2 ಕೆಜಿ ತೂಕದ ಗಾಂಜಾ ವಶ ಮಾರಾಟಗಾರನ ಬಂಧನ

drugs
Published on

ಮಂಗಳೂರು : ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳಜ್ಯೋತಿ ಜಂಕ್ಷನ್ ವಾಟರ್ ಟ್ಯಾಂಕ್ ಬಳಿ ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವಾಮಂಜೂರು ನಿವಾಸಿ ಬದ್ರುದ್ದೀನ್ (35) ಎಂಬವನನ್ನು ಬಂಧಿಸಿದ್ದಾರೆ.

ಆರೋಪಿತನಿಂದ ಸುಮಾರು ಒಟ್ಟು 2 ಕೆಜಿ ತೂಕದ ಗಾಂಜಾ ಮತ್ತು 20 ಸಾವಿರ ರೂ. ನಗದು, 1 ಮೊಬೈಲ್ ಫೋನ್, 1 ಆಟೋ ರಿಕ್ಷಾ ಸೊತ್ತುಗಳನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಿ, ಆರೋಪಿತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.

ಮಂಗಳೂರು ನಗರದ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಇವರ ನಿರ್ದೇಶನದಂತೆ, ಡಿಸಿಪಿಗಳಾದ ಮಿಥುನ್.ಹೆಚ್.ಎನ್, ರವಿಶಂಕರ್ ಮಾರ್ಗದರ್ಶನದಂತೆ ಮಂಗಳೂರು ದಕ್ಷಿಣ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ವಿಜಯಕ್ರಾಂತಿ ಅವರ ನೇತೃತ್ವದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಗವಿರಾಜು. ಆರ್.ಪಿ, ಅರುಣ್ ಕುಮಾರ್ ಡಿ. ಹಾಗೂ ಠಾಣಾ ಸಿಬ್ಬಂದಿಗಳಾದ ಹೆಚ್.ಸಿ ಕಮಲಾಕ್ಷ, ಶಶಿಧರ್, ಶಂಕ್ರಪ್ಪ ಮತ್ತು ಸಿಕಂದರ್, ಬೀರೇಂದ್ರ, ಪ್ರದೀಪ್ ಅವರು ಈ ಪ್ರಕರಣದ ಪತ್ತೆ ಕಾರ್ಯಕ್ಕೆ ಶ್ರಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net