105 ಮೀಟರ್​ ಸಿಕ್ಸ್​! ​ಟ್ರಾವಿಸ್​ ಹೆಡ್​ ಅಬ್ಬರಕ್ಕೆ​ ಕಾವ್ಯಾ ಮಾರನ್​ ಬೆರಗು​, SRH ಓನರ್​ ರಿಯಾಕ್ಷನ್​ಗೆ ಫ್ಯಾನ್ಸ್ ಫಿದಾ | Kavya Maran

ವಿಜಯವಾಣಿ (60)
Published on

Kavya Maran: ಕಳೆದ ಸೀಸನ್​ನಲ್ಲಿ 20 ಓವರ್​ ಅಂತ್ಯಕ್ಕೆ 287 ರನ್​ಗಳನ್ನು ಸಿಡಿಸುವ ಮೂಲಕ ಐಪಿಎಲ್​ ಇತಿಹಾಸದಲ್ಲಿ ಅತೀ ಹೆಚ್ಚು ರನ್ ದಾಖಲಿಸಿದ ತಂಡ ಎಂಬ ದಾಖಲೆಗೆ ಸಾಕ್ಷಿಯಾಗಿದ್ದ ಎಸ್​ಆರ್​ಎಚ್​, ಇಂದಿನ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 286 ರನ್​ ಕಲೆಹಾಕಿತು. ಎಸ್​ಆರ್​ಎಚ್​ ನೀಡಿದ 287 ಬೃಹತ್ ಮೊತ್ತದ ಗುರಿಯನ್ನು ಬೆನ್ನಟ್ಟಿರುವ ರಾಜಸ್ಥಾನ ಪಡೆ, ಭಾರೀ ಪೈಪೋಟಿಯಲ್ಲಿ ತೊಡಗಿದೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್​ಆರ್​ಎಚ್​ ಪರ ಇಶಾನ್ ಕಿಶನ್ ಮತ್ತು ಟ್ರಾವಿಸ್​ ಹೆಡ್​ ಅಬ್ಬರದ ಬ್ಯಾಟಿಂಗ್ ನಡೆಸಿದರು. ಇವರಿಬ್ಬರ ಪೈಕಿ ಹೆಡ್​ ಮೈದಾನದ ಸುತ್ತಮುತ್ತ ಸ್ಫೋಟಕ ಸಿಕ್ಸರ್​ಗಳನ್ನು ಸಿಡಿಸಿದರು. ಇದರಲ್ಲಿ ಒಂದು ಸಿಕ್ಸರ್​ 105 ಮೀ. ಹೋಗಿದ್ದು, ಸ್ಟೇಡಿಯಂನಲ್ಲಿ ಜಮಾಯಿಸಿದ್ದ ಕ್ರಿಕೆಟ್ ಅಭಿಮಾನಿಗಳ ಹುಬ್ಬೇರಿಸಿತು.

ತಾನೊಬ್ಬ ಬಲಿಷ್ಠ ಬ್ಯಾಟರ್ ಎಂಬುದನ್ನು 105 ಮೀ. ಸ್ಫೋಟಕ ಸಿಕ್ಸರ್​ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮುಂದೆ ಸಾಬೀತುಪಡಿಸಿದ ಟ್ರಾವಿಸ್​, ಕೇವಲ ಫ್ಯಾನ್ಸ್​ಗಳನ್ನು ಮಾತ್ರವಲ್ಲದೇ ತಮ್ಮ ಫ್ರಾಂಚೈಸಿಯ ಮಾಲೀಕಿ ಕಾವ್ಯಾ ಮಾರನ್​ರನ್ನು ಖುಷಿ ಪಡಿಸುವಲ್ಲಿ ಯಶಸ್ವಿಯಾದರು. ಹೆಡ್ ಬಾರಿಸಿದ ಸಿಕ್ಸರ್​ ನೋಡಿದ ಕಾವ್ಯ ಮಾರನ್, ಕ್ಯಾಮರಾ ಕಣ್ಣಿಗೆ ಸೆರೆಯಾಗುವಂತೆ ತಮ್ಮ ಆಶ್ಚರ್ಯ, ಖುಷಿಯನ್ನು ವ್ಯಕ್ತಪಡಿಸಿದರು. ಸದ್ಯ ಈ ದೃಶ್ಯಗಳು ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net