

ಬೆಂಗಳೂರು: ಕರೊನಾದಿಂದ ಚೇತರಿಸಿಕೊಂಡ ನಂತರ ಶಾಲಾ ಕಾಲೇಜುಗಳನ್ನು ತೆರೆಯಲಾಗಿದ್ದು, ಇದೀಗ ಎಸ್ಎಸ್ಎಲ್ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. 2021ರ ಜೂನ್ 14ರಿಂದ 25ರವರೆಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಕುರತಾಗಿ ಮಾಹಿತಿ ನೀಡಿದ್ದಾರೆ. ಜೂನ್ 14ರಂದು ಪ್ರಥಮ ಭಾಷೆ ಕನ್ನಡ, 16ರಂದು ಗಣಿತ, ಸಮಾಜಶಾಸ್ತ್ರ, 18ರಂದು ಇಂಗ್ಲಿಷ್ ಅಥವಾ ಕನ್ನಡ, 21ರಂದು ವಿಜ್ಞಾನ, 23ರಂದು ತೃತಿಯ ಭಾಷೆ ಹಿಂದಿ, 25ರಂದು ಸಮಾಜ ವಿಜ್ಞಾನ ಪರೀಕ್ಷೆ ಇರಲಿದೆ ಎಂದು ಅವರು ತಿಳಿಸಿದ್ದಾರೆ. ಪ್ರಥಮ ಭಾಷೆಯ ಪರೀಕ್ಷೆಗೆ 3.15 ಗಂಟೆ ಹಾಗೂ ಇನ್ನುಳಿದ ಎಲ್ಲ ವಿಷಯದ ಪರೀಕ್ಷೆಗೆ 3 ಗಂಟೆ ಕಾಲಾವಕಾಶ ಇರಲಿದೆ.
ಪರೀಕ್ಷೆಯ ವೇಳಾಪಟ್ಟಿ ಕುರಿತಾಗಿ ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಫೆ.26ರ ವರೆಗೂ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದು ಸಚಿವರು ತಿಳಿಸಿದ್ದಾರೆ.