ಕಯ್ಯಾರರ ಜೀವನ ಅಚ್ಚರಿಯೊಂದಿಗೆ ಅನುಕರಣೀಯ : ಡಾ.ಶ್ರೀಧರ ಎನ್. ಅಭಿಮತ

Published on

ಮಂಜೇಶ್ವರ: ಕಯ್ಯಾರರು ಬಹುಮುಖ ಆಯಾಮಗಳಲ್ಲಿ ಕಾರ್ಯನಿರ್ವಹಿಸಿದವರು. ಸಾಹಿತ್ಯವಷ್ಟೇ ಅಲ್ಲದೆ, ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ, ವಿಲೀನೀಕರಣ ಹೋರಾಟಗಳೇ ಮೊದಲಾದ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದವರು. ಅವರ ವೈವಿಧ್ಯಮಯ ಜೀವನ ಹೊಸ ತಲೆಮಾರಿಗೆ ಅಚ್ಚರಿಯೊಂದಿಗೆ ಅನುಕರಣೀಯ ಎಂದು ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಶ್ರೀಧರ ಎನ್. ಹೇಳಿದರು.

ಕರ್ನಾಟಕ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಹಾಗೂ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಶನಿವಾರ ಕಾಲೇಜಿನ ಕನ್ನಡ ವಿಭಾಗ ಸಭಾಂಗಣದಲ್ಲಿ ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈ ಸಮಸ್ಮರಣೆ ಮತ್ತು ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ಮೊಹಮ್ಮದಲಿ ಕೆ.ಪೆರ್ಲ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಕೇರಳ ಗಡಿನಾಡ ಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಪ್ರಾಧ್ಯಾಪಕ ಡಾ.ಪ್ರಸನ್ನ ರೈ ಕೆ., ಭುವನಪ್ರಸಾದ ಹೆಗ್ಡೆ ಉಪಸ್ಥಿತರಿದ್ದರು. ದೀಕ್ಷಿತಾ ಪ್ರಕಟಿಸಿದ ಧ್ವನಿ ಲು ಬರಹಗಳ ಸಂಕಲನವನ್ನು ಕಸಾಪ ಕೇರಳ ಗಡಿನಾಡ ಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೊಡಿ ಬಿಡುಗಡೆಗೊಳಿಸಿದರು. ಮೀಯಪದವು ವಿದ್ಯಾವರ್ಧಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ರಾಜಾರಾಮ ರಾವ್ ಟಿ. ಕೃತಿ ಪರಿಚಯಿಸಿದರು. ಕಾಲೇಜಿನ ಕಚೇರಿ ಅಧೀಕ್ಷಕ ದಿನೇಶ ಕೆ. ಶುಭಾಶಂಸನೆಗೈದರು.

ಬಳಿಕ ನಡೆದ ವಿಚಾರಗೋಷ್ಠಿಯಲ್ಲಿ ಕಯ್ಯಾರ ಕಿಞ್ಞಣ್ಣ ರೈಗಳ ಬದುಕು - ಬರಹಗಳ ವಿವಿಧ ಆಯಾಮಗಳಲ್ಲಿ ಸರ್ವಾಣಿ ಬಿ.ಕೆ., ಕಿಶನ್ ರಾಜ್, ಸೈಫನ್ ಸಾಬ್, ಅನುಪ್ರಭಾ, ಶಿವಾನಿ, ತನ್ವಿ ಪ್ರಬಂಧ ಮಂಡಿಸಿದರು. ವಿದ್ಯಾಲಕ್ಷ್ಮೀ, ನಂದಿನಿ, ಲಾವಣ್ಯ, ಪೂಜಾ, ಶಿವಾನಿ, ತನುಶ್ರೀ, ತೇಜಾಕ್ಷಿ, ಅನೂಶ ಅವರಿಂದ ಕಯ್ಯಾರರ ಕೃತಿಗಳ ಕಾವ್ಯ ಗಾಯನ ನಡೆಯಿತು. ಕಸಾಪ ಕೇರಳ ಗಡಿನಾಡ ಘಟಕ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಪ್ರೊ.ಶಿವಶಂಕರ ಪಿ. ಪ್ರಸ್ತಾವಿಸಿದರು. ಸಹಾಯಕ ಪ್ರಾಧ್ಯಾಪಕಿ ಜಯಂತಿ ಕೆ. ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಸುಜೇಶ್ ಎಸ್.ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net