

ಹಾಂಗ್ಝೌ: ಈ ಬಾರಿ ಏಷ್ಯಾಡ್ನಲ್ಲಿ ಸ್ಪರ್ಧಿಸುವ ಭಾರತದ 655 ಕ್ರೀಡಾಪಟುಗಳ ಪೈಕಿ ಹರಿಯಾಣದಿಂದ ಗರಿಷ್ಠ 89 ಕ್ರೀಡಾಪಟುಗಳಿದ್ದಾರೆ. ಮಹಾರಾಷ್ಟ್ರದ 73, ಪಂಜಾಬ್ನ 50, ತಮಿಳುನಾಡಿನ 46, ಕೇರಳದ 42, ಮಣಿಪುರದ 38 ಕ್ರೀಡಾಪಟುಗಳಿದ್ದಾರೆ. ಕರ್ನಾಟಕದಿಂದ 38 ಸ್ಪರ್ಧಿಗಳಿದ್ದಾರೆ. ಸಿಕ್ಕಿಂ, ತ್ರಿಪುರ ಹೊರತಾಗಿ ಉಳಿದೆಲ್ಲ ರಾಜ್ಯಗಳಿಂದ ಕನಿಷ್ಠ ಒಬ್ಬರಾದರೂ ಸ್ಪರ್ಧಿಗಳಿದ್ದಾರೆ.
ಏಷ್ಯಾಡ್ನಲ್ಲಿ ಸ್ಪರ್ಧಿಸಲಿರುವ ರಾಜ್ಯದ ಕ್ರೀಡಾಪಟುಗಳ ವಿವರ ಇಲ್ಲಿದೆ:
*ಟೆನಿಸ್: ರೋಹನ್ ಬೋಪಣ್ಣ
*ಬ್ಯಾಡ್ಮಿಂಟನ್: ಅಶ್ವಿನಿ ಪೊನ್ನಪ್ಪ, ಮಿಥುನ್ ಮಂಜುನಾಥ್, ಸಾಯಿ ಪ್ರತಿಕ್
*ಕ್ರಿಕೆಟ್: ರಾಜೇಶ್ವರಿ ಗಾಯಕ್ವಾಡ್
*ವಾಲಿಬಾಲ್: ಅಶ್ವಲ್ ರೈ, ಮನೋಜ್ ಮಂಜುನಾಥ್, ಹರಿಪ್ರಸಾದ್
*ಶೂಟಿಂಗ್: ದಿವ್ಯಾ ಟಿಎಸ್
*ಅಥ್ಲೆಟಿಕ್ಸ್: ಬೆಳ್ಳಿಯಪ್ಪ ಎಬಿ (ಮ್ಯಾರಥಾನ್), ಮಿಜೋ ಚಾಕೋ ಕುರಿಯನ್ (4/400 ಮೀ. ರಿಲೇ), ಸಿಂಚಲ್ ಕಾವೇರಮ್ಮ (400 ಮೀ. ಹರ್ಡಲ್ಸ್), ಜೆಸ್ ಸಂದೇಶ್ (ಹೈಜಂಪ್), ಯಶಸ್ ಪಾಲಾಕ್ಷ (400 ಮೀ. ಹರ್ಡಲ್ಸ್), ನಿಹಾಲ್ ಜೋಯೆಲ್ (ಮಿಶ್ರ ರಿಲೇ)
*ಈಜು: ಶ್ರೀಹರಿ ನಟರಾಜ್, ಲಿಖಿತ್ ಎಸ್ಪಿ, ಅನೀಶ್ ಗೌಡ, ತನಿಶ್ ಜಾರ್ಜ್ ಮ್ಯಾಥ್ಯೂ, ಉತ್ಕರ್ಷ್ ಪಾಟೀಲ್, ನೀನಾ ವೆಂಕಟೇಶ್, ಲಿನೇಷಾ ಎಕೆ, ಧಿನಿಧಿ ದೇಸಿಂಘು, ಹಷಿಕಾ ರಾಮಚಂದ್ರ
*ಗಾಲ್ಫ್: ಖಾಲಿನ್ ಜೋಶಿ, ಅದಿತಿ ಅಶೋಕ್, ಪ್ರಣವಿ ಅರಸ್, ಅವನಿ ಪ್ರಶಾಂತ್
*ಸೈಕ್ಲಿಂಗ್: ವೆಂಕಪ್ಪ ಕೆಂಗಲಗುತ್ತಿ
*ಬಾಸ್ಕೆಟ್ಬಾಲ್: ಬಾಂಧವ್ಯ ಎಚ್ಎಂ, ಸಹನಾ ಎಸ್ಎಂ, ಸಂಜನಾ ರಮೇಶ್
*ಇ ಸ್ಪೋರ್ಟ್ಸ್: ಅಕ್ಷಜ್ ಶೆಣೈ, ಆದಿತ್ಯ ಸೆಲ್ವರಾಜ್
*ಬಾಕ್ಸಿಂಗ್: ನಿಶಾಂತ್ ದೇವ್
*ಜಿಯು-ಜಿತ್ಸು: ಉಮಾಮಹೇಶ್ವರ್ ರೆಡ್ಡಿ
*ಸ್ಪೋರ್ಟ್ಸ್ ಕ್ಲೆಂಬಿಂಗ್: ಭರತ್ ಕಾಮತ್, ಪ್ರತಿಕ್ಷಾ ಕೆ.