

ಬೆಂಗಳೂರು: ಇತ್ತೀಚೆಗೆ ನಡೆದ 2ನೇ ಆವೃತ್ತಿಯ ಮಹಾರಾಜ ಟ್ರೋಫಿಯಲ್ಲಿ ಮಿಂಚಿದ ಯುವ ಆಟಗಾರರಾದ ಮನ್ವಂತ್ ಕುಮಾರ್, ಅಭಿಲಾಷ್ ಶೆಟ್ಟಿ, ಮೋನಿಷ್ ರೆಡ್ಡಿ, ಶ್ರೀಜಿತ್ ಕೆಎಲ್, ಸ್ಮರಣ್ ಆರ್. ಮುಂಬರುವ ದೇಶೀಯ ಟಿ20 ಕ್ರಿಕೆಟ್ ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ಕರ್ನಾಟಕದ 28 ಆಟಗಾರರ ಸಂಭಾವ್ಯ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ.
ಟೀಮ್ ಇಂಡಿಯಾ ಆಟಗಾರರಾದ ಕೆಎಲ್ ರಾಹುಲ್ ಮತ್ತು ಪ್ರಸಿದ್ಧ ಕೃಷ್ಣ ಕೂಡ ಈ ಸಂಭಾವ್ಯರಲ್ಲಿ ಸ್ಥಾನ ಪಡೆದಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಅಕ್ಟೋಬರ್ 16ರಿಂದ ನಡೆಯಲಿದ್ದು, ರಾಜ್ಯ ತಂಡ ಮೊದಲ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಎದುರಿಸಲಿದೆ.
ರಾಜ್ಯ ಸಂಭಾವ್ಯರ ತಂಡ: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಪ್ರಸಿದ್ಧ ಕೃಷ್ಣ, ಆರ್. ಸಮರ್ಥ್, ದೇವದತ್ ಪಡಿಕಲ್, ಮನೀಷ್ ಪಾಂಡೆ, ಅಭಿನವ್ ಮನೋಹರ್, ನಿಕಿನ್ ಜೋಸ್, ಬಿಆರ್ ಶರತ್ (ವಿ.ಕೀ), ಕೆ. ಗೌತಮ್, ಶುಭಾಂಗ್ ಹೆಗ್ಡೆ, ವೈಶಾಕ್ ವಿಜಯ್ಕುಮಾರ್, ವಿದ್ವತ್ ಕಾವೇರಪ್ಪ, ಮೋನಿಷ್ ರೆಡ್ಡಿ, ಮನ್ವಂತ್ ಕುಮಾರ್, ಚೇತನ್ ಎಲ್ಆರ್, ಶ್ರೀಜಿತ್ ಕೆಎಲ್, ಲವನೀತ್ ಸಿಸೋಡಿಯಾ (ವಿ.ಕೀ), ಸ್ಮರಣ್ ಆರ್, ಅಭಿಲಾಷ್ ಶೆಟ್ಟಿ, ಕಾರ್ತಿಕ್ ಸಿಎ, ಜೆ. ಸುಚಿತ್, ಪ್ರಣವ್ ಭಾಟಿಯಾ, ಮನೋಜ್ ಭಾಂಡಗೆ, ರಿಷಿ ಬೋಪಣ್ಣ, ಪ್ರವಿಣ್ ದುಬೆ, ಎಂ. ವೆಂಕಟೇಶ್. ಕೋಚ್: ಪಿವಿ ಶಶಿಕಾಂತ್.