More

    VIDEO | ಕಡಲ ತೀರವನ್ನು ಶುಚಿಗೊಳಿಸಿದ ಬಾಲಿವುಡ್​ ನಟಿಯರು!

    ಮುಂಬೈ: ಪರಿಸರವನ್ನು ಸಂರಕ್ಷಿಸುವ ನಿರಂತರ ಪ್ರಯತ್ನದಲ್ಲಿ, ಹಲವಾರು ಸಂಸ್ಥೆಗಳು, ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಸಹಯೋಗದೊಂದಿಗೆ ವಿವಿಧ ಪರಿಸರ ಸ್ನೇಹಿ ಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಇದೀಗ ಬಾಲಿವುಡ್​ ನಟಿಯರು ಬೀಚ್​  ಶುಚಿಗೊಳಿಸಿದ್ದಾರೆ.

    ಇತ್ತೀಚಿನ ಈವೆಂಟ್​​ವೊಂದರ ಮೂಲಕವಾಗಿ ಮಿಥಿ ನದಿಯ ದಡವನ್ನು ಸ್ವಚ್ಛಗೊಳಿಸಲು BMC ಭಾಮ್ಲಾ ಫೌಂಡೇಶನ್ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ. ಸ್ವಚ್ಛತಾ ಅಭಿಯಾನದಲ್ಲಿ ಸೋಫಿ ಚೌದ್ರಿ, ಫಾತಿಮಾ ಸನಾ ಶೇಖ್, ಇಶಾ ಡಿಯೋಲ್ ಮತ್ತು ಕರಿಷ್ಮಾ ಸೇರಿದಂತೆ ಜನಪ್ರಿಯ ನಟಿಯರ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು.

    ಈ ವೇಳೆ ಮಾತನಾಡಿದ ನಟಿಯರು, ಬೀಚ್ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದಲ್ಲದೆ, ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಕಸ ಹಾಕುವುದನ್ನು ತಡೆಯಲು ಅಮೂಲ್ಯ ಸಲಹೆಗಳನ್ನು ನೀಡಿ ಸ್ವಚ್ಛತೆಯ ಮಹತ್ವವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೆಗಾ ಮಿಥಿ ರಿವರ್ ಕ್ಲೀನ್-ಎ-ಥೋನ್ ಕಾರ್ಯಕ್ರಮದ ವಿಡಿಯೋವನ್ನು ಸಂಘಟಕರು ಕೂಡ ಹಂಚಿಕೊಂಡಿದ್ದಾರೆ.

    View this post on Instagram

    A post shared by Voompla (@voompla)

    ‘ನಾವು ತ್ಯಾಜ್ಯ ಮಾಲಿನ್ಯದ ವಿರುದ್ಧ ನಿಂತಾಗ ಯಾವುದೇ ಮಳೆ ಯಾವುದೇ ಚಂಡಮಾರುತವು ನಮ್ಮನ್ನು ತಡೆಯುವುದಿಲ್ಲ. ವಿಶ್ವ ಸ್ವಚ್ಛತಾ ದಿನದಂದು ನಾವು ಇಲ್ಲಿಯವರೆಗಿನ ಅತಿದೊಡ್ಡ ಕ್ಲೀನಥಾನ್‌ನಲ್ಲಿ ಮಿಥಿಯನ್ನು ಸ್ವಚ್ಛಗೊಳಿಸಿದ್ದೇವೆ. 2000 ಕ್ಕೂ ಹೆಚ್ಚು ಪರಿಸರ ಚಾಂಪಿಯನ್‌ಗಳೊಂದಿಗೆ, ನಾವು ಅದನ್ನು ಸ್ವಚ್ಛಗೊಳಿಸುವ ಪಣತೊಟ್ಟಿದ್ದು, ಅದು ಯಶಸ್ವಿಯಾಗಿದೆ. 450 ವಾರಗಳ ಬೀಚ್ ಕ್ಲೀನ್-ಅಪ್‌ಗಳನ್ನು ಪೂರ್ಣಗೊಳಿಸಿದ್ದೇವೆ’ ಎಂದಿದ್ದಾರೆ ಸಂಘಟಕರು.

    ಕಿಡ್ನಿ ಫೇಲ್ ಆಗಿತ್ತು,​ ವೈದ್ಯರು 3 ತಿಂಗಳ ಗಡುವು ನೀಡಿದ್ದರೆಂದು ಕಣ್ಣೀರಿಟ್ಟ ನಟಿ ಶೆರ್ಲಿನ್​ ಚೋಪ್ರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts