ವ್ಯಾಲೆಂಟೈನ್ಸ್ ಡೇಗೂ ಮುನ್ನ ಸರ್ಪ್ರೈಸ್ ಕೊಟ್ರಾ ಕೀರ್ತಿ ಸುರೇಶ್​? ಇದೆನಾ ವೈರಲ್ ಫೋಟೋ ಸೀಕ್ರೆಟ್?

Keerthy
Published on

ಚೆನ್ನೈ: ಕಡಿಮೆ ಅವಧಿಯಲ್ಲೇ ಸ್ಟಾರ್​ ನಟಿ ಪಟ್ಟ ಗಿಟ್ಟಿಸಿರುವ ಕೀರ್ತಿ ಸುರೇಶ್​ ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ನಟನೆಯಿಂದಲೇ ಎಲ್ಲರನ್ನು ತಮ್ಮತ್ತ ಸೆಳೆದಿರುವ ಕೀರ್ತಿ ಸುರೇಶ್, ರಾಷ್ಟ್ರ ಪ್ರಶಸ್ತಿ ವಿಜೇತೆಯು ಹೌದು. ಸದ್ಯ ದಕ್ಷಿಣ ಭಾರತ ಸಿನಿರಂಗದ ಬಹುಬೇಡಿಕೆಯ ನಟಿಯಾಗಿರುವ ಕೀರ್ತಿ ಬಗ್ಗೆ ಅಭಿಮಾನಿಗಳು ಅಚ್ಚರಿ ಪಡುವಂತಹ ಸುದ್ದಿಯೊಂದು ಕೇಳಿಬಂದಿದೆ.

ಯಾವುದು ಆ ಸುದ್ದಿ ಎಂದರೆ, ಕೀರ್ತಿ ಸುರೇಶ್​ ಸದ್ಯದಲ್ಲೇ ಮದುವೆಯಾಗಲಿದ್ದಾರಂತೆ. ಹಾಗದರೆ ವರ ಯಾರು? ಎಂಬ ನಿಮ್ಮ ಪ್ರಶ್ನೆಗೆ ಮುಂದಿದೆ ಉತ್ತರ. ಅದಕ್ಕೂ ಮುನ್ನ ಇದು ಖಚಿತ ಮಾಹಿತಿಯಲ್ಲ ಎಂದು ತಿಳಿಯಬಯಸುತ್ತೇವೆ. ಏಕೆಂದರೆ, ಇದೊಂದು ಗಾಸಿಪ್​ ಹರಿದಾಡುತ್ತಿದ್ದೆ. ಅದಕ್ಕೆ ಕಾರಣವೂ ಇದೆ.

ಕೀರ್ತಿ ಸುರೇಶ್,​ ಅನಿರುದ್ಧ್​ ರವಿಚಂದರ್​ ಅವರನ್ನು ಮದುವೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಅನಿರುದ್ಧ ಸಂಗೀತ ನಿರ್ದೇಶಕರಾಗಿ ದಕ್ಷಿಣ ಭಾರತ ಸಿನಿರಂಗದಲ್ಲಿ ಒಳ್ಳೆಯ ಹೆಸರಿದೆ. ಶೀಘ್ರದಲ್ಲೇ ಇಬ್ಬರು ಹಸೆಮಣೆ ಏರಲಿದ್ದಾರೆ ಎಂಬ ಗುಸು ಗುಸು ಕೇಳಿಬರುತ್ತಿದೆ.

ಹೀಗೆ ಗುಸು ಗುಸು ಕೇಳಿಬರಲು ಒಂದು ಕಾರಣವಿದೆ. ಏನೆಂದರೆ, ಅನಿರುದ್ಧ್​​ ಮತ್ತು ಕೀರ್ತಿ ಸುರೇಶ್​ ಒಟ್ಟಿಗೆ ಕ್ಯಾಮೆರಾಗೆ ಪೋಸ್​ ನೀಡಿರುವ ಫೋಟೋ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಬ್ಬರು ಬಹಳ ಸಲುಗೆ ಇರುವಂತೆ ಫೋಟೋ ತೆಗೆಸಿಕೊಂಡಿರುವುದು ಈ ಗಾಸಿಪ್​ಗೆ ಕಾರಣವಾಗಿದೆ. ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಇನ್ನು ಕೆಲವೇ ದಿನಗಳಲ್ಲಿ ಮದುವೆ ದಿನಾಂಕವನ್ನು ಕೀರ್ತಿ ಸುರೇಶ್​ ಘೋಷಣೆ ಮಾಡುತ್ತಾರೆಂಬ ಸುದ್ದಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಇದು ನಿಜಾನಾ? ಎಂದು ತಿಳಿದುಕೊಳ್ಳಲು ಜಾಲತಾಣದಲ್ಲಿ ಕೀರ್ತಿ ಸುರೇಶ್​ ಅವರಿಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದು, ಉತ್ತರಕ್ಕಾಗಿ ಎದುರು ನೋಡುತ್ತಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾರೆ, ಕೀರ್ತಿ ಸುರೇಶ್​ ಅನೇಕ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ರಜನಿಕಾಂತ್​ ಅಭಿನಯದ ಅಣ್ಣಾಥೆ ಚಿತ್ರದಲ್ಲೂ ಕೀರ್ತಿ ನಟಿಸಿದ್ದಾರೆ. ತಮಿಳು ಮಾತ್ರವಲ್ಲದೆ, ತೆಲುಗು ಹಾಗೂ ಮಲಯಾಳಂನಲ್ಲಿ ಕೀರ್ತಿ ಬಣ್ಣ ಹಚ್ಚಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net