ಕುಡುಕರು ಬೀದಿಗೆ ಇಳಿದರೆ ಕಾಂಗ್ರೆಸ್​ ಸರ್ಕಾರ ಪತನ: ಗೋವಿಂದ ಕಾರಜೋಳ

govind karjol
Published on

ಬಾಗಲಕೋಟೆ: ಕುಡುಕರು ಬೀದಿಗೆ ಇಳಿದರೆ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಕೂರಲು ಆಗುವುದಿಲ್ಲ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.

ಬಾಗಲಕೋಟೆಯಲ್ಲಿ ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸುವ ವೇಳೆ ಮಾತನಾಡಿದ ಅವರು ಮದ್ಯದ ಬೆಲೆ ಏರಿಕೆಯಿಂದ ಕುಡುಕರಿಗೆ ದೊಡ್ಡ ಆಘಾತವಾಗಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆ ಆಗಿವೆ. ಮದ್ಯದ ಬೆಲೆ ಏರಿಕೆಯಿಂದ ಕುಡುಕರಿಗೆ ದೊಡ್ಡ ಆಘಾತವಾಗಿದೆ. ಮೊದಲು ಶೇ 20ರಷ್ಟು ಹೆಚ್ಚಳ ಮಾಡಲಾಗಿತ್ತು. ಈಗ 20ರಷ್ಟು ಹೆಚ್ಚಳ ಮಾಡುವ ಮೂಲಕ ಮದ್ಯದ ಬೆಲೆ 40 ಪರ್ಸೆಂಟ್​ ಹೆಚ್ಚಳ ಮಾಡಲಾಗಿದೆ.

Govind Karjol

ಈ ವಿಚಾರವಾಗಿ ಕುಡುಕರು ಬೀದಿಗಿಳಿದರೆ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಕೂರಲು ಆಗುವುದಿಲ್ಲ. ಒಂದು ವೇಳೆ ಮದ್ಯಪಾನ ಪ್ರಿಯರು ಬೀದಿಗಿಳಿದಿ ಹೋರಾಟ ಶುರು ಮಾಡಿದ್ದರೆ ಸರ್ಕಾರವೇ ಉರುಳುತ್ತದೆ ಎಂದು ಎಚ್ಚರಿಸಿದ್ದಾರೆ.

ಎಸ್​ಎಸ್​ಪಿ-ಟಿಎಸ್​ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ವೇಳೆ ಮಾಜಿ ಸಚಿವ ಗೋವಿಂದ ಕಾರಜೋಳ ತಮ್ಮ ಮಾತಿನ ಮೂಲಕ ಸರ್ಕಾರವನ್ನು ಚುಚ್ಚಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net