'ಕರಾಚಿ'ಯೂ ಭಾರತದ ಭಾಗವಾಗಲಿದೆ - ದೇವೇಂದ್ರ ಫಡ್ನಾವಿಸ್

devendra fadnavis
Published on

ನಾಗಪುರ: ಶಿವಸೇನಾ ನಾಯಕ ನಿತಿನ್ ನಂದಗಾಂವ್ಕರ್ ಫೇಸ್​ಬುಕ್​ ವಿಡಿಯೋದಲ್ಲಿ 'ಕರಾಚಿ ಸ್ವೀಟ್ಸ್/ಕರಾಚಿ ಬೇಕರಿ' ಹೆಸರು ಬದಲಾಯಿಸುವಂತೆ 15 ದಿನಗಳ ಗಡುವು ನೀಡಿರುವುದು ರಾಜಕೀಯವಾಗಿ ಸದ್ದು ಉಂಟುಮಾಡಿದೆ. ಅವರ ವಿಡಿಯೋ ಅಪ್ಲೋಡ್ ಆದ ಕೆಲವೇ ಗಂಟೆಗಳಲ್ಲಿ ಶಿವಸೇನೆ ಅದು ಪಕ್ಷದ ನಿಲುವಲ್ಲ, ನಿತಿನ್ ಅವರ ವೈಯಕ್ತಿಕ ನಿಲುವು ಎಂದು ಅಂತರ ಕಾಯ್ದುಕೊಂಡಿತ್ತು.

ಈ ಬಗ್ಗೆ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನಾವೀಸ್ ಪ್ರತಿಕ್ರಿಯಿಸಿದ್ದು, 'ಕರಾಚಿ'ಯೂ ಭಾರತದ ಭಾಗವಾಗಲಿದೆ ಎಂದು ವಿರೋಧಿಗಳ ಕಣ್ಣು ಕೆಂಪಾಗುವಂತೆ ಮಾಡಿದ್ದಾರೆ. ನಿತಿನ್ ಗಾಂವ್ಕರ್ ಮುಂಬೈನ ಬಾಂದ್ರಾದಲ್ಲಿರುವ ಕರಾಚಿ ಸ್ವೀಟ್ಸ್ ಶಾಪ್​ಗೆ ತೆರಳಿ ಕರಾಚಿ ಪಾಕಿಸ್ಥಾನದ ನಗರವಾಗಿದ್ದು, ಅದನ್ನು ಬದಲಾಯಿಸಿ ಎಂದು ಹದಿನೈದು ದಿನಗಳ ಗಡುವು ನೀಡಿದ್ದು ವಿಡಿಯೋದಲ್ಲಿ ದಾಖಲಾಗಿದೆ.

ಈ ವಿಚಾರವಾಗಿ ಪ್ರತಿಕ್ರಿಯಿಸಿದ ದೇವೇಂದ್ರ ಫಡ್ನಾವೀಸ್, ಅಖಂಡ ಭಾರತದ ಪರಿಕಲ್ಪನೆಯಲ್ಲಿ ನಂಬಿಕೆ ಉಳ್ಳವರು ನಾವು. ಅದೇ ರೀತಿ ಕರಾಚಿಯೂ ಭಾರತದ ಭಾಗವಾಗಿರಲಿದೆ ಎಂದೂ ನಂಬಿದ್ದೇವೆ ಎಂದು ಕುಟುಕು ಪ್ರತಿಕ್ರಿಯೆ ನೀಡಿ ಗಮನಸೆಳೆದ್ದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net