ನವದೆಹಲಿ: ಸಾರ್ವಜನಿಕೆರಿಗೆ ಉತ್ತಮ ಕಾನೂನು ಸೇವೆ ಒದಗಿಸುವಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲೇ ಮೊದಲ ಸ್ಥಾನ ಪಡೆಯುವ ಮೂಲಕ ಹೊಸ ಹೆಗ್ಗಳಿಕೆಗೆ ಪಾತ್ರವಾಗಿದೆ.
ಟಾಟಾ ಟ್ರಸ್ಟ್ ವತಿಯಿಂದ ನಡೆಸಲಾದ ಇಂಡಿಯಾ ಜಸ್ಟಿಸ್ ರಿಪೋರ್ಟ್(IJR) ವರದಿಯಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿದ್ದು ಮೊದಲ ಮೂರು ಸ್ಥಾನಗಳನ್ನು ದಕ್ಷಿಣ ಭಅರತದ ರಾಜ್ಯಗಳು ಪಡೆದಿರುವುದು ವಿಶೇಷವಾಗಿದೆ.
ಒಂದು ಕೋಟಿಗೂ ಅಧಿಕ ಜನಸಂಖ್ಯೆ ಇರುವ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನ ಪಡೆದರೆ ತಮಿಳುನಾಡು, ತೆಲಂಗಾಣ, ಗುಜರಾತ್ ಹಾಗೂ ಆಂಧ್ರ ಪ್ರದೇಶ ನಂತರದ ಸ್ಥಾನಗಳಲ್ಲಿವೆ.
ಇದನ್ನೂ ಓದಿ: ಬಿಜೆಪಿಯವರ ಪ್ರಶ್ನೆಯನ್ನು ನೀವ್ಯಾಕೆ ಕೇಳುತ್ತೀರಾ: ರಾಹುಲ್ ಗಾಂಧಿ
ಒಂದು ಕೋಟಿಗೂ ಕಡಿಮೆ ಜನಸಂಖ್ಯೆ ಇರುವ ರಾಜ್ಯಗಳ ಪೈಕಿ ಸಿಕ್ಕಿಂ ಮೊದಲ ಸ್ಥಾನದಲ್ಲಿದ್ದು ಅರುಣಾಚಲಪ್ರದೇಶ ಹಾಗೂ ತ್ರಿಪುರ ನಂತರದ ಸ್ಥಾನಗಳಲ್ಲಿವೆ.
ಮಂಗಳವಾರ ಬಿಡುಗಡೆಯಾದ IJR ವರದಿ ಪ್ರಕಾರ ದೆಹಲಿ ಚಂಢೀಗಡವನ್ನು ಹೊರತು ಪಡಿಸಿದರೆ ಉಳಿದ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ನ್ಯಾಯಾಂಗಕ್ಕಾಗಿ ಶೇ.01ಕ್ಕಿಂತ ಹೆಚ್ಚು ಖರ್ಚು ಮಾಡುತ್ತಿಲ್ಲ. ಇಲ್ಲಿನ ಹೈಕೋರ್ಟ್ಗಳಲ್ಲಿ ಶೇ.30ಕ್ಕಿಂತ ಹೆಚ್ಚಿನ ಹೈಕೋರ್ಟ್ ನ್ಯಾಯಾಧಧೀಶರ ಹುದ್ದೆಗಳು ಖಾಲಿ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು 4.8 ಕೋಟಿ ಪ್ರಕರಣಗಳು ಬಾಕಿ ಉಳಿದಿವೆ ಮತ್ತು 10ಲಕ್ಷ ಮಂದಿಗೆ 19 ನ್ಯಾಯಾಧೀಶರಿದ್ದಾರೆ ಎಂದು IJR ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ.