ಹೆಬ್ಬಾರ್‌ರ ವ್ಯಕ್ತಿತ್ವ ಎಲ್ಲರಿಗೂ ಮಾದರಿ

kavitha
ಅಸೀಮ-ದಿಗಂತದಾಚೆಯ ಬೆಳಕು ಕಾರ‌್ಯಕ್ರಮದಡಿ ಒಂದಿಷ್ಟು ಹೊತ್ತು ಮಾತುಕತೆ ಗಾಯನ, ಕವಿತಾ ವಾಚನ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಜಿಲ್ಲಾ ಕಾರ‌್ಯದರ್ಶಿ ನರೇಂದ್ರ ಕುಮಾರ್ ಕೋಟ, ತಾಲೂಕು ಕಾರ‌್ಯದರ್ಶಿ ಅಕ್ಷತಾ ಗಿರೀಶ್, ಕಲಾಕ್ಷೇತ್ರ ಟ್ರಸ್ಟ್ ಕುಂದಾಪುರದ ಬಿ.ಕಿಶೋರ್ ಕುಮಾರ್, ರಾಜೇಶ್ ಕಾವೇರಿ ಮತ್ತಿತರರು ಉಪಸ್ಥಿತರಿದ್ದರು.
Published on

ಕುಂದಾಪುರ: ಸರಳ ಸಜ್ಜನಿಕೆಯ ಹೆಬ್ಬಾರ್ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ. ಅವರ ಜೀವನ ಪ್ರೀತಿ ಹಾಗೂ ಸಾಹಿತ್ಯ ಪ್ರೀತಿ ಕನ್ನಡ ಸಾಹಿತ್ಯ ಪರಿಷತ್‌ಗೆ ಮೇಲ್ಪಂಕ್ತಿಯಿದ್ದಂತೆ ಎಂದು ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕುಂದಾಪುರ ತಾಲೂಕು ಘಟಕ ಆಶ್ರಯದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ ಸ್ಥಾಪಕಾಧ್ಯಕ್ಷ ಎ.ಎಸ್.ಎನ್.ಹೆಬ್ಬಾರ್ ಅವರೊಂದಿಗೆ ಅಸೀಮ-ದಿಗಂತದಾಚೆಯ ಬೆಳಕು ಕಾರ‌್ಯಕ್ರಮದಡಿ ಕುಂದಾಪುರದ ಎ.ಎಸ್.ಎನ್.ಹೆಬ್ಬಾರ್ ಅವರ ನಿವಾಸ ‘ನುಡಿ’ಯಲ್ಲಿ ಭಾನುವಾರ ಒಂದಿಷ್ಟು ಹೊತ್ತು ಮಾತುಕತೆ ಗಾಯನ, ಕವಿತಾ ವಾಚನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಸಾಪ ವತಿಯಿಂದ ಎ.ಎಸ್.ಎನ್.ಹೆಬ್ಬಾರ್ ಹಾಗೂ ಸುಧಾ ಹೆಬ್ಬಾರ್ ದಂಪತಿಯನ್ನು ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಘಟಕ ಅಧ್ಯಕ್ಷ ಕುಂದಾಪುರದ ಡಾ.ಉಮೇಶ್ ಪುತ್ರನ್, ಉಡುಪಿಯ ರವಿರಾಜ್ ಎಚ್.ಪಿ., ಕಾಪುವಿನ ಪುಂಡಲೀಕ ಮರಾಠೆ, ಕಾರ್ಕಳದ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಬೈಂದೂರಿನ ರಘು ನಾಯ್ಕ, ಬ್ರಹ್ಮಾವರದ ಗುಂಡ್ಮಿ ರಾಮಚಂದ್ರ ಐತಾಳ್, ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ, ಲೇಖಕಿ ಪಾರ್ವತಿ ಜಿ.ಐತಾಳ್ ಮಾತನಾಡಿದರು. ಜಿಲ್ಲಾ ಕಾರ‌್ಯದರ್ಶಿ ನರೇಂದ್ರ ಕುಮಾರ್ ಕೋಟ, ತಾಲೂಕು ಕಾರ‌್ಯದರ್ಶಿ ಅಕ್ಷತಾ ಗಿರೀಶ್, ಕಲಾಕ್ಷೇತ್ರ ಟ್ರಸ್ಟ್ ಕುಂದಾಪುರದ ಬಿ.ಕಿಶೋರ್ ಕುಮಾರ್, ರಾಜೇಶ್ ಕಾವೇರಿ ಮತ್ತಿತರರು ಉಪಸ್ಥಿತರಿದ್ದರು. ತಾಲೂಕು ಕಾರ‌್ಯದರ್ಶಿ ದಿನಕರ ಆರ್.ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಕಾರ‌್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಆಶಯ ನುಡಿಗಳನ್ನಾಡಿದರು. ಸಂಘಟನಾ ಕಾರ್ಯದರ್ಶಿ ಸತೀಶ್ ವಡ್ಡರ್ಸೆ ಕಾರ‌್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net