More

    ಬಿಜೆಪಿಯವರ ಪ್ರಶ್ನೆಯನ್ನು ನೀವ್ಯಾಕೆ ಕೇಳುತ್ತೀರಾ: ರಾಹುಲ್ ಗಾಂಧಿ

    ನವದೆಹಲಿ: ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಸೂರತ್​ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಬಂದಿದ್ದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಗೆ ಸುದ್ದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಬಿಜೆಪಿಯವರ ಪ್ರಶ್ನೆಯನ್ನು ನೀವ್ಯಾಕೆ ಕೇಳುತ್ತೀರಾ ಎಂದು ಹೇಳುವ ಮೂಲಕ ಮಾಧ್ಯಮದವರ ಕೆಂಗಣ್ಣಿಗೆ ಗುರಿಯಾಗಿದ್ಧಾರೆ.

    ಸೋಮವಾರ ಗುಜರಾತ್​ ಕಾಂಗ್ರೆಸ್​ ಕಚೇರಿಗೆ ರಾಹುಲ್ ಆಗಮಿಸಿದ ವೇಳೆ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು, ಮುಖಂಡರು ಹಾಗೂ ನಾಯಕರು ಜಮಾಯಿಸಿದ್ದರು. ಈ ವೇಳೆ ಮಾಧ್ಯಮದವರೊಬ್ಬರು ನ್ಯಾಯಾಂಗದ ಮೇಲೆ ಒತ್ತಡ ಹೇರುವ ಪ್ರಯತ್ನ ಎಂಬ ಬಿಜೆಪಿ ಆರೋಫಕ್ಕೆ ಕೇಳಿದ ಪ್ರಶ್ನೆಗೆ ರಾಹುಲ್​ ಪ್ರತಿ ಬಾರಿ ನೀವು ಬಿಜೆಪಿಯವರು ಕೇಳುವ ಪ್ರಶ್ನೆಯನ್ನು ಯಾಕೆ ಕೇಳುತ್ತೀರಿ ಎಂದು ಕೇಳಿದ್ದರು.

    ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಹಿಂದುಳಿದ ವರ್ಗ ಹಾಗೂ ಮಾಧ್ಯಮದವರನ್ನು ಅವಮಾನಿಸಿರುವ ರಾಹುಲ್​ ಗಾಂಧಿ ಅವರ ಮನಸ್ಥಿತಿ ಎಂತಹದ್ದು ಎಂದು ತೋರುತ್ತದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದು ಅವರ ನಡವಳಿಕೆಯನ್ನು ತೋರಿಸಿಕೊಡುತ್ತದೆ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಅನಿಲ್​ ಬಲೂನಿ ಟ್ವೀಟ್​ ಮಾಡಿದ್ದಾರೆ.

    ಬಿಜೆಪಿ ರಾಷ್ಟ್ರೀಯ ವಕ್ತಾರ ಶಹಜಾದ್​ ಪೂನಾವಾಲಾ ಪ್ರತಿಕ್ರಿಯಿಸಿ ಮಾಧ್ಯಮಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದರ ಬಗ್ಗೆ ರಾಹುಲ್​ ಗಾಂಧಿ ಅವರಿಗೆ ಅರಿವಿಲ್ಲ. ಮೊದಲು ನ್ಯಾಯಾಂಗದ ಮೇಲೆ ಒತ್ತಡ ಹೇರಲು ಯತ್ನಿಸಿದ್ದರು ಈಗ ಮಾರ್ದಯಮಗಳ ಮೇಲೆ. ಇದು ಪ್ರಜಾಪ್ರಭುತ್ವ ನಿಮ್ಮ ಮನೆಯಲ್ಲ ಎಂದು ಟ್ವೀಟ್​ ಮಾಡಿ ಹರಿಹಾಯ್ದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts