ಕರೋಕೆ ಟ್ರಾಕ್ ಗೀತ ಗಾಯನ ಸ್ಪರ್ಧೆ

karoke
Published on

ಗಂಗೊಳ್ಳಿ: ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲ ನಾಯಕವಾಡಿ ಗುಜ್ಜಾಡಿ ಸುವರ್ಣ ಮಹೋತ್ಸವದ ಅಂಗವಾಗಿ ಅಂತರ್ ಜಿಲ್ಲಾ ಮಟ್ಟದ ಕರೋಕೆ ಟ್ರಾೃಕ್ ಗೀತ ಗಾಯನ ಸ್ಪರ್ಧೆ ಗಾನ ಸಂಭ್ರಮ 2025ರ ಫೈನಲ್ ಸ್ಪರ್ಧೆ ಇತ್ತೀಚೆಗೆ ಸುವರ್ಣ ಸಂಗಮ ವೇದಿಕೆಯಲ್ಲಿ ನಡೆಯಿತು.

ಸರಿಗಮಪ ಖ್ಯಾತಿ ಗಾಯಕರಾದ ಕಂಬದ ರಂಗಯ್ಯ ಮತ್ತು ಪ್ರಥ್ವಿ ಭಟ್ ಹಾಗೂ ಸ್ಟಾರ್ ಸಿಂಗರ್ ಖ್ಯಾತಿ ವಿನುಷ್ ಭಾರದ್ವಾಜ್ ತೀರ್ಪುಗಾರರಾಗಿ ಭಾಗವಹಿಸಿದ್ದರು. ಸರಿಗಮಪ ಖ್ಯಾತಿ ಗಾಯಕರಾದ ಶಿವಾನಿ ಮತ್ತು ರಜತ್ ಮಯ್ಯ ಹಾಗೂ ಎದೆ ತುಂಬಿ ಹಾಡಿದೆನು ಖ್ಯಾತಿಯ ಪಲ್ಲವಿ ಪ್ರಭು ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.

ನಿರೂಪಕ, ಗಾಯಕ ನವೀನ್ ಚಂದ್ರ ಕೊಪ್ಪ ಅವರನ್ನು ಸನ್ಮಾನಿಸಲಾಯಿತು. ಗಾನ ಸಂಭ್ರಮ ಸ್ಪರ್ಧೆಯಲ್ಲಿ ಮೋಹನ್ ಸಾಗರ್ ಪ್ರಥಮ ಬಹುಮಾನ, ರಾಜೇಶ್ ಪ್ರಭು ಹೆಬ್ರಿ ದ್ವಿತೀಯ ಸ್ಥಾನ ಮತ್ತು ಅಶ್ವಿಜ್ ಸುಳ್ಯ ತೃತೀಯ ಸ್ಥಾನ ಪಡೆದರು.

ಶ್ರೀ ಚನ್ನಬಸವೇಶ್ವರ ಯುವಕ ಮಂಡಲ ಅಧ್ಯಕ್ಷ ಶ್ರೀಧರ್ ಎನ್. ಶುಭ ಹಾರೈಸಿದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ವಕೀಲ ರವಿಕಿರಣ ಮುರುಡೇಶ್ವರ, ಆಯುರ್ವೇದ ವೈದ್ಯೆ ಡಾ.ವೀಣಾ ಕಾರಂತ್, ಎಸ್.ಪಿ. ಮ್ಯೂಸಿಕಲ್‌ನ ರಾಜೇಶ್, ನಾರಾಯಣ ಕೆ.ಗುಜ್ಜಾಡಿ, ನಿತೇಶ್, ರಘುರಾಮ್ ಮೊದಲಾದವರು ಉಪಸ್ಥಿತರಿದ್ದರು.

ವೈಷ್ಣವಿ ಇವೆಂಟ್ಸ್ ಮಾಲೀಕ ಗೋಪಾಲ್ ಚಂದನ್ ಸ್ವಾಗತಿಸಿದರು. ಪ್ರವೀಣ್ ಪೂಜಾರಿ ಮತ್ತು ಪ್ರಶಾಂತ್ ಪೂಜಾರಿ ಸಹಕರಿಸಿದರು. ವಿ.ಜೆ.ಶಶಿಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಭಟ್ಕಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net