More

    ಆಂಧ್ರದಲ್ಲಿ ಸಿನಿಮಾ ಟಿಕೆಟ್ ದರ ಎಷ್ಟು ಇಳಿದಿದೆ ಗೊತ್ತಾ? ಜಗನ್ ಸರ್ಕಾರದ ಮೇಲೆ ತೆಲುಗು ಚಿತ್ರರಂಗ ಗರಂ ಆಗಿದ್ದೇಕೆ?

    ಆಂಧ್ರ ಪ್ರದೇಶ: ಸಿನಿ ಪ್ರೇಕ್ಷಕರು ಇಷ್ಟು ವರ್ಷಗಳು ತಮಗೆ ಇಷ್ಟವಾದ ಸಿನಿಮಾಗಳನ್ನು ನೋಡಲು ಚಿತ್ರಮಂದಿರಗಳಲ್ಲಿ ಕ್ಯೂನಲ್ಲಿ ನಿಂತು ಟಿಕೆಟ್ ಖರೀದಿಸುತ್ತಿದ್ದರು ಅಥವಾ ಆನ್​​ಲೈನ್​​ನಲ್ಲಿ ಬುಕ್ ಮಾಡಿಕೊಳ್ಳುತ್ತಿದ್ದರು. ಆದರೆ, ಹಲವು ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿದ್ದ ಈ ಪದ್ಧತಿಗಳಿಗೆ ಆಂಧ್ರ ಪ್ರದೇಶದ ಸರ್ಕಾರ ಈಗಾಗಲೇ ಫುಲ್​​ಸ್ಟಾಪ್ ಇಟ್ಟಿದೆ. ಆಂಧ್ರದ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಸರ್ಕಾರದ ಹೊಸ ನಿಯಮದ ಪ್ರಕಾರ ಸಿನಿಮಾ ನೋಡಲು ಸರ್ಕಾರದ ಆನ್​​ಲೈನ್ ವೇದಿಕೆಯ ಮೂಲಕವೇ ಟಿಕೆಟ್ ಖರೀದಿಸಬೇಕಾಗುತ್ತೆ. ಜೊತೆಗೆ, ಸರ್ಕಾರವೇ ಒಂದು ಸಿನಿಮಾದ ಎಷ್ಟು ಶೋಗಳನ್ನು ಪ್ರದರ್ಶನ ಮಾಡಬೇಕು, ಟಿಕೆಟ್​​ಗಳ ಬೆಲೆ ಎಷ್ಟು ಇರಬೇಕು ಎಂಬುದು ಸಹ ನಿರ್ಧರಿಸಲಿದೆ. ಹೀಗೆಂದು, ಆಂಧ್ರ ಸರ್ಕಾರ ಹೊಸ ಬಿಲ್ ಅನ್ನು ಪಾಸ್ ಮಾಡಿದೆ. ಈ ವಿಚಾರ ಟಾಲಿವುಡ್​ನವರ ನಿದ್ದೆ ಗೆಡಿಸಿದೆ.
    .24 ರಂದು ಆಂಧ್ರ ಪ್ರದೇಶ ಸರ್ಕಾರ ವಿಧಾನ ಪರಿಷತ್​​ನಲ್ಲಿ ಸಿನಿಮಾ ಟಿಕೆಟ್ ವಿತರಣೆಗೆ ಸಂಬಂಧಿಸಿದಂತೆ ಹೊಸ ರೂಲ್ಸ್​​ಗಳ ವಿಷಯ ಪ್ರಸ್ತಾಪಿಸಿದ್ದು, ಅದಕ್ಕೆ ಅಂಗೀಕಾರ ಸಿಕ್ಕಿತ್ತು. ಆಂಧ್ರದ್ದೇ ಸಿನಿಮಾ ರೆಗ್ಯೂಲೇಷನ್ ಕಾಯ್ದೆಯ ಅಡಿಯಲ್ಲಿ ಈ ಹೊಸ ಬಿಲ್ ಜಾರಿಯಾಗಿದ್ದು, ಇದಕ್ಕೆ ತೆಲುಗು ಸಿನಿರಂಗ ತೀವ್ರ ವಿರೋಧ ವ್ಯಕ್ತಪಡಿಸಿತು. ಟಿಕೆಟ್ ದರ ಏರಿಸಿ ಎಂದು ತೆಲುಗು ಸಿನಿರಂಗ ವಿನಂತಿಸಿದರೆ, ಅದರ ಬದಲಿಗೆ ಹೊಸ ರೂಲ್ಸ್ ಮಾಡಿ ನಮ್ಮ ಹೊಟ್ಟೆಯ ಮೇಲೆ ಹೊಡೆಯುತ್ತಿದೆ ಜಗನ್ ಸರ್ಕಾರ ಎಂದು ಆಕ್ರೋಶ ವ್ಯಕ್ತವಾಗಿತ್ತು. ನಟ ಪವನ್ ಕಲ್ಯಾಣ್ ಅಂತು, ”ನಾವು ಕಷ್ಟ ಪಟ್ಟು ಮಾಡುವ ಸಿನಿಮಾಗೆ ನೀನು ಹೇಗೆ ದರ ನಿರ್ಧರಿಸುವೆ? ನಮ್ಮ ಸಿನಿಮಾ ಮಾರಾಟ ಮಾಡಲು ನೀನು ಯಾರು?”, ಎಂದು ಜಗನ್ ಅವರನ್ನು ಏಕವಚನದಲ್ಲಿ ನಿಂದಿಸಿದ್ದಾರೆ

    ಆಂಧ್ರದಲ್ಲಿ ಸಿನಿಮಾ ಟಿಕೆಟ್ ದರ ಎಷ್ಟು ಇಳಿದಿದೆ ಗೊತ್ತಾ? ಜಗನ್ ಸರ್ಕಾರದ ಮೇಲೆ ತೆಲುಗು ಚಿತ್ರರಂಗ ಗರಂ ಆಗಿದ್ದೇಕೆ?

    ಆಂಧ್ರದಲ್ಲಿ ಹೊಸ ಟಿಕೆಟ್ ದರಗಳು: ಇಷ್ಟು ವಿರೋಧವನ್ನು ಲೆಕ್ಕಿಸದ ಜಗನ್ ಸರ್ಕಾರ ಇದೀಗ ಟಿಕೆಟ್ ದರವನ್ನು ನಿಗದಿ ಮಾಡಿದೆ. ಆಂಧ್ರ ಪ್ರದೇಶದಲ್ಲಿ ಹೊಸ ಆದೇಶದಂತೆ ಮುನ್ಸಿಪಲ್ ಕಾರ್ಪೊರೇಶನ್ ವ್ಯಾಪ್ತಿಯಲ್ಲಿನ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಪ್ರೀಮಿಯಂ ಟಿಕೆಟ್ ದರ 250 ರೂ, ಡಿಲಕ್ಸ್ ವಿಭಾಗ ದರ 150 ರೂ, ಎಕಾನಮಿ ಕ್ಲಾಸ್ 75 ರೂ ದಾಟುವಂತಿಲ್ಲ. ಇನ್ನು, ಎಸಿ ಥಿಯೇಟರ್​​ಗಳಲ್ಲಿ ಪ್ರೀಮಿಯಂ ಟಿಕೆಟ್ ದರ 100 ರೂ, ಡಿಲಕ್ಸ್ ವಿಭಾಗ ದರ 60 ರೂ, ಎಕಾನಮಿ ಕ್ಲಾಸ್ 40 ರೂ ಮತ್ತು ನಾನ್ ಎಸಿ ಥಿಯೇಟರ್​​ಗಳಲ್ಲಿ ಪ್ರೀಮಿಯಂ ಟಿಕೆಟ್ ದರ 60 ರೂ, ಡಿಲಕ್ಸ್ ವಿಭಾಗ ದರ 40 ರೂ, ಎಕಾನಮಿ ಕ್ಲಾಸ್ 20 ರೂ ಮಾತ್ರ ಇರಬೇಕು. ಮತ್ತೊಂದೆಡೆ, ಮುನ್ಸಿಪಾಲಿಟಿ ಪ್ರಾಂಥ್ಯದಲ್ಲಿ ಮಲ್ಟಿಪ್ಲಕ್ಸ್​ಗಳ ಪ್ರೀಮಿಯಂ ಟಿಕೆಟ್ ದರ 150 ರೂ, ಡಿಲಕ್ಸ್ ವಿಭಾಗ ದರ 100 ರೂ, ಎಕಾನಮಿ ಕ್ಲಾಸ್ 60 ರೂ ದಾಟುವಂತಿಲ್ಲ. ಎಸಿ ಥಿಯೇಟರ್​​ಗಳಲ್ಲಿ ಪ್ರೀಮಿಯಂ ಟಿಕೆಟ್ ದರ 70 ರೂ, ಡಿಲಕ್ಸ್ ವಿಭಾಗ ದರ 50 ರೂ, ಎಕಾನಮಿ ಕ್ಲಾಸ್ 30 ರೂ ಮತ್ತು ನಾನ್ ಎಸಿ ಥಿಯೇಟರ್​​ಗಳಲ್ಲಿ ಪ್ರೀಮಿಯಂ ಟಿಕೆಟ್ ದರ 50 ರೂ, ಡಿಲಕ್ಸ್ ವಿಭಾಗ ದರ 30 ರೂ, ಎಕಾನಮಿ ಕ್ಲಾಸ್ 15 ರೂ ಗೆ ನಿಗಧಿ ಪಡಿಸಲಾಗಿದೆ.
    ಇನ್ನು, ನಗರ ಪಂಚಾಯಿತಿ ವ್ಯಾಪ್ತಿಯಲ್ಲಿನ ಮಲ್ಟಿಪ್ಲೆಕ್ಸ್ ಪ್ರೀಮಿಯಂ ಟಿಕೆಟ್ ದರ 120 ರೂ, ಡಿಲಕ್ಸ್ ವಿಭಾಗ ದರ 80 ರೂ, ಎಕಾನಮಿ ಕ್ಲಾಸ್ 40 ರೂ ದಾಟುವಂತಿಲ್ಲ. ಎಸಿ ಥಿಯೇಟರ್​​ಗಳಲ್ಲಿ ಪ್ರೀಮಿಯಂ ಟಿಕೆಟ್ ದರ 35 ರೂ, ಡಿಲಕ್ಸ್ ವಿಭಾಗ ದರ 25 ರೂ, ಎಕಾನಮಿ ಕ್ಲಾಸ್ 15 ರೂ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಮಲ್ಟಿಪ್ಲೆಕ್ಸ್ ಪ್ರೀಮಿಯಂ ಟಿಕೆಟ್ ದರ 80 ರೂ, ಡಿಲಕ್ಸ್ ವಿಭಾಗ ದರ 50 ರೂ, ಎಕಾನಮಿ ಕ್ಲಾಸ್ 30 ರೂ ದಾಟುವಂತಿಲ್ಲ ಮತ್ತು ಎಸಿ ಥಿಯೇಟರ್​​ಗಳಲ್ಲಿ ಪ್ರೀಮಿಯಂ ಟಿಕೆಟ್ ದರ 20 ರೂ, ಡಿಲಕ್ಸ್ ವಿಭಾಗ ದರ 15 ರೂ, ಎಕಾನಮಿ ಕ್ಲಾಸ್ 10 ರೂ ದಾಟುವಂತಿಲ್ಲ. ನಾನ್ ಎಸಿ ಥಿಯೇಟರ್​​ಗಳಲ್ಲಿ ಪ್ರೀಮಿಯಂ ಟಿಕೆಟ್ ದರ 15 ರೂ, ಡಿಲಕ್ಸ್ ವಿಭಾಗ ದರ 10 ರೂ, ಎಕಾನಮಿ ಕ್ಲಾಸ್ 5 ರೂ ಮೀರುವಂತಿಲ್ಲ. ಈ ಹೊದ ದರದ ಮೇಲೆ ಟಿಕೆಟ್ ಮಾರಿದರೆ ಚಿತ್ರಮಂದಿರಗಳ ಮಾಲೀಕರಿಗೆ ಮತ್ತು ಸಿನಿಮಾ ಚಿತರಕರಿಗೆ ಕಠಿಣ ಶಕ್ಷೆಯಾಗುತ್ತೆ. ಇದರಿಂದ ಇತ್ತೀಚೆಗೆ ಬಿಡುಗಡೆಯಾದ ಅಖಂಡಸಿನಿಮಾ ಜೊತೆಗೆ ಬೇರೆ ಬೇರೆ ಸಿನಿಮಾಗಳ ಇದೇ ದರದ ಮೇಲೆ ಪ್ರದರ್ಶನ ಕಾಣುತ್ತಿವೆ.
    ಸರ್ಕಾರದ ಹೊಸ ನಿಯಮಗಳಿಗೆ ಕಾರಣ: ಜಗನ್ ಸರ್ಕಾರದ ಈ ಟಿಕೆಟ್ ಬೆಲೆಯನ್ನು ಕಂಡು ದಂಗಾದ ತೆಲುಗು ಚಿತ್ರರಂಗ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದೆ. ಜಗನ್ ಸರ್ಕಾರ ಮತ್ತು ತೆಲುಗು ಚಿತ್ರರಂಗದ ನಡುವಿನ ತಿಕ್ಕಾಟ ತೀವ್ರ ಜೋರಾಗಿದೆ. ಸ್ಟಾರ್ ನಟರು ಸಹ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವುದಲ್ಲದೆ, ಚಿತ್ರಮಂದಿರ ಮಾಲೀಕರ ಸಂಘದವರು ಸರ್ಕಾರದ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಅಂದಹಾಗೆ, ಹೊಸ ರೂಲ್ಸ್ ಮಾಡಲು ಕಾರಣ ಒಂದೇ ಸಿನಿಮಾದ ಅಧಿಕ ಶೋಗಳು ಇರುವುದಿಲ್ಲಾ ಮತ್ತು ಅಧಿಕ ಟಿಕೆಟ್ ಬೆಲೆಗೂ ಕತ್ತರಿ ಬೀಳಬೇಕೆಂದು. ಸಾಮಾನ್ಯವಾಗಿ ಸ್ಟಾರ್ ನಟರ ಸಿನಿಮಾಗಳೂ ರಿಲೀಸ್ ಆದರೆ ಒಂದು ದಿನದಲ್ಲೇ ಮಿನಿಮಮ್ 6 ಶೋಗಳನ್ನು ನಡೆಸುತ್ತಾರೆ ವಿತರಕರು. ಜೊತೆಗೆ, ಟಿಕೆಟ್ ಬೆಲೆ ಕೂಡ 500 ರಿಂದ 1000 ದಾಟುತ್ತವೆ. ಇನ್ನು ಹಲವು ವಿತರಕರು, ನಿರ್ಮಾಪಕರು ತೆರಿಗೆ ವಂಚಿಸುತ್ತಾರೆಂಬ ಆರೋಪಗಳು ಸಹಜವಾಗಿಯೇ ಹಲವು ವರ್ಷಗಳಿಂದ ಕೇಳಿಬರುತ್ತಿವೆ. ಇದಕ್ಕೆಲ್ಲಾ ಬ್ರೇಕ್ ಬೀಳಬೇಕೆಂದು ಆಂಧ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
    ತೆಲುಗು ಸಿನಿರಂಗದ ವಿರೋಧಕ್ಕೆ ಕಾರಣಗಳು: ಹೊಸ ನಿಯಮಗಳು ಸಣ್ಣ ಪುಟ್ಟ ಸಿನಿಮಾಗಳ ನಿರ್ಮಾಪಕರಿಗೆ ಅಷ್ಟೇನೂ ಹಾನಿ ಮಾಡುವುದಿಲ್ಲ. ಬದಲಿಗೆ ಕೋಟಿ ಕೋಟಿ ರೂಪಾಯಿ ಸುರಿದು ಮಾಡಿರುವ ‘ಆರ್​​​ಆರ್​​ಆರ್’, ‘ರಾಧೆ’, ‘ಪುಷ್ಪ’ ದಂತಹ ದೊಡ್ಡ ಸಿನಿಮಾಗಳ ನಿರ್ಮಾಪಕರಿಗೆ ನಷ್ಟ ಎಂದೇ ಹೇಳಬೇಕು. ಟಿಕೆಟ್ ದರ ಏರಿಸದಿದ್ದರೆ, ಹೆಚ್ಚು ಶೋಗಳನ್ನು ನಡೆಸದಿದ್ದರೆ ನಿರ್ಮಾಪಕರು ಚಿತ್ರದ ಮೇಲೆ ಹಾಕಿರುವ ಬಂಡವಾಳ ವಾಪಸ್ಸು ಬರುವುದಿಲ್ಲ. ಜೊತೆಗೆ, ಹಾಲಿವುಡ್​ನವರ ಜತೆ ಸೇರಿಕೊಂಡು ಜಗನ್ ಸರ್ಕಾರ ತೆಲುಗು ಚಿತ್ರರಂಗದ ವಿರುದ್ಧ ಸಂಚು ಹೂಡಿದೆ ಎನ್ನಲಾಗಿದೆ. ತೆಲುಗು ಸಿನಿಮಾಗಳು ಓಡಿಸದೆ ಇರಲು ಜಗನ್ ಹಾಲಿವುಡ್​ನವರಿಂದ ದುಡ್ಡು ನುಂಗಿದ್ದಾರೆ ಎಂಬ ಆರೋಪ ಸಹ ಕೇಳಿಬಂದಿದೆ. ಒಟ್ಟಿನಲ್ಲಿ, ಈ ವಿಚಾರಕ್ಕೆ ಸಂಬಂಧ ಪಟ್ಟ ಹಾಗೆ ಆಂಧ್ರ ಸರ್ಕಾರದ ಮತ್ತು ತೆಲುಗು ಚಿತ್ರರಂಗದ ಮುಂದಿನ ನಡೆ ಏನು ಎಂಬುದು ಕಾದುನೋಡಬೇಕಿದೆ.

    71ನೇ ವಸಂತಕ್ಕೆ ಕಾಲಿಟ್ಟ ತಲೈವಾಗೆ ಶುಭಾಶಯಗಳ ಮಹಾಪೂರ: ರಜನಿ ಬಗ್ಗೆ ನಿಮಗೆ ತಿಳಿಯಬೇಕಾದ 12 ವಿಶೇಷ ಸಂಗತಿಗಳು!

    ಹಾಸ್ಯನಟ ಸಂಜು ಬಸಯ್ಯ ಅವರದ್ದು 8 ವರ್ಷಗಳ ಪ್ರೀತಿ! ಪ್ರೇಯಸಿ ಜೊತೆಗಿನ ಫೋಟೋಗಳು ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts