

Fight Erupts On Road: ಉತ್ತರ ಪ್ರದೇಶದ ಕಾನ್ಪುರದಲ್ಲಿ ಮಹಿಳೆಯೊಬ್ಬರು ತನ್ನ ಗಂಡ ಆತನ ಗೆಳತಿಯೊಂದಿಗೆ ಇರುವುದನ್ನು ನೋಡಿದ ನಂತರ, ಅವರನ್ನು ನಡುರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿಸಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್ ಆಗಿದೆ.
ಕಾನ್ಪುರದ ನರ್ವಾಲ್ ಬಳಿ ಮಹಿಳೆಯು ತನ್ನ ಪತಿ ಬೇರೆ ಹೆಣ್ಣಿನೊಂದಿಗೆ ಓಡಾಡುತ್ತಿರುವುದನ್ನು ನೋಡಿದ್ದಾಳೆ. ನಂತರ ಇದರ ಬಗ್ಗೆ ಪ್ರಶ್ನೇ ಮಾಡಲು ಪ್ರಾರಂಭಿಸಿದ್ದು, ಈ ವೇಳೆ ಮೂರು ಜನರ ನಡುವೆ ಗಲಾಟೆ ಭುಗಿಲೆದ್ದು, ಹೊಡೆದಾಡಿಕೊಳ್ಳಲು ಪ್ರಾರಂಭಿಸಿದ್ದಾರೆ.
ಈ ಹಿಂದೆ ಮಹಿಳೆಯು ತನ್ನ ಗಂಡನಿಗೆ ಅಕ್ರಮ ಸಂಬಂಧ ಇದೆ ಅನುಮಾನಿಸಿದ್ದಳು. ಗಂಡನನ್ನು ಗೆಳತಿಯೊಂದಿಗೆ ನೋಡಿ ಆಘಾತಕೊಳಗಾಗಿದ್ದಾಳೆ. ಆರಂಭದಲ್ಲಿ ಗಂಡ ಹೆಂಡತಿ ನಡುವೆ ಜಗಳ ಪ್ರಾರಂಭವಾಗಿತ್ತು. ಈ ಸಂದರ್ಭದಲ್ಲಿ ಪತಿ ಸಾರ್ವಜನಿಕರ ಮುಂದೆ ಹೆಂಡತಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ.
ಇವರಿಬ್ಬರ ಜಗಳದಲ್ಲಿ ಮಧ್ಯಪ್ರವೇಶಿಸಿದ ಗೆಳತಿಯು ಮಹಿಳೆಯೊಂದಿಗೆ ಜಗಳ ಮಾಡುತ್ತಾ, ಇಬ್ಬರು ಹೊಡೆದಾಡಿಕೊಳ್ಳುತ್ತಿರುವುದನ್ನು ಈ ವಿಡಿಯೋ ತೋರಿಸುತ್ತದೆ. ಈ ವೇಳೆ ಪತಿ ಗೆಳತಿಯನ್ನು ಬೆಂಬಲಿಸಿ ಅವಳಿಗೆ ಇನ್ನೂ ಜೋರಾಗಿ ಹೊಡಿ ಎಂದು ಕೂಗುತ್ತಿದ್ದಾನೆ.
ಈ ರೀತಿ ಇಬ್ಬರೂ ಮಹಿಳೆಯರು ಹೊಡೆದಾದಿಕೊಂಡರೂ ಸಹ ಪತಿ ದೂರದಲ್ಲಿ ಮೂಖ ಪ್ರೇಕ್ಷಕನಂತೆ ನಿಂತಿದ್ದನ್ನು ಕಂಡ ಸಾರ್ವಜನಿಕರು ಆತನಿಗೆ ಜಗಳ ಬಿಡಿಸಲು ಹೇಳಿದ್ದಾರೆ. ಆ ವ್ಯಕ್ತಿ ಮಧ್ಯಪ್ರವೇಶಿಸಿ ಜಗಳ ನಿಲ್ಲಿಸಲು ಪ್ರಯತ್ನಿಸಿದರೂ ಅವರಿಬ್ಬರು ಆತನ ಮಾತನ್ನು ಕೇಳದೇ ಮತ್ತೆ ಕೂಗುತ್ತಿರುವುದನ್ನು ಈ ವಿಡಿಯೋ ತೋರಿಸುತ್ತದೆ. (ಏಜೆನ್ಸೀಸ್)