'ಒಬ್ಬ ವ್ಯಕ್ತಿಯ ಬಣ್ಣದ ಬಗ್ಗೆ ಮಾತನಾಡುವುದು ಸರಿಯೇ'?; ಆರಗ ಜ್ಞಾನೇಂದ್ರ ವಿರುದ್ಧ ಕಿಡಿಕಾರಿದ ಕಿಮ್ಮನೆ ರತ್ನಾಕರ್

kimmane
Published on

ಬೆಂಗಳೂರು: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೈ ಬಣ್ಣದ ಬಗ್ಗೆ ಇತ್ತೀಚೆಗಷ್ಟೇ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಟೀಕಿಸಿರುವುದರ ವಿರುದ್ಧ ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಕಿಡಿಕಾರಿದ್ದಾರೆ.

ಒಬ್ಬ ವ್ಯಕ್ತಿಯ ಬಣ್ಣದ ಬಗ್ಗೆ ಮಾತನಾಡುವುದು ಸರಿಯೇ, ಖಂಡ್ರೆ ಬದಲಿಗೆ ಬಾಯಿ ತಪ್ಪಿ ಖರ್ಗೆ ಅಂತ ಹೇಳಿದೆ ಅಂತಾರೆ. ಹಾಗಾದರೆ ಖಂಡ್ರೆ ಅವರ ಬಗ್ಗೆ ಹೇಳಿದರೆ ಒಪ್ಪಲು ಸಾಧ್ಯವೇ, ನೆಲ್ಸನ್ ಮಂಡೇಲಾ, ಮಹಾತ್ಮ ಗಾಂಧಿ ಇವರೆಲ್ಲಾ ಯಾವ ಬಣ್ಣದವರು ಎಂದು ಕಿಮ್ಮನೆ ರತ್ನಾಕರ್ ಪ್ರಶ್ನಿಸಿದರು.

ಉತ್ತರ ಕರ್ನಾಟಕ ಭಾಗದವರು ಅಂತಾ ಎಲ್ಲಾ ಹೇಳಿರೋದು ಸರಿಯಲ್ಲ, ಇದು ನಿಜಕ್ಕೂ ಖಂಡನೀಯ. ಸಂವಿಧಾನ ಪ್ರಕಾರ ಅಪರಾಧ ಕೂಡ ಆಗುತ್ತದೆ. ಕೂಡಲೇ ಆರಗ ಜ್ಞಾನೇಂದ್ರ ಮೇಲೆ‌ ಕ್ರಮ ತೆಗೆದುಕೊಳ್ಳಬೇಕು ಎಂದು ಕಿಮ್ಮನೆ ರತ್ನಾಕರ್ ಅವರು ಒತ್ತಾಯಿಸಿದ್ದಾರೆ.

ಇದೇ ಸಂದರ್ಭದಲ್ಲಿ ನೂರಕ್ಕೆ ನೂರು ಕಸ್ತೂರಿ ರಂಗನ್ ವರದಿ ವಿರೋಧಿಸುತ್ತೇವೆ ಎಂದ ಕಿಮ್ಮನೆ ರತ್ನಾಕರ್, ಇಲ್ಲಿಯೇ ಹುಟ್ಟಿದವರು ಆಕಾಶದಲ್ಲಿ ಮನೆ ಕಟ್ಟಿಕೊಳ್ಳಲು ಆಗುತ್ತದಾ, ದೇಶ ಅಂದ್ರೆ ಕೇವಲ ಮಣ್ಣು ನೀರು ಗಾಳಿ ಅಷ್ಟೇನಾ, ಮನುಷ್ಯ ಅಲ್ವಾ?. ಅಲ್ಲಿಯೇ ಹುಟ್ಟಿ ಬೆಳೆದವರಿಗೆ ಮನೆ ವಸತಿಗೆ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ನಿವೇಶನಗಳ ವ್ಯವಸ್ಥೆಯಾದರೂ ಮಾಡಬೇಕಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net