ಕುಮಟಾದಲ್ಲಿ ಕನ್ಯಾಡಿ ಶ್ರೀ ಚಾತುರ್ಮಾಸ್ಯ ವ್ರತಾಚರಣೆ

New Project (16)
Published on

ಬೆಳ್ತಂಗಡಿ: ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ 1008 ಮಹಾಮಂಡಲೇಶ್ವರ ಸದ್ಗುರು ಬ್ರಹ್ಮಾನಂದ ಸರಸ್ವತಿ ಜೀ ಮಹಾರಾಜ್ ಅವರ 6ನೇ ವರ್ಷದ ಚಾರ್ತುಮಾಸ್ಯ ವ್ರತಾಚರಣೆ ಉತ್ತರ ಕನ್ನಡದ ಕುಮಟಾದ ಕೋನಳ್ಳಿ ಶ್ರೀ ವನದುರ್ಗಾ ದೇವಾಲಯದಲ್ಲಿ ಗುರುವಾರ ಪ್ರಾರಂಭಗೊಂಡಿತು.

ಸಚಿವ ಮಂಕಾಳ್ ಎಸ್.ವೈದ್ಯ ಉದ್ಘಾಟಿಸಿದರು. ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆ ವಹಿಸಿದ್ದರು.

ಬೆಳಗ್ಗೆ ವನದುರ್ಗಾ ದೇವಾಲಯದಲ್ಲಿ ಚಾತುರ್ಮಾಸ್ಯ ವ್ರತ ಸಂಕಲ್ಪ ಪ್ರಯುಕ್ತ ರಾಮತಾರಕ ಯಜ್ಞ ಹಾಗೂ ವೈದಿಕ ವಿಧಿ ವಿಧಾನಗಳು ನೆರವೇರಿತು. ಬಳಿಕ ಕುಮಟಾ ನಾಮಧಾರಿ ಸಭಾಭವನ ಆವರಣದಲ್ಲಿ ವೆಂಕಟರಮಣ ದೇವರಿಗೆ ಪೂಜೆ ಸಲ್ಲಿಸಿ, ಶ್ರೀಗಳ ಪುರಪ್ರವೇಶದ ಮೆರವಣಿಗೆ ಆರಂಭಗೊಂಡು, ವನದುರ್ಗಾದೇವಿಗೆ ವಿಶೇಷ ಪೂಜೆ ನಡೆಯಿತು. ಬಳಿಕ ಶ್ರೀಗಳ ಗುರುಪೂರ್ಣಿಮೆಯ ವ್ಯಾಸ ಪೀಠದ- ಸದ್ಗುರು ಬ್ರಹ್ಮಾನಂದ ಶ್ರೀ ಪೀಠಾರೋಹಣ, ಗುರು ಪಾದುಕಾ ಪೂಜೆ, ಶ್ರೀಗಳ ಆಶೀರ್ವಚನ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಉದ್ಯಮಿ ಕಿರಣ್ ಕುಮಾರ್ ಮಂಜಿಲ, ವೇಣೂರು ಉದ್ಯಮಿ ರಾಜೇಶ್ ಪೂಜಾರಿ ಮೂಡುಕೋಡಿ, ಬಿಜೆಪಿ ಮುಖಂಡ ಸದಾನಂದ ಪೂಜಾರಿ ಉಂಗಿಲಬೈಲು, ಶಿರ್ಲಾಲು ಸಿಎ ಬ್ಯಾಂಕ್ ಅಧ್ಯಕ್ಷ ಸುಧೀರ್ ಆರ್.ಸುವರ್ಣ, ಕಣಿಯೂರು ಶಕ್ತಿಕೇಂದ್ರ ಅಧ್ಯಕ್ಷ ಮಹೇಶ್ ಕೋಟ್ಯಾನ್, ಅಳದಂಗಡಿ ಗ್ರಾಪಂ ಸದಸ್ಯರಾದ ಹರೀಶ್ ಆಚಾರ್ಯ, ರವಿ ಪೂಜಾರಿ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಸಂಸದರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net