ವಿಜಯವಾಣಿ ಸುದ್ದಿಜಾಲ ಹೆಬ್ರಿ
ಎಲ್ಲ ಸದಸ್ಯರು ಪಣತೊಟ್ಟು ಹಾಲು ಹೆಚ್ಚಳ ಮಾಡಲು ಸೂಕ್ತ ಕ್ರಮ ವಹಿಸಬೇಕು ಎಂದು ಕನ್ಯಾನ ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷ ಲಕ್ಷ್ಮೀನಾರಾಯಣ್ ನಾಯಕ್ ಕನ್ಯಾನ ಹೇಳಿದರು.
ಕನ್ಯಾನ ಹಾಲು ಉತ್ಪಾದಕರ ಸಹಕಾರಿ ಸಂಘ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು
ಹಿರಿಯ ಆರೋಗ್ಯ ಸಹಾಯಕಿ ರಾಧಿಕಾ ಕಾಲರಾ, ಡೆಂೆ ನಿಯಂತ್ರಣದ ಮಾಹಿತಿ ನೀಡಿದರು.
ವಿಸ್ತರಣಾಧಿಕಾರಿ ಮಂಜುನಾಥ್, ನಿರ್ದೇಶಕರಾದ ಪ್ರಕಾಶ್ ಶೆಟ್ಟಿ, ಗಣಪತಿ ಶೆಟ್ಟಿ, ರಮೇಶ್ ಶೆಟ್ಟಿ, ನಾರಾಯಣ ಪ್ರಭು, ಚೆನ್ನಯ್ಯ ಪೂಜಾರಿ, ಕೆ.ಎಸ್.ನರಸಿಂಹ, ಪ್ರವೀಣ ಶೆಟ್ಟಿ, ಕೃಷ್ಣ ನಾಯ್ಕ, ಸುಶೀಲಾ ಶೆಟ್ಟಿ, ಬೇಬಿ ಪೂಜಾರ್ತಿ, ಸಿಇಒ ಅರುಣ್ ಶೆಟ್ಟಿ ಕನ್ಯಾನ, ಸಿಬ್ಬಂದಿ ದೀಪಾ ಸಿ.ಶೆಟ್ಟಿ, ಸುಮಿತ್ರಾ ಇದ್ದರು. ಉಪಾಧ್ಯಕ್ಷ ಜಯಕರ ಪೂಜಾರಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರುಣ್ ಶೆಟ್ಟಿ ಕನ್ಯಾನ ನಿರೂಪಿಸಿದರು.