More

    ಯೂಟ್ಯೂಬ್​ನಲ್ಲಿ ದಾಖಲೆ ಬರೆದ ಕಾಂತಾರ ಚಾಪ್ಟರ್-1 ಫಸ್ಟ್​ಲುಕ್ ಟೀಸರ್

    ಬೆಂಗಳೂರು: ಕಳೆದ ವರ್ಷ ತೆರೆಕಂಡ ಕಾಂತಾರ ಚಿತ್ರವು ದೇಶ-ವಿದೇಶ ಸೇರಿದಂತೆ ಎಲ್ಲೆಡೆ ದಾಖಲೆ ಸೃಷ್ಟಿಸಿತ್ತು. ಇದೀಗ ಕಾಂತಾರ ಚಾಪ್ಟರ್​-1 ಫಸ್ಟ್​ ಲುಕ್​ ಟೀಸರ್​ ಬಿಡುಗಡೆಯಾಗಿದ್ದು, ಯೂಟ್ಯೂಬ್​ನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.

    ಸೋಮವಾರ (ನವೆಂಬರ್ 27)ದಂದು ಚಿತ್ರದ ಫಸ್ಟ್​ಲುಕ್​ ಟೀಸರ್ ಬಿಡುಗಡೆಯಾಗಿದ್ದು, ಬಿಡುಗಡೆಯಾದ 24 ಘಂಟೆಗಳಲ್ಲಿ 12 ಮಿಲಿಯನ್​ಗಿಂತಲೂ ಅಧಿಕ ವೀಕ್ಷಣೆಗೆ ಒಳಪಟ್ಟಿದೆ. ಅಂದರೆ ಕಾಂತಾರ ಚಾಪ್ಟರ್​-1 ಫಸ್ಟ್​ ಲುಕ್​ ಟೀಸರ್ ಅನ್ನು 1.2 ಕೋಟಿಗೂ ಅಧಿಕ ಜನರು ವೀಕ್ಷಿಸಿದ್ದಾರೆ.

    ಇದನ್ನೂ ಓದಿ: ಡಿಕೆಶಿ ವಿರುದ್ಧದ ಸಿಬಿಐ ಕೇಸ್​ ವಾಪಸ್; ಸರ್ಕಾರದ ಕ್ರಮ ಖಂಡಿಸಿ ಹೈಕೋರ್ಟ್​ ಮೆಟ್ಟಿಲೇರಿದ ಬಿಜೆಪಿ ಶಾಸಕ ಯತ್ನಾಳ್

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಹೊಂಬಾಳೆ ಸಂಸ್ಥೆ ಕಾಂತಾರ ಚಾಪ್ಟರ್​-1 ಫಸ್ಟ್ ಲುಕ್​ ಟೀಸರ್​ 12 ಮಿಲಿಯನ್​ ವೀಕ್ಷಣೆಗೆ ಒಳಪಟ್ಟಿದ್ದು, ನೋಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಾಂತಾರ ಚಾಪ್ಟರ್​-1 ಮೋಡಿ ಮಾಡಿದ್ದು, ಜನರ ಹೃದಯವನ್ನು ಗೆಲ್ಲುತ್ತಿದೆ ಎಂದು ಸಂತಸ ಹಂಚಿಕೊಂಡಿದೆ.

    ಇದಲ್ಲದೆ ಗೂಗಲ್​ ಸಹ ಚಿತ್ರದ ಬಗ್ಗೆ ಹೆಚ್ಚು ಉತ್ಸುಕತೆ ತೋರಿರುವಂತೆ ಕಾಣುತ್ತಿದ್ದು, ಕಾಂತಾರ ಚಾಪ್ಟರ್​-1 ರಿಲೀಸ್​ ಯಾವಾಗ ಎಂದು ಅತಿ ಹೆಚ್ಚು ಬಾರಿ ಸರ್ಚ್​ ಮಾಡಲಾಗಿದೆ ಎಂದು ವರದಿಯಾಗಿದೆ. ಇದರ ಫೋಟೋವನ್ನು ಹಂಚಿಕೊಂಡಿರುವ ಗೂಗಲ್​ 2024 ಮತ್ತಷ್ಟು ಉತ್ಸುಕತೆಯಿಂದ ಕೂಡಿರುತ್ತದೆ. ಈಗಷ್ಟೇ ಕಾಂತಾರ ಟೀಸರ್​ ವೀಕ್ಷಿಸಲಾಗಿದ್ದು, wooooooaaah ಎಂದು ಹೇಳಲು ಬಯಸುವುದಾಗಿ ಬರೆದುಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts