6 ತಿಂಗಳ ಹಿಂದಷ್ಟೇ ಸಂಚಾರಕ್ಕೆ ಮುಕ್ತವಾಗಿದ್ದ ಕೆಳಸೇತುವೆಯ ರಸ್ತೆ ತಡೆಗೋಡೆ ಕುಸಿತ: ವಾಹನ ಸವಾರರ ಪರದಾಟ!

Bridgewall
Published on

ಬಾಗಲಕೋಟೆ: ನಿರಂತರ ಮಳೆಯಿಂದಾಗಿ ಕೆಳಸೇತುವೆಯ ರಸ್ತೆ ತಡೆಗೋಡೆ ಕುಸಿದಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿದೆ.

ಜಿಲ್ಲೆಯ ಬಾದಾಮಿ ತಾಲೂಕಿನ ಗೋವನಕೊಪ್ಪ-ಗದಗ ಜಿಲ್ಲೆ ಕೊಣ್ಣೂರ ಮಧ್ಯದ ಹಳ್ಳದ ಸೇತುವೆಯ ತಡೆಗೋಟೆ ಕುಸಿದಿರುವುದರಿಂದ ಜನರು ಪರದಾಡುವಂತಾಗಿದೆ.

ಎರಡು ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಸೇತುವೆ ಇದಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕೆಳಸೇತುವೆ ನಿರ್ಮಾಣಕ್ಕೆ ಅನುಮತಿ ದೊರೆತಿತ್ತು, ಆರು ತಿಂಗಳ ಹಿಂದೆಯಷ್ಟೇ ಕಾಮಗಾರಿ ಮುಗಿದು ಸಂಚಾರಕ್ಕೆ ಮುಕ್ತವಾಗಿತ್ತು.

ಸದ್ಯ ಗೋವನಕೊಪ್ಪ-ಕೊಣ್ಣುರು ಸಂಪರ್ಕ ಕಡಿತಗೊಂಡಿದ್ದು, ಕಳಪೆ ಕಾಮಗಾರಿಯಿಂದಲೇ ಈ ಸೇತುವೆ ತಡೆಗೋಡೆ ಕುಸಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net