More

    ಶುರುವಾಯಿತು ಕಪಿಲ್​ ಶರ್ಮ ಶೋ ಶೂಟಿಂಗ್​ … ಹೊಸ ಎಪಿಸೋಡ್​ಗಳ ಪ್ರಸಾರ ಯಾವಾಗ?

    ಲಾಕ್​ಡೌನ್​ ನಂತರ ಕೆಲವು ರಾಜ್ಯಗಳಲ್ಲಿ ಸಿನಿಮಾ ಮತ್ತು ಧಾರಾವಾಹಿಗಳ ಶೂಟಿಂಗ್​ಗೇನೋ ಅನುಮತಿ ನೀಡಲಾಗಿದೆ. ಆದರೆ, ಇದುವರೆಗೂ ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೆ ಅನುಮತಿ ಕೊಟ್ಟಿರಲಿಲ್ಲ. ಈಗ ಅನುಮತಿ ಸಿಗುತ್ತಿದ್ದಂತೆಯೇ ‘ದಿ ಕಪಿಲ್​ ಶರ್ಮ ಶೋ’ ಕಾರ್ಯಕ್ರಮಕ್ಕೆ ಚಿತ್ರೀಕರಣ ಪ್ರಾರಂಭವಾಗಿದೆ.

    ಇದನ್ನೂ ಓದಿ: ಸುಶಾಂತ್​ ಆತ್ಮಹತ್ಯೆ: ವಿಚಾರಣೆಗೆ ಹಾಜರಾದ ಆದಿತ್ಯ ಚೋಪ್ರಾ

    ಇಂದು ಬೆಳಿಗ್ಗೆಯಿಂದ ಈ ಕಾರ್ಯಕ್ರಮದ ಚಿತ್ರೀಕರಣ ಪ್ರಾರಂಭವಾಗಿದ್ದು, ಕಪಿಲ್​ ಶರ್ಮ ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​ನ ಮೂಲಕ, ಕಾರ್ಯಕ್ರಮದ ಚಿತ್ರೀಕರಣ ಪ್ರಾರಂಭವಾಗುತ್ತಿರುವ ಸಿಹಿಸುದ್ದಿಯನ್ನು ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಕಲಾವಿದರೆಲ್ಲಾ ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕಿಂತ ಮುನ್ನ ಹಲವು ಪರೀಕ್ಷೆಗಳಿಗೆ ಒಳಪಡುತ್ತಿರುವ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೆ ಅನುಮತಿ ಸಿಗುವುದಕ್ಕಿಮತ ಮುನ್ನವೇ, ಕಪಿಲ್​ ಶರ್ಮ ತಮ್ಮ ತಂಡದವರಿಗೆ ಚಿತ್ರೀಕರಣಕ್ಕೆ ರೆಡಿಯಾಗುವಂತೆ ಸೂಚನೆ ನೀಡಿದ್ದರು. ಕಲಾವಿದರೆಲ್ಲಾ ತಯಾರಿಯಲ್ಲಿ ತೊಡಗಿಸಿಕೊಂಡಿದ್ದರು.. ಈಗಾಗಲೇ ಕಪಿಲ್​, ಕೃಷ್ಣ ಅಭಿಷೇಕ್​, ಭಾರತೀ ಸಿಂಗ್​, ಚಂದನ್​ ಪ್ರಭಾಕರ್​, ಕಿಕು ಶಾರದಾ ಮುಂತಾದವರು ವಿಡಿಯೋ ಕಾನ್ಪರೆನ್ಸಿಂಗ್​ ಮೂಲಕ ರಿಹರ್ಸಲ್​ ಸಹ ಶುರು ಮಾಡಿದ್ದರು ಎಂದು ಹೇಳಲಾಗುತ್ತಿದೆ.

    ಈ ಬಾರಿ ಸಹ ನಗುವುದಕ್ಕೆ ಮತ್ತು ನಗಿಸುವುದಕ್ಕೆ ಅರ್ಚನಾ ಪೂರಣ್​ ಸಿಂಗ್​, ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಅದಲ್ಲದೆ ಪ್ರತಿ ಕಂತಿನಲ್ಲೂ ಒಂದೊಂದು ಚಿತ್ರತಂಡ ಅಥವಾ ಸೆಲೆಬ್ರಿಟಿ ವಿಶೇಷ ಅತಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಮೊದಲ ಅತಿಥಿಯಾಗಿ ಸೋನು ಸೂದ್​ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ, ಮನೋಜ್​ ಬಾಜ್ಪೇಯಿ ಸಹ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಒಪ್ಪಿಕೊಂಡಿದ್ದು, ಸದ್ಯದಲ್ಲೇ ಅವರು ಸಹ ಚಿತ್ರೀಕರಣದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

    ಇದನ್ನೂ ಓದಿ: PHOTOS: ಗ್ಲಾಮರಸ್ ಅವತಾರದಲ್ಲಿ ‘ರಾಬರ್ಟ್’​ ನಾಯಕಿ ಆಶಾ ಭಟ್ ಫೋಟೋ ಝಲಕ್…

    ‘ದಿ ಕಪಿಲ್​ ಶರ್ಮ’ ಶೋನ ಚಿತ್ರೀಕರಣವೇನೋ ಶುರುವಾಗಿದೆ. ಆದರೆ, ಹೊಸ ಎಪಿಸೋಡು ಯಾವಾಗಿನಿಂದ ಪ್ರಸಾರವಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಿಲ್ಲ. ಈ ಬಗ್ಗೆ ಚರ್ಚೆಗಳಾಗುತ್ತಿದ್ದು, ಬಹುಶಃ ಆಗಸ್ಟ್​ ಮೊದಲ ವಾರದಿಂದ ಹೊಸ ಕಂತುಗಳು ಪ್ರಸಾರವಾಗುವ ಸಾಧ್ಯತೆ ಇದೆ.

    ಐ ಆಮ್​ ಇನ್​ ಲವ್​ … ಯಾರ ಜತೆಗೆ ಅಂತ ಕೇಳಬೇಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts