ಕತ್ರಿನಾ ತೊಟ್ಟ ಮದುವೆ ಲೆಹೆಂಗಾದ ಬೆಲೆ ಎಷ್ಟು ಗೊತ್ತಾ? ನಟಿ ತೊಟ್ಟ ಪ್ಲಾಟಿನಮ್ ಉಂಗುರದ ಬೆಲೆ ಕೇಳಿದರೆ ನೀವು ಪಕ್ಕಾ ಶಾಕ್!

Published on
ಮದುವೆ ಅಂದರೆ ಮಿಡಿಲ್ ಕ್ಲಾಸ್ ಅವರು ಸಾಲ ಮಾಡಿ ಆದರೂ ಅದ್ಧೂರಿಯಾಗಿ ಈ ಸಂಭ್ರಮವನ್ನು ಆಚರಿಸುತ್ತಾರೆ. ಅಂತಹದ್ದು ಸಿನಿ ತಾರೆಯರ ಮದುವೆ ಅಂದರೆ ಅದೆಷ್ಟು ಲಕ್ಷ, ಕೋಟಿ ಖರ್ಚು ಆಗುತ್ತೆ ಅಂತ ನಿಮಗೆ ಗೊತ್ತಿದೆ. ಇನ್ನು ಇತ್ತೀಚೆಗೆ ನಡೆದ ಸ್ಟಾರ್ ನಟರ ಮದುವೆ ಅಂದರೆ ಅದು ಬಾಲಿವುಡ್​​ನ ಹಾಟ್ ಬೆಡಗಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಅವರದ್ದು. ಇವರ ಮದುವೆ ಗುಟ್ಟಾಗಿ ನಡೆದರು ಎಲ್ಲರ ಚಿತ್ತ ಇವರ ಮದುವೆಯ ಮೇಲೆಯೇ ಇತ್ತು. ಈ ನಟರಿಬ್ಬರು ಎಂತಹ ಬಟ್ಟೆ ಹಾಕಬಹುದು, ಯಾವ ತರಹದ ಆಭರಣಗಳನ್ನು ಇವರು ಧರಿಸಬಹುದು ಎಂಬುದರ ಬಗ್ಗೆನೆ ಎಲ್ಲರ ಕುತೂಹಲವಿತ್ತು. ಇಂತಹ ಸಮಯದಲ್ಲಿ ಹೊರಬಿದ್ದ ಒಂದು ಮಾಹಿತಿ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಹೌದು, ನಟಿ ಕತ್ರಿನಾ ತನ್ನ ಮದುವೆಗೆ ಧರಿಸಿದ ಕೆಂಪು ಲೆಹೆಂಗಾ ಬೆಲೆ ಎಷ್ಟು ಎಂದು ತಿಳಿದುಬಂದಿದೆ.
ಅಂದಹಾಗೆ, ತನಗೆ ಎಂದು ವಿಶೇಷವಾಗಿ ತಯಾರಾಗಿದ ಲೆಹೆಂಗಾವನ್ನು ನಟಿ ಕತ್ರಿನಾ ಅವರು ತನ್ನ ಮದುವೆ ದಿನ ಡಿ.9 ರಂದು ಧರಿಸಿದ್ದರು. ಅದರ ಬೆಲೆ ಬರೋಬ್ಬರಿ 17 ಲಕ್ಷ ರೂ. ಅಂತೆ. ಇದಲ್ಲದೆ, ನಟಿ ಕತ್ರಿನಾಗೆ ವಿಕ್ಕಿ ತೊಡಿಸಿದ ಪ್ಲಾಟಿನಮ್ ಉಂಗುರದ ಬೆಲೆ 7.4 ಲಕ್ಷ. ಗಂಡ ವಿಕ್ಕಿ ಆಯ್ಕೆ ಮಾಡಿದ ಉಂಗುರವನ್ನೆ ಒಪ್ಪಿಕೊಂಡು ಧರಿಸಿದ್ದರಂತೆ ಕತ್ರಿನಾ. ಸಿನಿ ತಾರೆಯರ ಮದುವೆ ಅಂದರೆ ಇಷ್ಟು ಅದ್ಧೂರಿಯಾಗಿ ಇರುತ್ತೆ. ಬೇರೆ ಬಾಲಿವುಡ್ ನಟಿಯರ ಸಾಲಿನಲ್ಲೆ ನಟಿ ಕತ್ರಿನಾ ಅವರ ಲೆಹೆಂಗಾ ಬೆಲೆಯೂ ಇತ್ತು. ಹೌದು, ನಟಿ ದೀಪಿಕಾ ಪಡುಕೋಣೆ ತಮ್ಮ ಮದುವೆಗೆ ತೊಟ್ಟ ಲೆಹೆಂಗಾ ಬೆಲೆ 12 ಲಕ್ಷ ರೂ ಆದರೆ, ನಟಿ ಪ್ರಿಯಾಂಕಾ ಚೋಪ್ರಾ ಅವರ ಮದುವೆ ಲೆಹೆಂಗಾ ಬರೋಬ್ಬರಿ 18 ಲಕ್ಷ ರೂಪಾಯಿಯಾಗಿತ್ತು. ಅನುಷ್ಕಾ ಶರ್ಮಾ ಅವರ ಲೆಹೆಂಗಾ ಕೂಡ ಹೆಚ್ಚು ಕಡಿಮೆ 8 ಲಕ್ಷ. ಸಿನಿ ಸೆಲೆಬ್ರಿಟಿಗಳು ತೊಡುವ ಬಟ್ಟೆ, ಆಭರಣಗಳ ಬೆಲೆಯೇ ಇಷ್ಟು ಇದ್ದರೆ, ಮತ್ತೆ ಅವರ ಮದುವೆಯ ಖರ್ಚು ಅದೆಷ್ಟು ಇರಬಹುದು ಎಂದು ಈಗ ಎಲ್ಲರು ಹುಬ್ಬೆರಿಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net