ಕಾಂತಾರ: ಚಾಪ್ಟರ್ 1 ಸಿನಿಮಾದ ಟ್ರೈಲರ್ ಬಿಡುಗಡೆ ದಿನಾಂಕ ಘೋಷಿಸಿದ ಚಿತ್ರತಂಡ | Kantara

untitled-design-2025-09-19t141010361-68cd16f57426f
Published on

Kantara: ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ: ಚಾಪ್ಟರ್ 1’ ಬಿಡುಗಡೆಗೆ ಇನ್ನು ಕೆಲ ದಿನಗಳಷ್ಟೇ ಮಾತ್ರ ಬಾಕಿಯಿದೆ. ಕನ್ನಡ ಸೇರಿ 7 ಭಾಷೆಗಳಲ್ಲಿ ಇದೇ ಅ.2ಕ್ಕೆ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ.

ಅದರೆ ಈವರೆಗೂ ಎರಡು ಪೋಸ್ಟರ್ ಹಾಗೂ ಮೂರು ಪಾತ್ರಗಳನ್ನು ಹೊರತುಪಡಿಸಿ ಸಿನಿಮಾ ತಂಡವು ಈವರೆಗೆ ಯಾವೊಂದು ಮಾಹಿತಿ ಬಿಟ್ಟುಕೊಟ್ಟಿಲ್ಲ. ಇದೀಗ ‘ಕಾಂತಾರ: ಚಾಪ್ಟರ್ 1’ ಟ್ರೈಲರ್ ಬಿಡುಗಡೆಗೆ ದಿನಾಂಕ ನಿಗದಿ ಮಾಡಿದೆ.

ಹೌದು, ‘ಕಾಂತಾರ: ಚಾಪ್ಟರ್ 1’ ಟ್ರೈಲರ್​ ಇದೇ ಸೆ.22ರಂದು ಮಧ್ಹ್ಯಾನ 12.45ಕ್ಕೆ ಬಿಡುಗಡೆಯಾಗಲಿದೆ ಎಂದು ಹೊಂಬಾಳೆ ಅಧಿಕೃತ ಸಾಮಾಜಿಕ ಜಾಲತಾಣ​ ತಿಳಿಸಿದೆ. ಕನ್ನಡ ಸೇರದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಟ್ರೈಲರ್ ಅನ್ನು ನೋಡಬಹುದು.

ಮೊದಲ ಚಿತ್ರದ ಅದ್ಭುತ ಯಶಸ್ಸಿನಿಂದ ಈಗಾಗಲೇ ಸಿನಿಮಾ ಕುರಿತ ಕ್ರೇಜ್ ಹೆಚ್ಚಿದೆ. ಹೀಗಾಗಿಯೇ ಈ ಪ್ರೀಕ್ವೆಲ್ ಬಗ್ಗೆ ಹೆಚ್ಚು ಮಾತನಾಡದೇ, ಬೇರೆ ಬೇರೆ ನಗರಗಳಿಗೆ ತೆರಳಿ ಪಬ್ಲಿಸಿಟಿ ನಡೆಸದೇ, ಮೌನವಾಗಿದ್ದುಕೊಂಡೇ ಕಂಟೆಂಟ್ ಮೂಲಕ ಸಿನಿಮಾ ರಿಲೀಸ್ ಬಳಿಕ ಜನರೇ ಪ್ರಚಾರ ನಡೆಸಲಿ ಎಂಬ ಪ್ಲ್ಯಾನ್ ಚಿತ್ರತಂಡದ್ದು. ಹೀಗಾಗಿಯೇ ಬಹಿರಂಗವಾಗಿ ಚಿತ್ರತಂಡ ಇನ್ನೂ ಪ್ರಚಾರದ ಅಖಾಡಕ್ಕೆ ಇಳಿದಿಲ್ಲ. ಈ ಮಧ್ಯೆ, ಸಾಕಷ್ಟು ಕುತೂಹಲಕಾರಿ ಅಂಶಗಳಿಂದ ಸಿನಿಮಾ ಹೆಚ್ಚು ಪ್ರಚಾರಗಿಟ್ಟಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net