ಅವರ ಕಾಲದಲ್ಲಿ ಆಗಿರುವ ಹಗರಣಗಳ ದಾಖಲೆ ಬಿಡುಗಡೆ ಮಾಡುತ್ತಿದ್ದೇವೆ ಅಷ್ಟೇ: ಬೊಮ್ಮಾಯಿ

bommai siddaramaiah
Published on

ಹಾಸನ: ಇತ್ತೀಚೆಗೆ ಮುಖ್ಯಮಂತ್ರಿ ಬೊಮ್ಮಾಯಿಗೆ ಅಂಟುರೋಗ ಶುರುವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಈಗ ಬೊಮ್ಮಾಯಿ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಹಾಸನ ಜಿಲ್ಲೆ ಬೇಲೂರು ತಾಲೂಕಿನ ಮಾಯಗೊಂಡನಹಳ್ಳಿಯಲ್ಲಿ ಮುಖ್ಯಮಂತ್ರಿ ಬೊಮ್ಮಯಿ ಪ್ರತಿಕ್ರಿಯೆ ನೀಡಿದ್ದು 'ಯಾರಿಗೆ ಅಂಟು ರೋಗ ಇದೆ ಎಂದು ಜನ ತೀರ್ಮಾನ ಮಾಡ್ತಾರೆ' ಎಂದು ಹೇಳಿದರು.

ನಂತರ ಮುಖ್ಯಮಂತ್ರಿ ಬೊಮ್ಮಾಯಿ 'ಸತ್ಯ ಏನು ಅಂದ್ರೆ ಅವರ ಕಾಲದಲ್ಲಿ ಆಗಿರುವ ಹಗರಣಗಳ ದಾಖಲೆಗಳನ್ನು ನಾವು ಬಿಡುಗಡೆ ಮಾಡುತ್ತಿದ್ದೇವೆ. ಸತ್ಯವನ್ನು ಎದುರಿಸುವ ಕೆಲಸವನ್ನು ಅವರು ಮಾಡಲಿ. ಅದು ಬಿಟ್ಟು ನಮ್ಮ ಕಾಲದಲ್ಲಿ ಆಗಿಲ್ಲ ಎಂದೆಲ್ಲ ಮಾತನಾಡುವುದು ಜವಾಬ್ದಾರಿ ಕೆಲಸ ಅಲ್ಲ. ನಮ್ಮ ಆರೋಪಕ್ಕೆ ದಾಖಲೆಯನ್ನು ಕೊಡುತ್ತಿದ್ದೇವೆ. ಅವರು ಅದನ್ನು ಎದುರಿಸಲಿ ಅಷ್ಟೇ' ಎಂದು ಸಿದ್ದರಾಮಯ್ಯಗೆ ಟಾಂಗ್​ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net