳ ಕಾಲ ನಡೆಯಲಿದ್ದರೆ, ಬಿಗ್ ಬಾಸ್ 14ನೇ ಆವೃತ್ತಿ ಅಕ್ಟೋಬರ್ 3ರಂದು ಶುರುವಾಗಲಿದ್ದು, 105 ದಿನಗಳ ಬಳಿಕ ಜನವರಿ 17ರಂದು ಮುಕ್ತಾಯಗೊಳ್ಳಲಿದೆ. ಹೀಗಾಗಿ ಆರಂಭಿಕ ದಿನಗಳಲ್ಲಿ ಪ್ರೇಕ್ಷಕರನ್ನು ಸೆಳೆಯಲು ‘ಬಿಗ್ ಬಾಸ್’ ಭಾರಿ ಹೋರಾಟವನ್ನೇ ನಡೆಸಬೇಕಾಗಿದೆ.

    ಇದನ್ನೂ ಓದಿ: ಕೊನೆಗೂ ಪ್ರಕಟಗೊಂಡಿತು ಐಪಿಎಲ್ ವೇಳಾಪಟ್ಟಿ; ಮುಂಬೈ-ಚೆನ್ನೈ ಮೊದಲ ಪಂದ್ಯ

    ಈ ನಡುವೆ ಬಿಗ್ ಬಾಸ್ ರಿಯಾಲಿಟಿ ಪ್ರಸಾರ ಕಾಣಲಿರುವ ಕಲರ್ಸ್‌ ಚಾನಲ್‌ನ ಮುಖ್ಯಸ್ಥರು, ಐಪಿಎಲ್ ಸವಾಲಿನ ನಡುವೆ ವೀಕ್ಷಕರು ಮಾತ್ರವಲ್ಲದೆ ಜಾಹೀರಾತುದಾರರನ್ನೂ ಸೆಳೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಐಪಿಎಲ್ ಮುಗಿದ 37 ದಿನಗಳವರೆಗೂ ಬಿಗ್ ಬಾಸ್ ಸಾಗಲಿದೆ. ಐಪಿಎಲ್ ಪಂದ್ಯಗಳು ರಾತ್ರಿ 7.30ಕ್ಕೆ ಆರಂಭಗೊಳ್ಳಲಿದ್ದರೆ, ಬಿಗ್ ಬಾಸ್ ರಾತ್ರಿ 10.30ಕ್ಕೆ ಶುರುವಾಗಲಿದೆ. ಹೀಗಾಗಿ ಇವೆರಡರ ನಡುವೆ ಹೆಚ್ಚಿನ ಸಂಘರ್ಷ ಏರ್ಪಡುವುದಿಲ್ಲ. ಆದರೆ 4 ವಾರಾಂತ್ಯದ ದಿನಗಳಲ್ಲಿ ನಮ್ಮ ಶೋ ರಾತ್ರಿ 9 ಗಂಟೆಗೆ ಆರಂಭವಾಗಲಿದ್ದು, ಆಗ ಮಾತ್ರ ಹಿನ್ನಡೆ ಎದುರಾಗಬಹುದು ಎಂದು ಕಲರ್ಸ್‌ನ ಸೇಲ್ಸ್ ನೆಟ್‌ವರ್ಕ್ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಳಿಸಿದ್ದಾರೆ.

    ಐಪಿಎಲ್‌ನಂತೆ ಬಿಗ್ ಬಾಸ್ ಶೀರ್ಷಿಕೆ ಪ್ರಾಯೋಜಕತ್ವದಿಂದಲೂ ಈ ಬಾರಿ ಚೀನಾ ಮೂಲದ ಮೊಬೈಲ್ ಕಂಪನಿ ವಿವೋ ಹಿಂದೆ ಸರಿದಿದ್ದು, ಎಂಪಿಎಲ್ ಹೊಸ ಪ್ರಾಯೋಜಕನಾಗಿದೆ. ಹಿಂದಿ ಮಾತ್ರವಲ್ಲದೆ ತೆಲುಗು, ತಮಿಳು ಬಿಗ್ ಬಾಸ್ ಕೂಡ ಈ ಬಾರಿ ಐಪಿಎಲ್ ಜತೆಗೆ ಸಂಘರ್ಷ ನಡೆಸಲಿದೆ. ತೆಲುಗು ಬಿಗ್ ಬಾಸ್ ಸೆಪ್ಟೆಂಬರ್ 6ರಿಂದ ಡಿಸೆಂಬರ್ 20ರವರೆಗೆ ನಡೆದರೆ, ತಮಿಳು ಬಿಗ್ ಬಾಸ್ ಅಕ್ಟೋಬರ್ 4ರಿಂದ ಜನವರಿ 17ರವರೆಗೆ ನಡೆಯಲಿದೆ.

    ಲಾಕ್​ಡೌನ್​ ಥೀಮ್​ನಲ್ಲಿ ಇರಲಿದೆ ಈ ಸಲದ ಹಿಂದಿ ಬಿಗ್​ಬಾಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts