

ಬೆಂಗಳೂರು: ಈ ಬಾರಿಯ ಬಜೆಟ್‌ನಲ್ಲಿ ಹೊಸ ತೆರಿಗೆ ಹಾಕದ ರಾಜ್ಯ ಸರ್ಕಾರವು ಕೊರತೆಗಳನ್ನು ನೀಗಿಸಿಕೊಳ್ಳಲು ಹೆಚ್ಚು ಸಾಲ ಮಾಡಲು ಹೊರಟಿದೆ.
ಈವರೆಗೆ ರಾಜ್ಯ ಸರ್ಕಾರದ ಒಟ್ಟು ಸಾಲ 4,57,899 ಕೋಟಿ ರೂ.ಇದ್ದು, 2021-22 ರಲ್ಲಿ ಈ 71 ಸಾವಿರ ಕೋಟಿ ರೂ. ಹೊಸ ಸಾಲ ಮಾಡುವ ಪ್ರಸ್ತಾಪ ಮಾಡಲಾಗಿದೆ.
ಈ ಬಾರಿ ವಿತ್ತೀಯ ಶಿಸ್ತು ಶೇ. 1.9 ಉಲ್ಲಂಘನೆಯಾಗಲಿದ್ದು, ಆರ್ಥಿಕ ಶಿಸ್ತು ಹಳಿ ತಪ್ಪುವ ಸೂಚನೆಯೂ ಇದೆ. ಹೆಚ್ಚು ಸಾಲ ಮಾಡಲು ವಿತ್ತೀಯ ಹೊಣೆಗಾರಿಕೆ ಕಾನೂನಿಗೆ ತಿದ್ದುಪಡಿ ಮಾಡಿಕೊಳ್ಳುತ್ತಿದೆ.
ಹಾಗೆಯೇ ಒಟ್ಟು ವೆಚ್ಚ ಕಳೆದ ಬಾರಿಗೆ ಹೋಲಿಸಿದರೆ ಶೇ. 2.6 ಹೆಚ್ಚಳವಾಗಬಹುದೆಂದು ಅಂದಾಜಿಸಲಾಗಿದೆ. 2021-22ರ ಒಟ್ಟು ಆದಾಯ 2,43,734 ಕೋಟಿ ರೂ. ನಿರೀಕ್ಷಿಸಲಾಗಿದೆ, ವೆಚ್ಚ 2,46,207 ಕೋಟಿ ರೂ. ಆಗಬಹುದೆಂದು ಅಂದಾಜಿಸಲಾಗಿದೆ.