ನೀವು ಸಂಪತ್ತು ಗಳಿಸಬೇಕೆಂದರೆ ಈ 5 ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇರಿಸಿ Vastu Tips

Vastu Tips
Published on

Vastu Tips: ಪ್ರತಿಯೊಬ್ಬರ ಜೀವನದಲ್ಲಿ ಏರಿಳಿತಗಳು ಸಾಮಾನ್ಯ. ಕೆಲವರಿಗೆ ಹಣಕಾಸಿನ ಸಮಸ್ಯೆ ಇರುತ್ತದೆ. ಹಾಗೆಯೇ ಇನ್ನು ಕೆಲವರಿಗೆ ಹಣ ಕೈಯಲ್ಲಿ ಇಲ್ಲದ ತಕ್ಷಣ, ಅವರ ಮೆದುಳು ಕಾರ್ಯ ನಿರ್ವಹಿಸುವುದನ್ನೇ ನಿಲ್ಲಿಸುತ್ತದೆ. ಇನ್ನು ಕೆಲವರು ಹಣವಿಲ್ಲದೇ, ಸಮಸ್ಯೆಯ ಸುಳಿಗೆ ತಲುಪುತ್ತಾರೆ. ಹಾಗಾಗಿ ವಾಸ್ತು ಶಾಸ್ತ್ರವು ಈ ಎಲ್ಲಾ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದರ ಪ್ರಕಾರ ಮನೆಯಲ್ಲಿ ಈ ರೀತಿಯ ವಸ್ತುಗಳನ್ನು ಇರಿಸುವುದರಿಂದ ನಿಮ್ಮ ಮನೆಯಲ್ಲಿ ಸಂತೋಷ, ನೆಮ್ಮದಿ , ಆದಾಯ ಯಾವಾಗಲು ನಿಮ್ಮ ಜೊತೆಲಿ ಇರುವಂತೆ ಮಾಡುತ್ತದೆ. ಹಾಗಿದ್ದರೆ ಆ ವಸ್ತುಗಳು ಯಾವುದು ಎಂದು ನೋಡೋಣ..

1. ಬಿದುರಿನ ಗಿಡ

ಬಿದುರಿನ ಗಿಡವನ್ನು ಸಂಪತ್ತು ಮತ್ತು ಲಕ್ಷ್ಮಿಯ ಸಂಕೇತ ಎಂದು ನಂಬಲಾಗುತ್ತದೆ. ಇದನ್ನು ಮನೆಯಲ್ಲಿ ನೆಡುವುದರಿಂದ ಸಮೃದ್ಧಿ ಮತ್ತು ಧನವರ್ಧನೆ ತರುತ್ತದೆ. ಹಾಗೂ ಶಿವನನ್ನು ಮೆಚ್ಚಿಸಿ ನಿಮ್ಮ ಮನೆಗೆ ಸಂಪತ್ತನ್ನು ವೃದ್ಧಿಸುತ್ತದೆ. ಈ ಗಿಡವನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಸೂರ್ಯನ ಬೆಳಕು ತಾಗುವ ಹಾಗೆ ಇಟ್ಟು ಪ್ರತಿನಿತ್ಯ ನೀರನ್ನು ಬದಲಾವಣೆ ಮಾಡಬೇಕು. ಇದು ಮನೆಯಲ್ಲಿ ಲಕ್ಷ್ಮೀಯನ್ನು ನೆಲೆಸಲು ಸಹಾಯ ಮಾಡುತ್ತದೆ.

2. ಸ್ಪಟಿಕ ಆಮೆ

ವಾಸ್ತು ಶಾಸ್ತ್ರದ ಪ್ರಕಾರ ನೀವು ಮನೆಯಲ್ಲಿ ಸ್ಪಟಿಕ ಆಮೆಯನ್ನು ಇಡುವುದರಿಂದ ಶುಭವೆಂದು ಪರಿಗಣಿಸಲಾಗುತ್ತದೆ. ಆಮೆಯನ್ನು ವಿಷ್ಣುವಿನ ಅವತಾರ ಎಂದು ನಂಬಲಾಗಿದ್ದು, ಲಕ್ಷ್ಮೀ ದೇವಿಯು ವಿಷ್ಣುವನ್ನು ಪೂಜಿಸುವುದದರಿಂದ ಸಂತೋಷವಾಗಿರುತ್ತಾಳೆ. ಹಾಗಾಗಿ ಇದನ್ನು ಮನೆಯ ಉತ್ತರ ದಿಕ್ಕಿನಲ್ಲಿ ಅಥವಾ ಪೂಜಾ ಕೋಣೆಯಲ್ಲಿ ಇಡಬೇಕು. ಇದು ಮನೆಗೆ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.

3. ಪಿರಮಿಡ್​

ಮನೆಯಲ್ಲಿ ಸ್ಫಟಿಕ ಅಥವಾ ಲೋಹದ ಪಿರಮಿಡ್ ಇಡುವುದರಿಂದ ಹಣಕಾಸು ಸಮೃದ್ಧಿಯಾಗಿರುತ್ತದೆ. ನೀವೆನಾದರೂ ಲಕ್ಷ್ಮೀ ದೇವಿಯ ಆಶೀರ್ವಾದವನ್ನು ಬಯಸಿದರೆ ನಿಮ್ಮ ಮನೆಯಲ್ಲಿ ಈ ಪಿರಮಿಡ್​ನ್ನು ಇಡಿ. ಇದು ನಿಮ್ಮ ಮನೆಗೆ ಸಂಪತ್ತನ್ನು ಹೆಚ್ಚಿಸುತ್ತದೆ. ಹಾಗೆಯೇ ನಿಮ್ಮ ಮನೆ ಒಳಗೆ ಸಕರಾತ್ಮಕ ಪರಿಣಾಮ ಬೀರುವಂತೆ ಮಾಡುತ್ತದೆ.

4. ಕುಬೇರ ವಿಗ್ರಹ

ಲಕ್ಷ್ಮಿ ಹಾಗೂ ಕುಬೇರ ದೇವ ಇಬ್ಬರೂ ಸಂಪತ್ತಿನ ದೇವರುಗಳೆಂದು ಪರಿಗಣಿಸಲಾಗುತ್ತದೆ. ನೀವೇನಾದರೂ ಸಂಪತ್ತನ್ನು ಬಯಸಿದರೆ ಕುಬೇರನ ವಿಗ್ರಹವನ್ನು ಮನೆಯಲ್ಲಿಟ್ಟು ಪೂಜೆ ಮಾಡಿ. ಇದು ನಿಮ್ಮನ್ನು ಆರ್ಥಿಕವಾಗಿ ಸಂಪನ್ನರಾಗಿ ಮಾಡುತ್ತದೆ. ಹಾಗೇ ಕುಬೇರನ ಆಶೀರ್ವಾದ ಇದ್ದಲ್ಲಿ ನಿಮ್ಮ ಮನೆಯಲ್ಲಿ ಎಂದಿಗೂ ಹಣದ ಕೊರತೆ ಎದುರಾಗುವುದಿಲ್ಲ.

5. ತುಳಸಿ ಗಿಡ

ಹಿಂದೂ ಧರ್ಮದಲ್ಲಿ ತುಳಸಿಯನ್ನು ಬಹಳ ಪವಿತ್ರವೆಂದು ಕರೆಯಲಾಗುತ್ತದೆ. ಇದನ್ನು ನಿಮ್ಮ ಮನೆಯಲ್ಲಿ ನೆಡುವುದರಿಂದ ಧನಾತ್ಮಕ ಶಕ್ತಿಗಳು ಹೆಚ್ಚಾಗಿ ನಕರಾತ್ಮಕತೆಯು ನಿಮ್ಮ ಮನೆಯಿಂದ ದೂರ ಆಗುತ್ತದೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ತುಳಸಿಗೆ ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿ ಸಂಪನ್ನರಾಗಿರುತ್ತಾಳೆ. (ಏಜೆನ್ಸೀಸ್​)

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net