3ನೇ ಮಗುವಿಗೆ ತಾಯಿಯಾಗಲಿದ್ದಾರಾ ಕರೀನಾ!: ಈ ಫೋಟೋ ಹೇಳೋದೇನು?

kareenakapoor
Published on

ಲಂಡನ್​: ಬಾಲಿವುಡ್​​ನಲ್ಲಿ​ ಬೇಬೋ ಎಂದೇ ಕರೆಸಿಕೊಂಡಿರುವ ಕರೀನಾ ಕಪೂರ್​ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಮಕ್ಕಳ ಬಗ್ಗೆಯೇ ಕರೀನಾ ಪ್ರಚಾರದಲ್ಲಿರುತ್ತಾರೆ.

ಇಬ್ಬರು ಗಂಡುಮಕ್ಕಳ ತಾಯಿಯಾಗಿರುವ ಕರೀನಾ ಈಗ ತನ್ನ ಅಭಿಮಾನಿಗಳಿಗೆ ಮತ್ತೊಂದು ಸುದ್ದಿಯನ್ನು ನೀಡಿದ್ದಾರೆ. ಸದ್ಯ ಲಂಡನ್​ ಪ್ರವಾಸದಲ್ಲಿರುವ ಕರೀನಾ ಹಂಚಿಕೊಂಡಿರುವ ಫೋಟೋ ಈ ಎಲ್ಲಾ ಅನುಮಾನಗಳನ್ನು ಹುಟ್ಟುಹಾಕಿದೆ.

ಕರೀನಾ ಮತ್ತೆ ತಾಯಿಯಾಗುತ್ತಿದ್ದಾರೆಯೇ..3ನೇ ಬಾರಿ ಗರ್ಭಿಣಿಯಾಗಿದ್ದಾರೆ ಎಂಬ ಬಗ್ಗೆ ಇತ್ತೀಚೆಗೆ ಭಾರೀ ಚರ್ಚೆ ನಡೆಯುತ್ತಿದೆ. ಇಂತಹ ಚರ್ಚೆಗೆ ಪುಷ್ಟಿ ನೀಡುವಂತೆ ಕರೀನಾ ತನ್ನ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋ ನಿಜವಿರಬಹುದೇ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ಸಹೋದರಿ ಕರೀಷ್ಮಾ  ಜತೆ ಸ್ನೇಹಿತೆಯರೊಂದಿಗಿರುವ ಫೋಟೋದಲ್ಲಿ ಕರೀನಾ ತಮ್ಮ ಹೊಟ್ಟೆಯನ್ನು ಮರೆಮಾಚಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಮಾತ್ರ ಶಾಕ್​ ಆಗಿದ್ದಾರೆ. ಇನ್ನೊಂದು ಚಿತ್ರದಲ್ಲಿ ತನ್ನ ಪತಿ ಸೈಫ್​ ಅಲಿ ಖಾನ್​ ಹಾಗೂ ಸ್ನೇಹಿತನ ಜತೆ ಹಂಚಿಕೊಂಡಿರುವ ಚಿತ್ರದಲ್ಲಿ ಕರೀನಾ ಗರ್ಭಿಣಿಯೇ ಇರಬಹುದು ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಏನೇ ಆದರೂ ಈ ಬಗ್ಗೆ ಕರೀನಾ ಸ್ಪಷ್ಟನೆ ನೀಡಬೇಕಿದೆ. ಸದ್ಯ ಅಭಿಮಾನಿಗಳು ಮಾತ್ರ ಗೊಂದಲದಲ್ಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net