ಬಜೆಟ್ ಭಾಷಣ ಅಂತ್ಯ: ನಾಳೆಗೆ ಸದನ ಮುಂದೂಡಿಕೆ

Budget
Budget21-22
Published on

ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು 2021-22 ನೇ ಸಾಲಿನ ಕರ್ನಾಟಕ ಬಜೆಟ್​ ಭಾಷಣವನ್ನು ವಿಧಾನಸಭೆಯಲ್ಲಿ ಇಂದು ಮಂಡಿಸಿದರು. ಸುಧೀರ್ಘವಾಗಿ ಎರಡೂವರೆ ಗಂಟೆ ಅವರು ಬಜೆಟ್ ಭಾಷಣವನ್ನು ಅಡೆತಡೆ ಇಲ್ಲದೇ ಓದಿ ಮುಗಿಸಿದರು.

ಸದನವನ್ನು ನಾಳೆ ಬೆಳಿಗ್ಗೆ 11 ಗಂಟೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂದೂಡಿದರು.

ಈ ಬಾರಿ ಈ ಬಜೆಟ್​ನಲ್ಲಿ ಯಾವುದೇ ಜನಪ್ರಿಯ ಘೋಷಣೆಗಳನ್ನು ಸಿಎಂ ಘೋಷಣೆ ಮಾಡದಿರುವುದು ವಿಶೇಷವಾಗಿದೆ. ಬಜೆಟ್​ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ರಾಜ್ಯದ ಜನತೆ ಹೊಂದಿತ್ತು. ಆದರೆ, ಕೋವಿಡ್ ಸಂಕಷ್ಟದಿಂದ ರಾಜ್ಯ ಹಿಂದೆಂದೂ ಕೇಳರಿಯದಂತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಆರಂಭದಲ್ಲೇ ಸಿಎಂ ಹೇಳಿ, ಈ ಬಾರಿ ಜನಪ್ರಿಯ ಘೋಷಣೆಗಳು ಇರುವುದಿಲ್ಲ ಎಂಬ ಸೂಚನೆ ನೀಡಿ, ಬಜೆಟ್ ಭಾಷಣ ಓದಿ ಮುಗಿಸಿದರು.

ಸಿಎಂ ಯಡಿಯೂರಪ್ಪ ಅವರು ಇಂದು ಮಂಡಿಸಿರುವ ಬಜೆಟ್ ಅವರ ಎಂಟನೆ ಬಜೆಟ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net