ಮುಂದುವರೆದಿದೆ ಕರೊನಾ ಅಟ್ಟಹಾಸ: ಶೇ.50ರಷ್ಟು ಮಂದಿ ಬಿಡುಗಡೆಯಾಗಿದ್ದೇ ಸಮಾಧಾನ

Corona virus
Published on

ಬೆಂಗಳೂರು: ರಾಜ್ಯದಲ್ಲಿ ಕರೊನಾ ಅಟ್ಟಹಾಸ ಮುಂದುವರೆದಿದೆ. ಒಂದೇ ದಿನದಲ್ಲಿ 48 ಸೋಂಕಿತರು ಹೊಸದಾಗಿ ಪತ್ತೆಯಾಗಿದ್ದಾರೆ. ಅದರಲ್ಲಿಯೂ ದಾವಣಗೆರೆ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಬೆಳಗಾವಿಯ ಹಿರೇಬಾಗೇವಾಡಿ ಹಾಗೂ ಬೆಂಗಳೂರು ನಗರ ಸೋಂಕಿತರ ಗೂಡಾಗುತ್ತಿದ್ದು, ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ದಾವಣಗೆರೆಯಲ್ಲಿ ಒಂದೇ ದಿನ 14 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದರೆ, ಭಟ್ಕಳದಲ್ಲಿ 12, ಹಿರೇಬಾಗೇವಾಡಿಯಲ್ಲಿ 10, ಬೆಂಗಳೂರು ನಗರದಲ್ಲಿ 7 ಪ್ರಕರಣಗಳು ದಾಖಲಾಗಿವೆ.

ಇನ್ನುಳಿದಂತೆ ಚಿತ್ರದುರ್ಗದಲ್ಲಿ 3, ಬಳ್ಳಾರಿಯಲ್ಲಿ 1 ಹಾಗೂ ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ 1 ಪ್ರಕರಣ ದಾಖಲಾಗಿದೆ.

ಈ ಮೂಲಕ ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 753ಕ್ಕೆ ಏರಿದೆ. ಈ ಪೈಕಿ 376 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.

ಒಟ್ಟಾರೆ ಸೋಂಕಿತರದಲ್ಲಿ ಶೇ.50ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ ಎನ್ನುವುದೇ ಇದೀಗ ಸಮಾಧಾನ ತಂದಿರುವ ಸಂಗತಿಯಾಗಿದೆ. ಕರೊನಾ ಸೋಂಕು ಕರ್ನಾಟಕದಲ್ಲಿ 30 ಮಂದಿಯನ್ನು ಇಲ್ಲಿಯವರೆಗೆ ಬಲಿ ಪಡೆದಿದೆ.

ಮತ್ತೊಂದು ಆಘಾತಕಾರಿ ವರದಿ ಎಂದರೆ, ನಿನ್ನೆಯಿಂದ ಪತ್ತೆಯಾಗಿರುವವರ ಪೈಕಿ ಹೆಚ್ಚಿನವರು 40 ವರ್ಷಕ್ಕಿಂತ ಕಡಿಮೆ ವಯೋಮಾನದವರು. ದಾವಣಗೆರೆಯಲ್ಲಿ 3, 8, 11 ವರ್ಷದ ಮಕ್ಕಳಿಗೂ ಸೋಂಕು ತಗುಲಿದ್ದರೆ. ಭಟ್ಕಳದಲ್ಲಿ 5 ತಿಂಗಳ ಶಿಶು, 3 ಮತ್ತು 12 ವರ್ಷದ ಮಕ್ಕಳನ್ನೂ ಕರೊನಾ ಬಿಟ್ಟಿಲ್ಲ.

ರಾಜ್ಯದ ವಿವಿಧ ಜಿಲ್ಲೆಗಳ ಕರೊನಾ ಸೋಂಕಿತರ ವಿವರ ಇಲ್ಲಿದೆ: 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net