

ಹಿಂದಿಯ ಬಿಗ್ಬಾಸ್ ಸೀಸನ್ 14 ಹಲವು ವಿಚಾರಗಳಿಗಾಗಿ ಸದ್ದು ಮಾಡುತ್ತಿದೆ. ಸಲ್ಮಾನ್ ಖಾನ್ ಸಂಭಾವನೆ ಸಾಕಷ್ಟು ಚರ್ಚೆಗೊಳಪಟ್ಟಿದ್ದು ಒಂದೆಡೆಯಾದರೆ, ಕರೊನಾ ಸಮಯದಲ್ಲಿ ಶೋ ಹೇಗೆ ಮೂಡಿಬರಲಿದೆ ಎಂಬುದೂ ಕುತೂಹಲ ಮೂಡಿಸಿದೆ. ಇದೀಗ ರಿಯಾಲಿಟಿ ಶೋದ ಥೀಮ್ ಏನು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ತೆಲುಗಿನ ಖ್ಯಾತ ನಟ ಜಯಪ್ರಕಾಶ್ ರೆಡ್ಡಿ ನಿಧನ
ಕಳೆದ 6 ತಿಂಗಳಿಂದ ಕರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಮಾಡಲಾಗಿತ್ತು. ನಿಧಾನಕ್ಕೆ ಸಡಿಲಗೊಳಿಸುತ್ತ ಬರಲಾಯಿತು. ಇದೀಗ ಆ ಪ್ರಕ್ರಿಯೆಯನ್ನೇ ಈ ಸಲದ ಬಿಗ್ಬಾಸ್ ಥೀಮ್ ಆಗಿ ಬಳಸಿಕೊಳ್ಳಲಾಗುತ್ತಿದೆ. ಸುತ್ತಾಟ ಬಂದ್ ಆಗಿತ್ತು, ಸಿನಿಮಾ ನೋಡಲು ಅವಕಾಶ ಇರಲಿಲ್ಲ, ಶಾಪಿಂಗ್ ಮಾಲ್ಗಳು ತೆರೆದಿರಲಿಲ್ಲ.. ಇದೀಗ ಹಾಗೆ ಮಿಸ್ ಮಾಡಿಕೊಂಡಿದ್ದನ್ನು ಲಕ್ಸುರಿ ಟಾಸ್ಕ್ ಮೂಲಕ ಸ್ಪರ್ಧಿಗಳು ಪಡೆದುಕೊಳ್ಳುವ ಅವಕಾಶ ಈ ಸಲದ ಬಿಗ್ಬಾಸ್ನಲ್ಲಿ ಕಲ್ಪಿಸಲಾಗಿದೆ.
ಬಿಗ್ ಮನೆಯಲ್ಲಿ ಆಯೋಜಿಸುವ ಟಾಸ್ಕ್ಗಳಲ್ಲಿ ವಿಜೇತರಾದ ತಂಡಕ್ಕೆ ಈ ಅವಕಾಶ ಸಿಗಲಿದ್ದು, ವಿಶೇಷ ಸವಲತ್ತುಗಳನ್ನು ನೀಡಲಾಗುತ್ತಿದೆ. ಇನ್ನು ಈಗಾಗಲೇ 14ನೇ ಸೀಸನ್ನಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದಕ್ಕೆ ಪಟ್ಟಿಯೊಂದು ಹರಿದಾಡುತ್ತಿದ್ದು, ಇನ್ನಷ್ಟೇ ಅಧಿಕೃತ ಪಟ್ಟಿ ಹೊರಬರಬೇಕಿದೆ. ಅಂದಹಾಗೆ, ಅಕ್ಟೋಬರ್ 3ರಿಂದ ಬಿಗ್ಬಾಸ್ ಶುರುವಾಗಲಿದೆ. (ಏಜೆನ್ಸೀಸ್)