ಈಶ ಗ್ರಾಮೋತ್ಸವಕ್ಕೆ ಸಜ್ಜುಗೊಂಡ ಕರ್ನಾಟಕ

Esha Village Festival
Published on

ದಕ್ಷಿಣದ ರಾಜ್ಯಗಳು ಮತ್ತು ಕರ್ನಾಟಕದ 13 ಜಿಲ್ಲೆಗಳ 1300 ಹಳ್ಳಿಗಳಲ್ಲಿ ನಡೆಸಲಾಗುವ ಈಶ ಗ್ರಾಮೋತ್ಸವವು ಗ್ರಾಮೀಣ ಭಾರತದ ಚೈತನ್ಯವನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿದೆ.

ವೃತ್ತಿಪರರನ್ನು ಹೊರತುಪಡಿಸಿ, ಸಮುದಾಯಗಳಾದ್ಯಂತ ಯಾರಿಗೆಲ್ಲಾ ಪ್ರತಿನಿತ್ಯ ಕ್ರೀಡೆಗಳನ್ನು ಆಡಲು ಅವಕಾಶ ಇರುವುದಿಲ್ಲವೋ ಅಂತಹ ಗ್ರಾಮೀಣ ಜನರನ್ನೆಲ್ಲಾ  ಈಶ ಗ್ರಾಮೋತ್ಸವವು ಒಟ್ಟುಗೂಡಿಸಿ, ಗ್ರಾಮೀಣ ಜೀವನದ ಹುರುಪನ್ನು ಆನಂದಿಸಲು ಭಾಗವಹಿಸುವಂತೆ ಅವರನ್ನು ಪ್ರೋತ್ಸಾಹಿಸುತ್ತದೆ.

ಬೆಂಗಳೂರು: ಗ್ರಾಮೀಣ ಭಾರತದ ಚೈತನ್ಯವನ್ನು ಪುನರುಜ್ಜೀವನಗೊಳಿಸಿ, ಸಮುದಾಯ, ಸಂಪ್ರದಾಯ ಮತ್ತು ಆರೋಗ್ಯಕರ ಸ್ಪರ್ಧೆಯ ಪ್ರಜ್ಞೆಯನ್ನು ಬೆಳೆಸುವ ಉದ್ದೇಶದಿಂದ, ಈಶ ಫೌಂಡೇಶನ್‌ನ ಸಾಮಾಜಿಕ ಅಭಿವೃದ್ಧಿ ಅಂಗವಾದ ಈಶ ಔಟ್‌ರೀಚ್, ಆಗಸ್ಟ್‌ನಿಂದ ಸೆಪ್ಟೆಂಬರ್ 23 ರವರೆಗೆ ಈಶ ಗ್ರಾಮೋತ್ಸವವನ್ನು ಆಯೋಜಿಸುತ್ತದೆ. ಈಶ ಗ್ರಾಮೋತ್ಸವವು ಭಾರತದ ಅತಿದೊಡ್ಡ ಕ್ರೀಡಾಕೂಟವಾಗಿ ದಕ್ಷಿಣದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಪಾಂಡಿಚೇರಿಯಲ್ಲಿ  ನಡೆಸಲಾಗುತ್ತದೆ. ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿರುವ 112 ಅಡಿ ಎತ್ತರದ ಆದಿಯೋಗಿ ಎದುರು ಅಂತಿಮ ಪಂದ್ಯಗಳು ನಡೆಯಲಿವೆ.

ಕರ್ನಾಟಕದಲ್ಲಿ, ಕ್ಲಸ್ಟರ್ ಮಟ್ಟದ ಪಂದ್ಯಗಳು ಆಗಸ್ಟ್ 12 ರಿಂದ ಪ್ರಾರಂಭವಾಗಿ, ಸೆಪ್ಟೆಂಬರ್ 3 ರಂದು ಗೆದ್ದ ತಂಡಗಳು ವಿಭಾಗ ಮಟ್ಟದ ಪಂದ್ಯವನ್ನು ಆಡಲು ಮುನ್ನಡೆಯುತ್ತವೆ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಶಿವಮೊಗ್ಗ ಸೇರಿದಂತೆ ಕರ್ನಾಟಕದ 13 ಜಿಲ್ಲೆಗಳ 3200 ಕ್ಕೂ ಹೆಚ್ಚು ಹಳ್ಳಿಗಳು ಕಾರ್ಯಕ್ರಮವನ್ನು ಆಯೋಜಿಸಲು ಸಜ್ಜಾಗುತ್ತಿವೆ. ಸಮಾರಂಭದಲ್ಲಿ ಭಾಗವಹಿಸಲು ನೋಂದಣಿ ಉಚಿತವಾಗಿದೆ.

Esha Village Festival

ವಿವರಗಳು 

ಮೊದಲನೇ ಹಂತದ (ಕ್ಲಸ್ಟರ್ಪಂದ್ಯಗಳು - ಆಗಸ್ಟ್ 12 ಹಾಗೂ 13 ರಂದು ಚಿಕ್ಕಬಳ್ಳಾಪುರವಿಜಯಪುರಕೋಲಾರ , ವಿಜಯನಗರಶಿವಮೊಗ್ಗಮೈಸೂರು,ದಕ್ಷಿಣ ಕನ್ನಡಉಡುಪಿ ಜಿಲ್ಲೆಗಳಲ್ಲಿ ; ಆಗಸ್ಟ್ 19 ಹಾಗೂ 20 ರಂದು ಬೆಂಗಳೂರು ಗ್ರಾಮಾಂತರ,ತುಮಕೂರುಕೊಡಗುಚಾಮರಾಜನಗರ ಜಿಲ್ಲೆಗಳಲ್ಲಿ ; ಆಗಸ್ಟ್ 26 ಹಾಗೂ 27 ರಂದು ಚಿಕ್ಕಮಗಳೂರು  ಜಿಲ್ಲೆಯಲ್ಲಿ ನಡೆಯಲಿವೆ.

ಎರಡನೇ ಹಂತದ (ವಿಭಾಗ) ಪಂದ್ಯಗಳು - ಸೆಪ್ಟೆಂಬರ್ 3ರಂದು ಚಿಕ್ಕಬಳ್ಳಾಪುರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ನಡೆಯಲಿವೆ.

ಫೈನಲ್ ಹಂತದ ಪಂದ್ಯಗಳು- ಸೆಪ್ಟೆಂಬರ್ 23ರಂದು ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ನಡೆಯಲಿವೆ.

2004 ರಲ್ಲಿ, ಸದ್ಗುರುಗಳಿಂದ ಪ್ರಾರಂಭವಾದ ಗ್ರಾಮೋತ್ಸವವು ಈ ವರ್ಷ ಪುರುಷರಿಗಾಗಿ ವಾಲೀಬಾಲ್, ಮಹಿಳೆಯರಿಗಾಗಿ ಥ್ರೋಬಾಲ್ ಮತ್ತು ತಮಿಳುನಾಡಿನ ಗ್ರಾಮೀಣ ಆಟಗಳು- ಹೆಚ್ಚುವರಿಯಾಗಿ ಪುರುಷರು ಮತ್ತು ಮಹಿಳೆಯರಿಗಾಗಿ ಕಬಡ್ಡಿಯನ್ನು ಒಳಗೊಂಡಿರುತ್ತದೆ. ಗ್ರಾಮೋತ್ಸವದಲ್ಲಿ 65 ಸಾವಿರಕ್ಕೂ ಹೆಚ್ಚು ಆಟಗಾರರು ಭಾಗವಹಿಸುವ ನಿರೀಕ್ಷೆ ಇದ್ದು, ಈ ಬಾರಿಯ ಬಹುಮಾನದ ಒಟ್ಟು ಮೊತ್ತ 56 ಲಕ್ಷ ರೂಪಾಯಿಗಳನ್ನು ಮೀರಿದೆ. ವಾಲೀಬಾಲ್‌ ವಿಜೇತರಿಗೆ 5 ಲಕ್ಷ ರೂಪಾಯಿ ಮತ್ತು ಕಬ್ಬಡಿ ಮತ್ತು ಥ್ರೋಬಾಲ್‌ನಲ್ಲಿ ಗೆದ್ದ ತಂಡಗಳಿಗೆ ತಲಾ 2 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ.

ಸದ್ಗುರುಗಳು ಗ್ರಾಮೋತ್ಸವದ ಕುರಿತು ಮಾತನಾಡುತ್ತಾ , “ಈಶ ಕೈಗೊಂಡಿರುವ ಹಲವಾರು ಚಟುವಟಿಕೆಗಳಲ್ಲಿ, ಈಶ ಗ್ರಾಮೋತ್ಸವವು ಕ್ರೀಡೆಗಳ ಮೂಲಕ ಗ್ರಾಮೀಣ ಭಾರತವನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಪ್ರಯತ್ನವಾಗಿದೆ. ಈ ಪ್ರಯತ್ನದ ಮೂಲಕ ಜಾತಿ, ಮತ ಮತ್ತು ಲಿಂಗದ ತಾರತಮ್ಯವನ್ನು ತೆಗೆದುಹಾಕಲಾಗಿದೆ. ಅನೇಕ ಯುವಕರು ತಮ್ಮ ವ್ಯಸನದಿಂದ ಹೊರಬಂದಿದ್ದಾರೆ. ಈಶ ಗ್ರಾಮೋತ್ಸವವು ತನ್ನ ಗಾತ್ರದಲ್ಲಿ ಅಸಾಧಾರಣವಾಗಿ ಸಾಕಷ್ಟು ಬೆಳೆದಿದೆ. ಕ್ರೀಡೆಯ ಮೂಲಕ ಗ್ರಾಮೀಣ ಭಾರತವನ್ನು ಪುನರುಜ್ಜೀವನಗೊಳಿಸುವ ಮತ್ತು ಪರಿವರ್ತಿಸುವ ಈ ಪ್ರಯತ್ನವನ್ನು ನಾವು ಇನ್ನೂ ಹೆಚ್ಚಿಸಬೇಕು. ಗ್ರಾಮೋತ್ಸವವನ್ನು ಇನ್ನೂ ಹೆಚ್ಚಿನ ಜನರಿಗೆ ತಲುಪಿಸಲು ನಿಮ್ಮೆಲ್ಲರಿಗೂ ಸಾಧ್ಯವಿರುವ ರೀತಿಯಲ್ಲಿ ಭಾಗವಹಿಸಬೇಕೆಂದು ನಾನು ವಿನಂತಿಸುತ್ತೇನೆ." ಎಂದರು.

Esha Village Festival

ಈಶ ಗ್ರಾಮೋತ್ಸವದ ವೈಶಿಷ್ಟ್ಯವೇನೆಂದರೆ,  ತಂಡದ ಎಲ್ಲಾ ಆಟಗಾರರು ಒಂದೇ ಗ್ರಾಮದವರಾಗಿರುತ್ತಾರೆ. ಇದು ವೃತ್ತಿಪರ ಆಟಗಾರರ ಪಂದ್ಯಾವಳಿಯಲ್ಲ, ಆದರೆ ಪ್ರತಿಯೊಬ್ಬರನ್ನೂ ಆಡಲು ಪ್ರೋತ್ಸಾಹಿಸುವ ವೇದಿಕೆಯಾಗಿದೆ. ಪ್ರತಿಯೊಬ್ಬರನ್ನೂ ಯಾವುದಾದರೊಂದು ರೀತಿಯ ಆಟದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವುದರಿಂದ ಹಿಡಿದು, ಗ್ರಾಮೀಣ ಆಟಗಳ ಹುರುಪನ್ನು ಮರಳಿ ತಂದು, ನಶಿಸುತ್ತಿರುವ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಪುನರುಜ್ಜೀವನಗೊಳಿಸುವವರೆಗೆ, ಇಡೀ ಕ್ರೀಡಾಯೋಜನೆಯನ್ನು ಎಚ್ಚರಿಕೆಯಿಂದ ರಚಿಸಲಾಗಿದೆ. ಇಡೀ ಗ್ರಾಮವು ಸಂಭ್ರಮಾಚರಿಸಲು ಒಟ್ಟುಗೂಡುವಂತೆ ಮಾಡಿ ಗ್ರಾಮೀಣ ಜೀವನದ ಉತ್ಸಾಹವನ್ನು ಇದು ಮರಳಿ ತರುತ್ತದೆ.

ಈಶ ಗ್ರಾಮೋತ್ಸವದ ಹಿಂದಿನ ಆವೃತ್ತಿಗಳು 8,412 ತಂಡಗಳಿಗೆ ಸಾಕ್ಷಿಯಾಗಿದ್ದು, ಇದರಲ್ಲಿ 1,00,167 ಆಟಗಾರರು ಭಾಗವಹಿಸಿದ್ದರು. ಕ್ರೀಡೆ ಮತ್ತು ಯುವ ವ್ಯವಹಾರಗಳ ಸಚಿವಾಲಯವು ಈಶ ಔಟ್‌ರೀಚ್ ಅನ್ನು ರಾಷ್ಟ್ರೀಯ ಕ್ರೀಡಾ ಪ್ರಚಾರ ಸಂಸ್ಥೆ (NSPO) ಎಂದು ಗುರುತಿಸಿದೆ. 2018 ರಲ್ಲಿ, ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಿಂದ ಕ್ರೀಡಾ ಅಭಿವೃದ್ಧಿಗಾಗಿ "ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ್" ಎಂಬ ಪ್ರಶಸ್ತಿಯನ್ನು ಈಶ ಔಟ್‌ರೀಚ್ ಪಡೆದಿದೆ.

ಹೆಚ್ಚಿನ ಮಾಹಿತಿಗಾಗಿ 83000 30999 ಗೆ ಕರೆ ಮಾಡಿ

ಕಾರ್ಯಕ್ರಮಕ್ಕೆ ನೋಂದಾಯಿಸಲು : https://isha.co/gramotsavam-kannada

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net