More

  ನಾಯಕಿಯಾಗಿ ಆಲಿಯಾ ಭಟ್​ನ ಬೇಡ ಎಂದಿದ್ದರಂತೆ ಈ ಇಬ್ಬರು ಸ್ಟಾರ್ ನಟರು!; ಕರಣ್​ನಿಂದ ಹೊರಬಿತ್ತು ಅಚ್ಚರಿ ಸಂಗತಿ

  ಮುಂಬೈ: ಬಾಲಿವುಡ್​ನ ಖ್ಯಾತ ನಿರ್ದೇಶಕ, ನಿರೂಪಕ ಕರಣ್​ ಜೋಹರ್​ ಇದೀಗ ತಮ್ಮ ಅತ್ಯಂತ ಯಶಸ್ವಿ ಕಾರ್ಯಕ್ರಮವಾದ ‘ಕಾಫಿ ವಿತ್​ ಕರಣ್​’ 8ನೇ ಸೀಸನ್​ಗೆ ಹೆಜ್ಜೆಯಿಟ್ಟಿದ್ದು, ಐದನೇ ಸಂಚಿಕೆಗೆ ಬಿ ಟೌನ್​ನ ಇಬ್ಬರು ಸ್ಟಾರ್ ಹೀರೋಗಳನ್ನು​ ಕಾರ್ಯಕ್ರಮದ ಅತಿಥಿಗಳಾಗಿ ಆಹ್ವಾನಿಸಿದರು. ಈ ವೇಳೆ ನಟರೊಂದಿಗಿನ ಸಂಭಾಷಣೆಗಿಂತ ತಮ್ಮ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾವೊಂದರ ಕುತೂಹಲಕಾರಿ ಸಂಗತಿಯನ್ನು ವೀಕ್ಷಕರ ಮುಂದೆ ಬಿಚ್ಚಿಟ್ಟಿದ್ದಾರೆ.

  ಇದನ್ನೂ ಓದಿ: ನವೆಂಬರ್ 28ರಂದು ಆಧುನಿಕ ಬೇಸಾಯ ತಾಂತ್ರಿಕತೆ ಕುರಿತು ವಿಚಾರ ಸಂಕಿರಣ

  ‘ಕಾಫಿ ವಿತ್​ ಕರಣ್’​ ಸೀಸನ್​ 08ರ ಐದನೇ ಸಂಚಿಕೆಗೆ ಬಾಲಿವುಡ್​ನ ಸ್ಟಾರ್​ ನಟರಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ವರುಣ್ ಧವನ್‌ ಆಗಮಿಸಿದ್ದರು. ಈ ವೇಳೆ ಇಬ್ಬರೊಂದಿಗೆ ಹಲವಾರು ವಿಷಯಗಳನ್ನು ಚರ್ಚಿಸಿದ ಕರಣ್​, ತಾವೇ ನಿರ್ದೇಶಿಸಿದ ಸೂಪರ್​ ಹಿಟ್​ ‘ಸ್ಟೂಡೆಂಟ್​ ಆಫ್ ದಿ ಇಯರ್’​ ಸಿನಿಮಾ ಬಗ್ಗೆ ಕೂಡ ಮಾತನಾಡಿದರು. ಆಗ ಹೊರಬಂದಿದ್ದೇ ಚಿತ್ರದ ನಾಯಕಿಯಾಗಿ ಮಿಂಚಿದ ನಟಿ ಆಲಿಯಾ ಭಟ್​ ಅವರ ವಿಚಾರ!

  ಕರಣ್ ಜೋಹರ್​ ನಿರ್ದೇಶನದ ‘ಸ್ಟೂಡೆಂಟ್​ ಆಫ್​ ದಿ ಇಯರ್’​ ಚಿತ್ರಕ್ಕೆ ಇಬ್ಬರು ನಾಯಕರಾಗಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ವರುಣ್ ಧವನ್ ಅವರನ್ನು ಆಯ್ಕೆ ಮಾಡಿದ್ದು, ನಾಯಕಿ ಪಾತ್ರಕ್ಕೆ ಆಲಿಯಾ ಅವರನ್ನು ಕರೆಯಲಾಗಿತ್ತು. “ಸಿನಿಮಾ ಚಿತ್ರೀಕರಣದ ಸೆಟ್‌ನಲ್ಲಿ ಆಲಿಯಾ ಭಟ್ ಅವರನ್ನು ನೋಡಿದ ವರುಣ್-ಸಿದ್ಧಾರ್ಥ್ ಮೊದಲಿಗೆ​ ಖುಷಿ ವ್ಯಕ್ತಪಡಿಸಲಿಲ್ಲ. ಕಾರಣ ಆಲಿಯಾ ತುಂಬಾ ಚಿಕ್ಕವಳಾಗಿರುವುದರಿಂದ ಹೀರೋಯಿನ್​ ಆಗಲು ಸಾಧ್ಯವಿಲ್ಲ ಎಂದು ಇಬ್ಬರು ನನಗೆ ಸಂದೇಶ ಕಳುಹಿಸಿದ್ದರು” ಎಂದು ಕರಣ್ ಹೇಳಿದರು.

  ಇದನ್ನೂ ಓದಿ:  ಹಾರ್ನ್ ನಿಷೇಧಿತ ಪ್ರದೇಶ ಘೋಷಣೆ, ಮಂಗಳೂರು ನಗರದಲ್ಲಿ ಆರು ಕಡೆ ನೋ ಹಾರ್ನ್

  ಈ ಘಟನೆಯನ್ನು ಹಾಸ್ಯಮಯವಾಗಿ ಬಹಿರಂಗಪಡಿಸಿದ ಕರಣ್​, “ನಾಯಕಿಯಾಗಿ ಆಲಿಯಾ ಬೇಡ ಎಂದು ಇಬ್ಬರೂ ಸ್ಟಾರ್‌ಗಳು ನಿರಾಕರಿಸಿದರು. ಆಗ ವರುಣ್​ ತಮಗೆ ಗೊತ್ತಿರುವ ಹುಡುಗಿಯರ ಫೋಟೋ ತೋರಿಸಿ ಆಲಿಯಾ ಬದಲಿಗೆ ಇವರನ್ನು ನಟಿಯಾಗಿ ಆಯ್ಕೆ ಮಾಡಬಹುದು ಎಂದು ಹೇಳಿದರು. ಆದ್ರೆ, ನಾನು ಇದಕ್ಕೆ ಒಪ್ಪಲಿಲ್ಲ” ಎಂದು ಕರಣ್​ ತಮ್ಮ ಚಿತ್ರದ ಬಗ್ಗೆ ಹೇಳದ ಒಂದು ಸಂಗತಿಯೊಂದನ್ನು ಕಾರ್ಯಕ್ರಮದಲ್ಲಿ ಬಹಿರಂಗಗೊಳಿಸಿದರು,(ಏಜೆನ್ಸೀಸ್).

  ಸುಪ್ರೀಂಕೋರ್ಟ್ ಎಚ್ಚರಿಕೆ ಬೆನ್ನಲ್ಲೇ ತ್ವರಿತ ರೈಲು ಯೋಜನೆಗೆ 415 ಕೋಟಿ ರೂ. ಬಿಡುಗಡೆಗೊಳಿಸಿದ ದೆಹಲಿ ಸರ್ಕಾರ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts