More

    ರಾಜ್ಯ ಬಜೆಟ್​: ಇವುಗಳಿಗೆ ಕೋಟಿ ಕೋಟಿ ಹಣ ಮೀಸಲಿಟ್ಟ ಸಿಎಂ

    ಬೆಂಗಳೂರು: ಕರೊನಾ ಸಂಕಷ್ಟದ ನಡುವೆಯೂ ಇಂದು ಮಂಡನೆಯಾದ ರಾಜ್ಯ ಬಜೆಟ್​ನಲ್ಲಿ ಸಿಎಂ ಬಿ.ಎಸ್​. ಯಡಿಯೂರಪ್ಪ ಹಲವು ಪ್ರಮುಖ ಯೋಜನೆ-ಕಾರ್ಯಕ್ಕೆ ಕೋಟ್ಯಂತರ ಹಣ ಮೀಸಲಿಟ್ಟಿದ್ದಾರೆ. ಅವುಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

    • ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ಕರ್ನಾಟಕದ ಯಾತ್ರಿ ನಿವಾಸ ನಿರ್ಮಾಣಕ್ಕೆ 10 ಕೋಟಿ ರೂಪಾಯಿ
    • ಆದಿಚುಂಚನಗಿರಿ ನಾಥ ಪಾರಂಪರಿಕ ಕೇಂದ್ರಕ್ಕೆ 10 ಕೋಟಿ ರೂ.
    • ಎಸ್.ಎಲ್.ಭೈರಪ್ಪ ಅವರ ಪರ್ವ ನಾಟಕವನ್ನು ರಾಜ್ಯಾದ್ಯಂತ ರಂಗಾಯಣಗಳ ಮೂಲಕ ನಾಟಕ ಪ್ರದರ್ಶನಕ್ಕೆ 1 ಕೋಟಿ
      ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂ.
    • ಕೃಷಿ ಸಂಚಯ ಯೋಜನೆಗೆ 831 ಕೋಟಿ ರೂ. ಮೀಸಲು
    • ಒಕ್ಕಲಿಗರ ನಿಗಮಕ್ಕೆ 500 ಕೋಟಿ ರೂ. ಘೋಷಣೆ
    • ಬಸವಣ್ಣ ಜನ್ಮ ಸ್ಥಳ ಬಸವನಬಾಗೇವಾಡಿಯ ಇಂಗಳೇಶ್ವರ ಗ್ರಾಮ ಅಭಿವೃದ್ಧಿಗೆ 5 ಕೋಟಿ ರೂ.
    • ಕಬಿನಿ ಆಣೆಕಟ್ಟಿನಲ್ಲಿ ಕೆಆರ್‌ಎಸ್ ಮಾದರಿಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಥೀಮ್ ಪಾರ್ಕ್ ನಿರ್ಮಾಣ
    • ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರಗಳಲ್ಲಿ ಒಟ್ಟು 234 ಕೆರೆ ತುಂಬಿಸುವ ಯೋಜನೆಗೆ 500 ಕೋಟಿ ಅನುದಾನ
    • ಮಹಾದಾಯಿ ಯೋಜನೆಗೆ 1677 ಕೋಟಿ ರೂ. ಅನುದಾನ
    • ಸೋಮೇಶ್ವರ ಕಡಲ ತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 10 ಕೋಟಿ ರೂಪಾಯಿ
    • ಜೈನ ಪುಣ್ಯ ಕ್ಷೇತ್ರಗಳ ಅಭಿವೃದ್ಧಿಗೆ 50 ಕೋಟಿ ರೂಪಾಯಿ
    • ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ 50 ಕೋಟಿ ರೂಪಾಯಿ
    • 10 ಕೋಟಿ ರೂ. ವೆಚ್ಚದಲ್ಲಿ ಚಿಗುರು ಕಾರ್ಯಕ್ರಮ
    • ಶಿವಮೊಗ್ಗ, ಮೈಸೂರಿನಲ್ಲಿ ಕಿದ್ವಾಯಿ ಮಾದರಿ ಆಸ್ಪತ್ರೆ ನಿರ್ಮಾಣಕ್ಕೆ 100 ಕೋಟಿ ರೂ. ಅನುದಾನ
    • ಕಳಸಾ ಬಂಡೂರಿ ಯೋಜನೆಗೆ 1677 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ
    • ಭದ್ರಾ ಮೇಲ್ದಂಡೆ ಯೋಜನೆಗೆ 21,474 ಕೋಟಿ ರೂ. ಅನುಮೋದನೆ
    • ಕೃಷ್ಣಾ ಭಾಗ್ಯ ಜಲನಿಗನ ನಿಯಮಿತಕ್ಕೆ 5600 ಕೋಟಿ ರೂಪಾಯಿ
    • 58 ಆಣೆಕಟ್ಟು ಪುನಶ್ಚೇತನಕ್ಕೆ 1500 ಕೋಟಿ ರೂಪಾಯಿ
    • ಅಲ್ಪಸಂಖ್ಯಾತರ ಅಭಿವೃದ್ಧಿಗೆ 1500 ಕೋಟಿ ರೂ. ಅನುದಾನ
    • ತಾಯಂದಿರ ಎದೆ ಹಾಲಿನ ಬ್ಯಾಂಕ್ ಸ್ಥಾಪನೆಗೆ 2.5 ಕೋಟಿ ರೂಪಾಯಿ
    • ಚಾಮರಾಜನಗರ ಜಿಲ್ಲೆಯ ಬೂದಿಪಡಗದಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಆನೆ ಶಿಬಿರ ಆರಂಭ
    • ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ 31,028 ಕೋಟಿ ರೂಪಾಯಿ
    • ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ 62,150 ಕೋಟಿ
    • ಆರ್ಥಿಕ ಮತ್ತು ಅಭಿವೃದ್ಧಿ ವಲಯಕ್ಕೆ 52,529 ಕೋಟಿ
    • ಬೆಂಗಳೂರು ಸಮಗ್ರ ಅಭಿವೃದ್ಧಿ ವಲಯಕ್ಕೆ 7,795 ಕೋಟಿ ರೂಪಾಯಿ
    • ಸಂಸ್ಕೃತಿ, ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆಗೆ 2,645 ಕೋಟಿ ರೂ. ಅನುದಾನ

    ಸಿನಿಮಾ ಕ್ಷೇತ್ರಕ್ಕೂ ವಿಆರ್​ಎಲ್​ ಸಂಸ್ಥೆ ಎಂಟ್ರಿ!

    ಮಹಿಳೆಯರಿಗೆ ರಾಜ್ಯ ಬಜೆಟ್​ನಲ್ಲಿ ಸಿಕ್ಕಿದ್ದೇನು?

    ಅಕ್ಕನ ಕಣ್ಣೆದುರಲ್ಲೇ ಭಾವನ ಕಿವಿ ಕಚ್ಚಿ ತುಂಡರಿಸಿದ ಬಾಮೈದುನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts