

ಬೆಂಗಳೂರು: ಒಂದು ಕಾಲದಲ್ಲಿ ಯಾವ ಚಿತ್ರ ಯಾವ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತದೆ ಎಂಬ ಕುತೂಹಲ ಪ್ರೇಕ್ಷಕರ ವಲಯದಲ್ಲಿತ್ತು. ಆದರೆ, ಈಗ ಯಾವ ಚಿತ್ರ ಯಾವ ಓಟಿಟಿಯಲ್ಲಿ ಬಿಡುಗಡೆಯಾಗುತ್ತದೆ ಎಂಬ ಕುತೂಹಲ ಜನರಲ್ಲಿ ಹೆಚ್ಚುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಎರಡು ಜನಪ್ರಿಯ ಚಿತ್ರಗಳು ಇದೀಗ ಓಟಿಟಿಯಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಅದೇ 'ಕಾಂತಾರ' ಮತ್ತು 'ಯಶೋದ'.
'ಕಾಂತಾರ' ಚಿತ್ರವು ಈಗಾಗಲೇ ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಿದೆಯಲ್ಲ ಎಂದನಿಸಬಹುದು. ಹೌದು, ಚಿತ್ರವು ಈಗಾಗಲೇ ಪ್ರೈಮ್ನಲ್ಲಿ ಸ್ಟ್ರೀಮ್ ಆಗುತ್ತಿದೆ. ಆದರೆ, ಬರೀ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಮಾತ್ರ ಬಿಡುಗಡೆಯಾಗಿದೆ. ಹಿಂದೆ ಅವತರಣಿಕೆಯ ಹಕ್ಕುಗಳನ್ನ ನೆಟ್ಫ್ಲಿಕ್ಸ್ ಪಡೆದುಕೊಂಡಿದ್ದು, ಡಿ. 9ರ ಶುಕ್ರವಾರದಿಂದ ಚಿತ್ರ ಸ್ಟ್ರೀಮ್ ಆಗಲಿದೆ.
ಇನ್ನು, ಸಮಂತಾ ಅಭಿನಯದ ತೆಲುಗು ಚಿತ್ರವು ನ.11ರಂದು ನ.11ರಂದು ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಿತ್ತು. ಈ ಚಿತ್ರಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುವುದರ ಜತೆಗೆ, ಚಿತ್ರವನ್ನು ನೋಡಿದವರು ಇದು ಸಮಂತಾ ಅಭಿನಯದ ಬೆಸ್ಟ್ ಚಿತ್ರ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈಗ ಈ ಚಿತ್ರವು ಡಿ.9ರಂದು ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗುತ್ತಿದೆ.